ETV Bharat / state

ಕುಷ್ಟಗಿ ಜನರ ನೆಮ್ಮದಿ ಕೆಡಿಸಿದ ಕೊರೊನಾ: ಇಂದು ಮತ್ತೆ 13 ಪ್ರಕರಣ ಪತ್ತೆ - Kushtagi in Koppal district

ಗುರುವಾರ ಒಂದೇ ದಿನ 13 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕುಷ್ಟಗಿ ತಾಲೂಕಿನ ಜನತೆಗೆ ಕೊರೊನಾ ಮಹಾಮಾರಿ ಆತಂಕ ಮೂಡಿಸಿದೆ.

13 Corona cases found in a single day
ಕುಷ್ಟಗಿ ಜನರ ನೆಮ್ಮದಿ ಕೆಡಿಸಿದ ಕೊರೊನಾ: ಒಂದೇ ದಿನದಲ್ಲಿ 13 ಪ್ರಕರಣಗಳು ಪತ್ತೆ
author img

By

Published : Jul 16, 2020, 5:06 PM IST

ಕುಷ್ಟಗಿ(ಕೊಪ್ಪಳ): ಒಂದೆರಡು ದಿನ ಕೊರೊನಾ ಪ್ರಕರಣಗಳಿಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಕುಷ್ಟಗಿ ತಾಲೂಕಿನ ಜನತೆಗೆ ಕೊರೊನಾ ಮಹಾಮಾರಿ ಶಾಕ್ ನೀಡಿದೆ. ಗುರುವಾರ ಒಂದೇ ದಿನ 13 ಪ್ರಕರಣ ಪತ್ತೆಯಾಗಿ ಕುಷ್ಟಗಿ ಜನತೆಗೆ ಆತಂಕ ಮೂಡಿಸಿದೆ.

13 Corona cases found in a single day
ಕುಷ್ಟಗಿ ಜನರ ನೆಮ್ಮದಿ ಕೆಡಿಸಿದ ಕೊರೊನಾ: ಒಂದೇ ದಿನ 13 ಪ್ರಕರಣ ಪತ್ತೆ

ತಾಲೂಕಿನ ಟಕ್ಕಳಕಿ, ಬಳೂಟಗಿ, ಕಂದಕೂರ, ವೀರಾಪುರ, ಅಮರಾಪುರ, ಕಿಲ್ಲಾರಹಟ್ಟಿ, ಗರ್ಜನಾಳ, ಶಾಡ್ಲಗೇರಿ, ಮಾಲಗಿತ್ತಿ, ಹನುಮಸಾಗರದಲ್ಲಿ ತಲಾ ಒಬ್ಬರಿಗೆ ಸೋಂಕು ದೃಢವಾಗಿದೆ. ಸೋಂಕು ದೃಢವಾಗುತ್ತಿದ್ದಂತೆ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಸೋಂಕಿತರ ಮನೆ ಸುತ್ತಲಿನ ರಸ್ತೆ ಸೀಲ್ ​ಡೌನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಹನುಮಸಾಗರ ಠಾಣೆಯ ಪೊಲೀಸ್ ಸಿಬ್ಬಂದಿಗೂ ಕೊರೊನಾ ವಕ್ಕರಿಸಿದೆ. ಈ ಪ್ರಕರಣಗಳಲ್ಲಿ 8 ಮಂದಿ ಸೋಂಕಿತರು ಬೆಂಗಳೂರಿನಿಂದ ಬಂದವರಾಗಿದ್ದಾರೆ. ಜೊತೆಗೆ ತುಮಕೂರು, ಬಳ್ಳಾರಿಯಿಂದ ತಲಾ ಒಬ್ಬೊಬ್ಬರು ಬಂದಿದ್ದಾರೆ. ಮತ್ತೊಬ್ಬರು ಸ್ಥಳೀಯ ಖಾಸಗಿ ಆಸ್ಪತ್ರೆ ಸಿಬ್ಬಂದಿಯಾಗಿದ್ದಾರೆ. ಇನ್ನೊಬ್ಬ ವ್ಯಕ್ತಿ ಅಸ್ಸಾಂ​ನಿಂದ ಸ್ವಗ್ರಾಮಕ್ಕೆ ಬಂದಿದ್ದರು.

ಕಳೆದೆರಡು ದಿನಗಳಿಂದ ತಾಲೂಕಿನಲ್ಲಿ ಸೋನೆ ಮಳೆ ಹಿನ್ನೆಲೆಯಲ್ಲಿ ತಂಪು ವಾತವರಣವಿದ್ದು, ಸಹಜವಾಗಿ ಜನರಲ್ಲಿ ನೆಗಡಿ, ಕೆಮ್ಮು, ಜ್ವರ ಕಾಣಿಸುತ್ತಿದ್ದು ಮತ್ತಷ್ಟು ಭೀತಿ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.