ಕೊಪ್ಪಳ: ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ನಿನ್ನೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 12 ನಾಮಪತ್ರಗಳು ಸಲ್ಲಿಕೆಯಾಗಿವೆ.
ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ್ ಹಾಗೂ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ತಲಾ 2 ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಸರ್ವ ಜನತಾ ಪಾರ್ಟಿಯಿಂದ ಬಿ. ಅನ್ನೋಜಿರಾವ್, ಮಾರ್ಕೆಟ್ ಲೇನಿನಿಸ್ಟ್ ಪಾರ್ಟಿ ಆಫ್ ಇಂಡಿಯಾ (ರೆಡ್ ಫ್ಲಾಗ್)ದಿಂದ ಬಸವಲಿಂಗಪ್ಪ, ಪ್ರಗತಿ ಶೀಲ ಸಮಾಜವಾದಿ ಪಾರ್ಟಿಯಿಂದ ಕಫಿಲುಲ್ ರೆಹಮಾನ್ ಹೆಚ್., ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕಿಸ್ಟ್ ಲೇನಿನಿಸ್ಟ್ ರೆಡ್ ಸ್ಟಾರ್) ದಿಂದ ಹೇಮರಾಜ್ ವೀರಾಪುರ, ಬಹುಜನ ಪಾರ್ಟಿಯಿಂದ ಶಿವಪುತ್ರಪ್ಪ ಮೆಣೆದಾಳ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಇನ್ನು ಮಲ್ಲಿಕಾರ್ಜುನ ಹಡಪದ, ಮೊಮ್ಮದ್ ನಜೀರುದ್ದೀನ್ ಮೂಲಿಮನಿ, ಪಯ ಗಣೇಶ ಹಾಗೂ ಸುರೇಶ್ ಹೆಚ್. ಎಂಬುವವರು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಒಟ್ಟಾರೆಯಾಗಿ 26 ನಾಮಪತ್ರಗಳು ಸಲ್ಲಿಕೆಯಾಗಿವೆ.