ಕೋಲಾರ: ಮದುವೆ ಆಗುವುದಾಗಿ ನಂಬಿಸಿ ಕೈ ಕೊಟ್ಟಿದ್ದ ಪ್ರಿಯಕರನ ಮನೆ ಮುಂದೆ ಯುವತಿಯೋರ್ವಳು ಧರಣಿ ನಡೆಸಿದ ಘಟನೆ ನಗರದಲ್ಲಿ ಜರುಗಿದೆ.
ಶ್ರೀನಿವಾಪುರ ತಾಲೂಕಿನ ಗುಂಡಮನತ್ತ ಗ್ರಾಮದಲ್ಲಿ ಹಾಸನ ಮೂಲದ ಯುವತಿ ಧರಣಿ ಮಾಡುತ್ತಿದ್ದಾಳೆ. ದಿವ್ಯ(ಹೆಸರು ಬದಲಿಸಲಾಗಿದೆ) ಹಾಗೂ ಗುಂಡಮನತ್ತ ಗ್ರಾಮದ ಹರೀಶ್ ಇಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಹರೀಶ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದರೆ, ಅದೇ ಕಂಪನಿಯಲ್ಲಿ ದಿವ್ಯ ಉದ್ಯೋಗಿಯಾಗಿದ್ದಳು.
ಓದಿ: ಚಿಕ್ಕಮಗಳೂರಿಗೆ ಆಗಮಿಸಿದ್ದ ಅಣ್ಣಾಮಲೈ ಜೊತೆ ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದ ಜನ
ಹರೀಶ್, ದಿವ್ಯಳಿಂದ ಸುಮಾರು 5 ಲಕ್ಷ ಹಣ ಪಡೆದಿದ್ದ ಎನ್ನಲಾಗಿದ್ದು, ಇದೀಗ ಕೈಕೊಟ್ಟಿದ್ದಾನೆ ಎಂಬುದು ಯುವತಿಯ ಆರೋಪವಾಗಿದೆ. ಯುವಕನ ಗ್ರಾಮದಲ್ಲಿ ಹರೀಶ್ ಗಾಗಿ ಪಟ್ಟು ಹಿಡಿದಿರುವ ಯುವತಿ, ಹರೀಶ್ ಮನೆ ಮುಂದೆ ಧರಣಿ ಮುಂದುವರೆಸಿದ್ದಾಳೆ. ಶ್ರೀನಿವಾಸಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.