ETV Bharat / state

ವಿಸ್ಟ್ರನ್‌ ಕಂಪನಿಯಲ್ಲಿ ಕಾರ್ಮಿಕರು ಕೆಂಡಾಮಂಡಲ; ಕಾರುಗಳು, ಪೀಠೋಪಕರಣ ಧ್ವಂಸ

author img

By

Published : Dec 12, 2020, 12:31 PM IST

Updated : Dec 12, 2020, 2:47 PM IST

ವೇತನ ನೀಡದ ಹಿನ್ನೆಲೆಯಲ್ಲಿ ಕೋಪಗೊಂಡ ಕಾರ್ಮಿಕರು ವಿಸ್ಟ್ರನ್​​ ಕಂಪನಿ‌ ಮೇಲೆ ಕಲ್ಲು ತೂರಾಟ ನಡೆಸಿ ಕಾರುಗಳಿಗೆ ಬೆಂಕಿ ಇಟ್ಟ ಘಟನೆ ನಡೆದಿದೆ. ತೈವಾನ್‌ ಮೂಲಕ ವಿಸ್ಟ್ರನ್​​ ಕಂಪನಿಯಲ್ಲಿ ಐಫೋನ್‌ಗಳನ್ನು ತಯಾರಿಸಲಾಗುತ್ತಿದೆ.

ವೇತನ ನೀಡಿಲ್ಲ ಎಂದು ಕಂಪೆನಿಗ ಮೇಲೆ ದಾಳಿ ನಡೆಸಿದ ಕಾರ್ಮಿಕರು
Workers attacked company for not paying wages at Kolar

ಕೋಲಾರ: ವೇತನ ನೀಡದ ಕಾರಣಕ್ಕೆ ಕೋಪಗೊಂಡ ಕಾರ್ಮಿಕರು ವಿಸ್ಟ್ರನ್​​ ಕಂಪನಿ‌ ಮೇಲೆ ಕಲ್ಲು ತೂರಾಟ ನಡೆಸಿ ಕಾರುಗಳಿಗೆ ಬೆಂಕಿ ಇಟ್ಟ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಕೇಂದ್ರವಲಯ ಐಜಿ ಸೀಮಂತ್ ಕುಮಾರ್ ಸಿಂಗ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೋಲಾರದ ವಿಸ್ಟ್ರನ್‌ ಕಂಪನಿ ಮೇಲೆ ಕಾರ್ಮಿಕರ ದಾಳಿ

ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯಲ್ಲಿ ಕಾರ್ಮಿಕರು ಕಲ್ಲು, ರಾಡ್​ಗಳಿಂದ ಅಲ್ಲಿದ್ದ ವಸ್ತುಗಳನ್ನು ಪುಡಿಗಟ್ಟಿದ್ದಾರೆ. ಅಷ್ಟೇ ಅಲ್ಲದೆ ಕಂಪನಿಯಲ್ಲಿದ್ದ ಬೆಲೆಬಾಳುವ ಐಫೋನ್, ಲ್ಯಾಪ್​​ಟಾಪ್ ಸೇರಿದಂತೆ ಸಾಕಷ್ಟು ಉಪಕರಣಗಳನ್ನು ಒಡೆದು ಹಾಕಿದ್ದು, ಕೆಲವನ್ನು ಕೊಂಡೊಯ್ದಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಸ್ಥಳಕ್ಕೆ ಕೇಂದ್ರವಲಯ ಐಜಿ ಸೀಮಂತ್ ಕುಮಾರ್ ಸಿಂಗ್ ಆಗಮಿಸಿರುವುದು

ಸುಮಾರು 11 ಸಾವಿರ ಕಾರ್ಮಿಕರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ನಮಗೆ ವೇತನ ನೀಡಿಲ್ಲ ಎಂಬ ಕಾರಣಕ್ಕೆ ಕೆಂಡಾಮಂಡಲರಾದ ಕಾರ್ಮಿಕರು ಈ ಕೃತ್ಯ ಎಸಗಿದ್ದಾರೆ.

Last Updated : Dec 12, 2020, 2:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.