ETV Bharat / state

ವಿಸ್ಟ್ರಾನ್​ನಿಂದ ಸಿಹಿಸುದ್ದಿ: ಮತ್ತೆ ಕಾರ್ಯಾರಂಭ ಮಾಡಲು ಕಂಪನಿ ತಯಾರಿ

ವಿಸ್ಟ್ರಾನ್​ ಕಂಪನಿ ಮೇಲೆ ಕಾರ್ಮಿಕರು ದಾಂಧಲೆ ನಡೆಸಿ ಐದು ದಿನಗಳ ನಂತರ ಒಂದು ಆಶಾದಾಯಕ ಬೆಳವಣಿಗೆ ಕಂಡು ಬಂದಿದೆ. ವಿಸ್ಟ್ರಾನ್​ ಕಂಪನಿ ಶೀಘ್ರವಾಗಿ ನರಸಾಪುರದಲ್ಲಿ ಕಾರ್ಯಾರಂಭ ಮಾಡುವುದಾಗಿ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದೆ.

Wistron Company
ವಿಸ್ಟ್ರಾನ್
author img

By

Published : Dec 16, 2020, 10:21 PM IST

ಕೋಲಾರ: ಕಾರ್ಮಿಕರ ದಾಂಧಲೆಗೆ ತುತ್ತಾಗಿದ್ದ ವಿಸ್ಟ್ರಾನ್​ ಕಂಪನಿ ಶೀಘ್ರವಾಗಿ ಕರ್ನಾಟಕದಲ್ಲೇ ತನ್ನ ಕಾರ್ಯಾರಂಭ ಮಾಡಲು ತಯಾರಿ ನಡೆಸುತ್ತಿದೆ. ಆರೋಪಿಗಳಿಂದ ಕಳ್ಳತನವಾದ ಪೋನ್,​ ಲ್ಯಾಪ್​ಟಾಪ್​ಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹಾಗೇ ರಾತ್ರೋ ರಾತ್ರಿ ಕೆಲಸ ಕಳೆದುಕೊಂಡ ಕಾರ್ಮಿಕರು ಕಂಪನಿ ಮತ್ತೆ ಕೆಲಸಕ್ಕಾಗಿ ಗೇಟ್​ ಬಳಿ ನಿಂತು ಎದುರು ನೋಡುತ್ತಿದ್ದಾರೆ.

ವಿಸ್ಟ್ರಾನ್​ ಕಂಪನಿ ಕಾರ್ಯಾರಂಭ ಮಾಡಲು ತಯಾರಿ

ಕಾರ್ಮಿಕರ ದಾಂಧಲೆ ನಂತರ ಶಾಂತವಾಗಿ ಕಂಡುಬಂದ ವಿಸ್ಟ್ರಾನ್​ ಕಂಪನಿ, ಮತ್ತೊಂದೆಡೆ ಕಂಪನಿ ಗೇಟ್​ ಬಳಿ ಕೆಲಸಕ್ಕಾಗಿ ಎದುರು ನೋಡುತ್ತಿರುವ ಕಾರ್ಮಿಕರು, ಮತ್ತೊಂದೆಡೆ ದಾಂಧಲೆ ವೇಳೆ ಕಳುವು ಮಾಡಿ ತಂದು ಬಿಸಾಡಿದ್ದ ಪೋನ್,​ ಲ್ಯಾಪ್​ಟಾಪ್​ಗಾಗಿ ಹುಡುಕಾಡುತ್ತಿರುವ ಪೊಲೀಸರು. ಇದೆಲ್ಲಾ ವಿಸ್ಟ್ರಾನ್​ ಕಂಪನಿ ದಾಂಧಲೆಯ ಅಪ್​ಡೇಟ್ಸ್​.

ಹೌದು ವಿಸ್ಟ್ರಾನ್​ ಕಂಪನಿ ಮೇಲೆ ಕಾರ್ಮಿಕರು ದಾಂಧಲೆ ನಡೆಸಿ ಐದು ದಿನಗಳ ನಂತರ ಒಂದು ಆಶಾದಾಯ ಬೆಳವಣಿಗೆ ಕಂಡು ಬಂದಿದೆ. ವಿಸ್ಟ್ರಾನ್​ ಕಂಪನಿ ಶೀಘ್ರವಾಗಿ ನರಸಾಪುರದಲ್ಲಿ ಕಾರ್ಯಾರಂಭ ಮಾಡುವುದಾಗಿ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದೆ. ಜೊತೆಗೆ ಗಲಾಟೆ ವೇಳೆ ಸರ್ಕಾರ ನೀಡಿದ ನೆರವಿಗೆ ಅಭಿನಂದನೆ ಸಲ್ಲಿಸಿರುವ ಕಂಪನಿ ಪೊಲೀಸರ ಸಹಕಾರಕ್ಕೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.

ಇದನ್ನೂ ಓದಿ: ವಿಸ್ಟ್ರಾನ್​ ಕಂಪನಿಯಲ್ಲಿ ದಾಂಧಲೆ: ನೂರಾರು ಕೋಟಿ ರೂಪಾಯಿ ನಷ್ಟ, 11,500 ಕಾರ್ಮಿಕರು ಬೀದಿ ಪಾಲು

ಇದೇ ವೇಳೆ, ಇಂದು ತೈವಾನ್​ನಿಂದ ತಂಡವೊಂದು ನರಸಾಪುರದ ಕಂಪನಿಗೆ ಭೇಟಿ ನೀಡಿ ದಾಂಧಲೆ ಹಾಗೂ ದಾಂಧಲೆಯಿಂದಾದ ನಷ್ಟದ ಕುರಿತು ಮಾಹಿತಿ ಪಡೆಯುತ್ತಿದೆ. ಇನ್ನು ಇದೇ ವೇಳೆ ರಾತ್ರೋ ರಾತ್ರಿ ಕಂಪನಿಯಲ್ಲಿ ಕೆಲಸ ಕಳೆದುಕೊಂಡ ಕೆಲವು ಕಾರ್ಮಿಕರು ಗೇಟ್​ಬಳಿ ನಿಂತು ಕೆಲಸಕ್ಕಾಗಿ ಎದುರು ನೋಡುತ್ತಿದ್ದ ದೃಶ್ಯಗಳು ಕಂಡು ಬಂದವು.

ಈ ವೇಳೆ ಮಾತನಾಡಿದ ಕಾರ್ಮಿಕನೊಬ್ಬ ಕಂಪನಿ ಕಾರ್ಮಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಿದ್ದರೆ ಇಂಥ ಘಟನೆ ನಡೆಯುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೋಲಾರ: ವಿಸ್ಟ್ರಾನ್ ಕಂಪನಿಗೆ ತೈವಾನ್​ ಅಧಿಕಾರಿಗಳ ತಂಡ ಭೇಟಿ

ಇನ್ನು ವಿಸ್ಟ್ರಾನ್​ ಕಂಪನಿ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 161 ಜನರನ್ನು ಬಂಧಿಸಿರುವ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಶುರು ಮಾಡಿಕೊಂಡಿದ್ದಾರೆ. ಬಂಧಿತರು ದಾಂಧಲೆ ವೇಳೆ ಕಂಪನಿಯಿಂದ ಕಳುವು ಮಾಡಿದ ಮೊಬೈಲ್​ ಫೋನ್​ ಲ್ಯಾಪ್​​ಟ್ಯಾಪ್​ಗಳಿಗಾಗಿ ಕಂಪನಿ ಬಳಿಯ ನೀಲಗಿರಿ ತೋಪಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಈ ವೇಳೆ ಕೆಲವು ಮೊಬೈಲ್​ ಪೋನ್​ ಹಾಗೂ ಲ್ಯಾಪ್​ಟಾಪ್​ಗಳು ಸಿಕ್ಕಿವೆ ಎನ್ನಲಾಗಿದೆ. ಇನ್ನು ದಾಂಧಲೆ ದಿನ ಪ್ರತಿಭಟನೆಗೆ ಕರೆ ನೀಡಿದ್ದ ಎಸ್​ಎಫ್​ಐ ಸಂಘಟನೆ ತಾಲೂಕು ಅಧ್ಯಕ್ಷ ಶ್ರೀಕಾಂತ್​ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಒಟ್ಟಾರೆ ವಿಸ್ಟ್ರಾನ್​ ಕಂಪನಿ ದಾಂಧಲೆ ನಡೆದು ಐದು ದಿನಗಳ ನಂತರ ಕಂಪನಿ ಮತ್ತೆ ಶೀಘ್ರವಾಗಿ ತನ್ನ ಕಾರ್ಯಾರಂಭ ಮಾಡುವುದಾಗಿ ಹೇಳುವ ಮೂಲಕ ಆಶಾಭಾವನೆ ಮೂಡಿಸಿದೆ. ಎಲ್ಲಿ ಕೆಲಸವಿಲ್ಲದೇ ಸಾವಿರಾರು ಜನ ಸಂಕಷ್ಟಕ್ಕೆ ಸಿಲುಕುತ್ತಾರೋ ಅನ್ನೋ ದೊಡ್ಡ ಆತಂಕ ದೂರವಾದಂತಾಗಿದೆ.

ಇದನ್ನೂ ಓದಿ: ದೇಶದ ಮೊದಲ ಐಫೋನ್​ ಕಂಪನಿ ಧ್ವಂಸ: ಕಾರ್ಮಿಕರ ರೋಷಾಗ್ನಿಗೆ ಕಾರಣವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.