ETV Bharat / state

ಚುನಾವಣೆಯ ಅಸ್ತ್ರವಾಯ್ತು ಕೆಸಿ ವ್ಯಾಲಿ ಯೋಜನೆ : ಇದರ ರೂವಾರಿ ಯಾರು?

ಒಂದೆಡೆ ಕೋಲಾರದಲ್ಲಿ ಲೋಕಸಭಾ ಚುನಾವಣಾ ಬಿಸಿ ತಾರಕಕ್ಕೇರುತ್ತಿದ್ದು, ಮತ್ತೊಂದೆಡೆ ಶಾಶ್ವತ ನೀರಾವರಿಗಾಗಿ ನಡೆಸಿದ ಹೋರಾಟದ ಕಾವು ಸಹ ಹೆಚ್ಚಾಗುತ್ತಿದೆ.

ಕೆಸಿ ವ್ಯಾಲಿ ಯೋಜನೆಯ ರೂವಾರಿ ಯಾರು
author img

By

Published : Apr 6, 2019, 5:39 PM IST

ಕೋಲಾರ: ಬೆಂಗಳೂರಿನಿಂದ ಹರಿದು ಬರುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸುವ ಕೆಸಿ ವ್ಯಾಲಿ ಯೋಜನೆಯನ್ನು ತಂದವರಾರು ಅನ್ನೋ ಪ್ರಶ್ನೆ ಇನ್ನೂ ಹಾಗೆ ಇದೆ. ಜಿಲ್ಲೆಯಲ್ಲಿ ಕುಸಿದಿರುವ ಅಂತರ್ಜಲ ಮಟ್ಟವನ್ನು ಸುಧಾರಣೆ ಮಾಡುವಲ್ಲಿ ಈ ಯೋಜನೆಯದು ಬಹು ಮುಖ್ಯಪಾತ್ರವಿದೆ. ಹಾಗಾಗಿ ಇದೀಗ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಈ ಯೋಜನೆಯ ರೂವಾರಿ ಯಾರು ಅನ್ನೋದು ಈಗ ಜಿಲ್ಲೆಯ ಮತದಾರರಲ್ಲಿ ಕಾಡಲಾಂಭಿಸಿದೆ.

ಕೆಸಿ ವ್ಯಾಲಿ ಯೋಜನೆ ಕುರಿತು ಕೆ.ಹೆಚ್‌ ಮುನಿಯಪ್ಪ ಸ್ಪಷ್ಟನೆ

ಸತತ ಏಳು ಬಾರಿ ಗೆಲುವು ದಾಖಲಿಸಿ ಎಂಟನೇ ಗೆಲುವಿಗಾಗಿ ಚುನಾವಣಾ ಕಣದಲ್ಲಿರುವ ಹಾಲಿ ಸಂಸದ ಕೆ.ಹೆಚ್.​ ಮುನಿಯಪ್ಪನವರಾ? ಅಥವಾ ವಿಧಾನಸಭಾ ಸ್ಪೀಕರ್​ ಆಗಿರುವ ರಮೇಶ್​ ಕುಮಾರ್ ಅವರೇ? ಒಂದೆಡೆ ಕೆ.ಹೆಚ್.​ ಮುನಿಯಪ್ಪ, ಇದು ನಾನೇ ಮಾಡಿದ್ದು, ಇದರ ಮುಖ್ಯ ರೂವಾರಿ ನಾನೇ ಎಂದು ಹೇಳಿತ್ತಿದ್ದರೆ, ಮತ್ತೊಂದೆಡೆ ಈ ಯೋಜನೆಯನ್ನು ಜಾರಿಗೆ ತರುವಲ್ಲಿ ಮುನಿಯಪ್ಪನವರ ಪಾತ್ರ ಶೂನ್ಯ. ಇದನ್ನು ಜಿಲ್ಲೆಗೆ ತಂದಿದ್ದು ಸ್ಪೀಕರ್​ ರಮೇಶ್​ ಕುಮಾರ್ ಎಂದು ಹೇಳಲಾಗುತ್ತಿದೆ.

ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯ ಮಹತ್ವದ ಯೋಜನೆ ಕೆಸಿ ವ್ಯಾಲಿ ಯೋಜನೆ ಲಾಭ ಪಡೆಯಲು ಕಾಂಗ್ರೆಸ್​ ಅಭ್ಯರ್ಥಿ ಹವಣಿಸುತ್ತಿದ್ದರೆ, ಅವರ ವಿರೋಧಿ ಬಣದ ನಾಯಕರುಗಳು ಅಲ್ಲಲ್ಲಿ ಕಾಲೆಳೆಯುತ್ತಿದ್ದಾರೆ. ಈ ಮೂಲಕ​ ಯೋಜನೆಯ ಶ್ರಮದ ಫಲ ಯಾರದ್ದು ಅನ್ನೋದೆ ಸದ್ಯ ಚುನಾವಣೆಯಲ್ಲಿ ಬಹು ಚರ್ಚಿತ ವಿಷಯವಾಗಿದೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.