ETV Bharat / state

ಪೋಲಿಯೊ ನಿರ್ಮೂಲನೆ ಜಾಗೃತಿಗಾಗಿ ವಿಂಟೇಜ್​ ಕಾರ್​ ರ್ಯಾಲಿ! - Vintage car rally from Bangalore to Kolar

ರೋಟರಿ ಸಂಸ್ಥೆ, ಬೆಂಗಳೂರು ವಿಂಟೇಜ್​ ಕಾರ್ ಕ್ಲಬ್​​ ಹಾಗೂ ಮುಳಬಾಗಿಲಿನ ಹೊನ್ನಶೆಟ್ಟಿಹಳ್ಳಿ ಗ್ರಾಮವಿಕಾಸ ಸಂಸ್ಥೆ ಆಯೋಜನೆ ಮಾಡಿದ್ದ ಪೋಲಿಯೊ ನಿರ್ಮೂಲನೆ ಜಾಗೃತಿಗಾಗಿ ವಿಂಟೇಜ್​ ಕಾರ್​ ರ್ಯಾಲಿ ಕಾರ್ಯಕ್ರಮದ ಹಿನ್ನೆಲೆ ಐವತ್ತಕ್ಕೂ ಹೆಚ್ಚು ವಿಂಟೇಜ್​ ಕಾರುಗಳು ಬೆಂಗಳೂರಿನಿಂದ ಚಿನ್ನದ ನಾಡು ಕೋಲಾರದವರೆಗೆ ಬಂದು ಗಮನ ಸೆಳೆದವು.

photo click
ಪೋಟೋಗಳನ್ನ ತೆಗೆಸಿಕೊಂಡ ಕಾರು ಪ್ರಿಯರು
author img

By

Published : Jan 17, 2021, 8:16 PM IST

ಕೋಲಾರ: ಅವು ಹಳೇ ಜಮಾನದ ಐಷಾರಾಮಿ ಕಾರುಗಳು. ಇಂದು ರಾಜಧಾನಿ ಬೆಂಗಳೂರಿನಿಂದ ಏಕಾಏಕಿ ಚಿನ್ನದ ನಾಡಿನತ್ತ ಧಾವಿಸಿ ಬಂದಿದ್ದವು. ಜತೆಗೆ ಪೋಲಿಯೊ ರೋಗವನ್ನು ತಡೆಗಟ್ಟಿ ಅನ್ನೋ ಸಾಮಾಜಿಕ ಕಳಕಳಿ ಹೊತ್ತು ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅವುಗಳೆಲ್ಲ ಬೀದಿಗಿಳಿದಿದ್ದವು. ಈ ಕುರಿತ ಇಂಟ್ರೆಸ್ಟಿಂಗ್​ ಸ್ಟೋರಿ ಇಲ್ಲಿದೆ...

ರೋಟರಿ ಸಂಸ್ಥೆ, ವಿಂಟೇಜ್​ ಕಾರ್ ಕ್ಲಬ್​​ ಹಾಗೂ ಮುಳಬಾಗಿಲಿನ ಹೊನ್ನಶೆಟ್ಟಿಹಳ್ಳಿ ಗ್ರಾಮವಿಕಾಸ ಸಂಸ್ಥೆ ಆಯೋಜನೆ ಮಾಡಿದ್ದ ಪೋಲಿಯೊ ನಿರ್ಮೂಲನೆಗಾಗಿ ವಿಂಟೇಜ್​ ಕಾರ್​ ರ್ಯಾಲಿ ಅನ್ನೋ ಕಾರ್ಯಕ್ರಮದ ಹಿನ್ನೆಲೆ ಐವತ್ತಕ್ಕೂ ಹೆಚ್ಚು ವಿಂಟೇಜ್​ ಕಾರುಗಳು ರಾಜಧಾನಿ ಬೆಂಗಳೂರಿನಿಂದ ಚಿನ್ನದ ನಾಡು ಕೋಲಾರದವರೆಗೆ ಬಂದಿದ್ದವು.

ವಿಂಟೇಜ್​ ಕಾರ್​ ಕ್ಲಬ್​ ಅಧ್ಯಕ್ಷ ಬಾಲಚಂದ್ರ ಮಾತನಾಡಿದರು

ಬೆಳಗ್ಗೆ ಬೆಂಗಳೂರಿನ ಮಾನ್ಯತಾ ಟೆಕ್​ ಪಾರ್ಕ್​ ಬಳಿಯಿಂದ ಹೊರಟ ವಿಂಟೇಜ್​ ಕಾರ್​ ರ್ಯಾಲಿ, ಹೊಸಕೋಟೆ ಮಾರ್ಗವಾಗಿ ನಗರದ ಪ್ರವಾಸಿ ಮಂದಿರದ ಬಳಿ ಒಂದು ಸುತ್ತು ಹಾಕಿ ನಂತರ ಮುಳಬಾಗಿಲಿನ ಹೊನ್ನಶೆಟ್ಟಿಹಳ್ಳಿಯ ಗ್ರಾಮಕ್ಕೆ ತಲುಪಿ, ಅಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮಕ್ಕೆ ಬಂದು ಸೇರಿತು.

ಕರ್ನಾಟಕ ವಿಂಟೇಜ್​ ಕಾರ್​ ಕ್ಲಬ್​ ಪ್ರತಿ ವರ್ಷ ಸಾಮಾಜಿಕ ಕಳಕಳಿ ಹೊತ್ತು ಈ ರೀತಿಯ ಕಾರ್ಯಕ್ರಮಕ್ಕೆ ಕೈ ಜೋಡಿಸುತ್ತವೆ. ಈ ನಿಟ್ಟಿನಲ್ಲಿ ಈ ಬಾರಿ ಪೋಲಿಯೋ ನಿರ್ಮೂಲನೆ ಮಾಡುವ ಉದ್ದೇಶದಿಂದ ರೋಟರಿ ಜೊತೆಗೆ ಕೈಜೋಡಿಸಿದ್ದರು. ಇನ್ನು ಈ ವಿಂಟೇಜ್​ ಕಾರ್​ ರ್ಯಾಲಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಹಳೇ ಜಮಾನದ ಕಾರ್​ಗಳು ಭಾಗವಹಿಸಿದ್ದವು. ಪ್ರಮುಖವಾಗಿ ಹಳೆಯ ಜಾಗ್ವರ್ ಕಾರ್​, ಪೋರ್ಡ್​ 1930, ಪೋರ್ಡ್​ 1933, ಕ್ಯಾಪಿಟಲ್​ ಸೆಡಾನ್​​, ಆಸ್ಟ್ರಿನ್​ 1933, ಶವಿ ಈಗಲ್​ 1933, ​ಬೀಟಲ್​, ಆಸ್ಟ್ರೀನ್​-11, ಆಸ್ಟ್ರೀನ್​-8, ಬೀಟಲ್​ ಬಗ್​, ಮೋರಿಸ್​, ಫೋರ್ಡ್​ ಆಸ್ಟ್ರೀನ್​-7, ಪೋರ್ಡ್​ ಫರ್ಪೆಕ್ಟ್​, ಸೇರಿದಂತೆ ಸುಮಾರು 52ಕ್ಕೂ ಹೆಚ್ಚು ಕಾರುಗಳು ಈ ರ್ಯಾಲಿಯಲ್ಲಿ ಭಾಗವಹಿಸಿದ್ದವು.

ಓದಿ: ಪುತ್ತೂರಿನಲ್ಲಿ ನಿರ್ಮಾಣವಾಗಲಿದೆ ಚಾಕಲೇಟ್ ಥೀಮ್ ಪಾರ್ಕ್

ಅಪರೂಪಕ್ಕೊಮ್ಮೆ ಕಾಣುವ ಇಂಥ ಕಾರುಗಳನ್ನು ಕಂಡ ಕಾರುಪ್ರಿಯರು ಅವುಗಳ ಪಕ್ಕದಲ್ಲಿ ನಿಂತು ಪೋಟೋಗಳನ್ನ ತೆಗೆಸಿಕೊಳ್ಳೋದಕ್ಕೆ ಮುಗಿಬಿದ್ದರು. ಇನ್ನು ಹಳ್ಳಿ ಜನರಂತೂ ಇದ್ಯಾವುದೋ ಟಿವಿಗಳಲ್ಲಿ ನೋಡ್ತಿದ್ದ ಕಾರುಗಳು ಅಂತ ಅಚ್ಚರಿಯಿಂದಲೇ ನೋಡುತ್ತಿದ್ದುದ್ದು ಕಂಡು ಬಂತು. ಇನ್ನು ಈ ಹಳೆ ಜಮಾನದ ಕಾರುಗಳು ಹಳ್ಳಿಯ ಜಂಗಲ್​ ರೋಡ್​ಗಳಲ್ಲೂ ಭರ್ಜರಿಯಾಗಿಯೇ ಒಂದು ಸುತ್ತು ಹಾಕಿ ಹೊಸ ಅನುಭವ ಪಡೆದವು.

ಒಟ್ಟಾರೆ ಅಪರೂಪಕ್ಕೊಮ್ಮೆ ಜಮಾನದ ಕಾರುಗಳು ಇಂದು ಚಿನ್ನದ ನಾಡಿನತ್ತ ಲಗ್ಗೆ ಇಟ್ಟಿದ್ದವು. ಬ್ರಿಟಿಷರ ಕಾಲದ ಹಾಗೂ ರಾಜಮಹಾರಾಜರ ಕಾಲದ ಅಪರೂಪದ ಇಂಥ ಕಾರುಗಳನ್ನು ಕಂಡು ಕೋಲಾರದ ಜನರೂ ಪುಳಕಿತರಾದರು. ಕೆಲವರು ಅದರ ಜೊತೆಗೆ ಪೊಟೋ ಕ್ಲಿಕ್ಕಿಸಿಕೊಂಡು ಪುಲ್​ ಖುಷಿಪಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.