ETV Bharat / state

ಕ್ವಾರಂಟೈನ್​ನಲ್ಲಿರುವವರನ್ನ ಹಾಸ್ಟೆಲ್​ಗೆ ಸ್ಥಳಾಂತರದ ವದಂತಿ.. ಆಕ್ರೋಶಗೊಂಡ ಜನರಿಂದ ಪ್ರತಿಭಟನೆ - ಕೋಲಾರ ಕೊರೊನಾ ಸುದ್ದಿ

ನಗರದ ಹೊರವಲಯದ ಗಾಜಲದಿನ್ನೆ ಗ್ರಾಮದ ಬಳಿ‌ ಮೊರಾರ್ಜಿ ದೇಸಾಯಿ ಹಾಸ್ಟೆಲ್​ಗೆ ಹೋಗುವ ರಸ್ತೆಗೆ ಮುಳ್ಳಿನ ಗಿಡಗಳನ್ನ ಹಾಕಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ರು.

Villlagers Protest Against To Govt In Kolar
ಪ್ರತಿಭಟನೆ ನಡೆಸಿದ ಗ್ರಾಮಸ್ಥರು
author img

By

Published : Apr 3, 2020, 4:18 PM IST

ಕೋಲಾರ : ಐಸೋಲೇಷನ್‌ನಲ್ಲಿದ್ದ 18 ಜನರನ್ನ ಮೊರಾರ್ಜಿ ದೇಸಾಯಿ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡುವ ವದಂತಿ ಕೇಳಿ ಬಂದ ಹಿನ್ನೆಲೆ ಅದನ್ನು ವಿರೋಧಿಸಿ ಅಕ್ಕಪಕ್ಕದ ಗ್ರಾಮಸ್ಥರು ಕೋಲಾರದಲ್ಲಿ ಪ್ರತಿಭಟನೆ ನಡೆಸಿದ್ರು. ನಗರದ ಹೊರವಲಯದ ಗಾಜಲದಿನ್ನೆ ಗ್ರಾಮದ ಬಳಿ‌ ಮೊರಾರ್ಜಿ ದೇಸಾಯಿ ಹಾಸ್ಟೆಲ್​ಗೆ ಹೋಗುವ ರಸ್ತೆಗೆ ಮುಳ್ಳಿನ ಗಿಡಗಳನ್ನ ಹಾಕಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ರು.

ಭಯಭೀತರಾದ ಗ್ರಾಮಸ್ಥರಿಂದ ಪ್ರತಿಭಟನೆ..

ಗ್ರಾಮದ ಸುತ್ತಮುತ್ತ ಹಾಗೂ ಇಲ್ಲಿನ ವಸತಿ ನಿಲಯದಲ್ಲಿ ಕ್ವಾರಂಟೈನ್​ ಮಾಡಬಾರದು ಎಂದು ವಿರೋಧ ವ್ಯಕ್ತಪಡಿಸಿದ್ರು. ಮುಂಬೈ ಮತ್ತು ದೆಹಲಿಯಿಂದ ಬಂದಿದ್ದ 18 ಜನ ಮುಸ್ಲಿಂ ಧರ್ಮಪ್ರಚಾರಕರನ್ನ ಐಸೋಲೇಷನ್ ಮಾಡುವ ವದಂತಿ ಹಬ್ಬಿದ ಹಿನ್ನೆಲೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಸ್ಥಳಕ್ಕೆ ಕೋಲಾರ‌ ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.