ಕೋಲಾರ: ಗ್ರಾಮ ಪಂಚಾಯತ್ ಚುನಾವಣೆಗಳ ದಿನಾಂಕ ಘೋಷಣೆಯಾಗಿದ್ದೇ ತಡ, ವರ್ತೂರು ಪ್ರಕಾಶ್ ರಾಜಕೀಯವಾಗಿ ಕಮ್ ಬ್ಯಾಕ್ ಮಾಡಿದ್ದಾರೆ. ಮತ್ತೆ ಚುನಾವಣೆಗಳಲ್ಲಿ ನಿಂತು ಗೆಲ್ಲುವ ಲೆಕ್ಕಾಚಾರ ಶುರು ಮಾಡಿಕೊಂಡಿದ್ದಾರೆ.
ವರ್ತೂರು ಪ್ರಕಾಶ್ ಅವರನ್ನು ನವೆಂಬರ್-25 ರಂದು ದುಷ್ಕರ್ಮಿಗಳು ಹಣಕ್ಕಾಗಿ ಕಿಡ್ನಾಪ್ ಮಾಡಿ, ಎರಡು ದಿನ ಚಿತ್ರ ಹಿಂಸೆ ನೀಡಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ವರ್ತೂರು ಪ್ರಕಾಶ್ ಕೋಲಾರದ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಒಮ್ಮೆ ಯಡಿಯೂರಪ್ಪ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಆದ್ರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಮೇಲೆ ವರ್ತೂರು ಪ್ರಕಾಶ್ ಕಣ್ಮರೆಯಾಗಿದ್ರು. ಅವರೇ ಹೇಳುವಂತೆ ತಮ್ಮ ಜಮೀನಲ್ಲಿ ವ್ಯವಸಾಯ ಮಾಡಿಕೊಂಡು ಹಸುಗಳನ್ನು ನೋಡಿಕೊಂಡಿದ್ದರು.
ಆದ್ರೆ ಕಳೆದೊಂದು ವಾರದಿಂದ ವರ್ತೂರು ರಾಜ್ಯಾದ್ಯಂತ ಸುದ್ದಿ ಮಾಡುತ್ತಿದ್ದಾರೆ. ಅದು ಕಿಡ್ನಾಪ್ ಕೇಸ್ನಲ್ಲಿ. ಪ್ರಕಾಶ್ ಅವರನ್ನು ನವೆಂಬರ್-25 ರಂದು ದುಷ್ಕರ್ಮಿಗಳು ಹಣಕ್ಕಾಗಿ ಕಿಡ್ನಾಪ್ ಮಾಡಿ, ಎರಡು ದಿನ ಚಿತ್ರಹಿಂಸೆ ನೀಡಿದ್ದಾರೆ. ಈ ಕುರಿತು ಸದ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳ ಪತ್ತೆಗೆ ತನಿಖೆ ನಡೆಯುತ್ತಿದೆ.
ಓದಿ-ಕಿಡ್ನ್ಯಾಪ್ ಪ್ರಕರಣ.. ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಮಾಜಿ ಸಚಿವ ವರ್ತೂರು ಪ್ರಕಾಶ್
ವರ್ತೂರು ಪ್ರಕಾಶ್ ಕೂಡಾ ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ರು ಯಾಕಂದ್ರೆ ಕಿಡ್ನಾಪ್ ಮಾಡಿದ್ದ ಆಗುಂತಕರು ಅವರಿಗೆ ಚಿತ್ರ ಹಿಂಸೆ ಮಾಡಿ ಯಾರಿಗಾದ್ರು ಹೇಳಿದ್ರೆ ನಿನ್ನನ್ನು ನಿನ್ನ ಮಕ್ಕಳನ್ನು ಸಾಯಿಸುವುದಾಗಿ ಹೆದರಿಸಿದ್ರು ಆದ್ರೆ ಪೊಲೀಸ್ ತನಿಖೆ ಆರಂಭವಾದ ಮೇಲೆ ಸ್ವಲ್ಪ ನೆಮ್ಮದಿಯಾಗಿದ್ದಾರೆ. ಈ ಬೆನ್ನಲ್ಲೇ ಸದ್ಯ ಗ್ರಾಮ ಪಂಚಾಯತ್ ಚುನಾವಣೆಗಳ ದಿನಾಂಕ ಘೋಷಣೆಯಾಗಿದ್ದೇ ವರ್ತೂರು ಪ್ರಕಾಶ್ ರಾಜಕೀಯವಾಗಿ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಮತ್ತೆ ಚುನಾವಣೆಗಳಲ್ಲಿ ನಿಂತು ಗೆಲ್ಲುವ ಲೆಕ್ಕಾಚಾರ ಶುರುಮಾಡಿಕೊಂಡಿದ್ದಾರೆ.
ಹಾಗಾಗಿನೇ ಇಂದು ವರ್ತೂರು ಪ್ರಕಾಶ್ ಕೋಲಾರ ತಾಲೂಕು ಬೆಗ್ಲಿ ಹೊಸಹಳ್ಳಿ ಬಳಿ ಇರುವ ತಮ್ಮ ಫಾರ್ಮ್ ಹೌಸ್ ನಲ್ಲಿ, ಗ್ರಾಮ ಪಂಚಾಯತ್ ಚುನಾವಣೆ ಸಂಬಂಧ ತಮ್ಮ ಬೆಂಬಲಿಗರ ಸಭೆ ಕರೆದಿದ್ರು. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂದು ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಓದಿ-ಮಾಜಿ ಸಚಿವ ವರ್ತೂರು ಪ್ರಕಾಶ್ಗೆ ಬೆಂಗಾವಲು ವಾಹನ ಹಾಗೂ ಗನ್ ಮ್ಯಾನ್ ನಿಯೋಜನೆ
ಶತಾಯ ಗತಾಯ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ಧವಾಗಬೇಕೆಂದು ಮತ್ತೆ ಸಂಘಟನೆ ಶುರುಮಾಡಿದ್ದಾರೆ. ಅವರು ಹೀಗೆ ಏಕಾಏಕಿ ಕಮ್ ಬ್ಯಾಕ್ ಮಾಡೋದಕ್ಕೆ ಸಹಾಯವಾಗಿದ್ದು ಅದೇ ಕಿಡ್ನಾಪ್ ಪ್ರಕರಣ. ಹೀಗೆ ಮೂಲೆ ಗುಂಪಾಗಿದ್ದ ವರ್ತೂರು ಪ್ರಕಾಶ್ ರಾತ್ರೋರಾತ್ರಿ ಮತ್ತೆ ರಾಜಕೀಯವಾಗಿ ಮುಖ್ಯವಾಹಿನಿಗೆ ಬಂದ್ರು. ಈ ಬಗ್ಗೆ ಅವರನ್ನೇ ಕೇಳಿದ್ರೆ ಅವರೂ ಕೂಡಾ ತಮ್ಮನ್ನು ಕಿಡ್ನಾಪ್ ಮಾಡಿದವರಿಗೂ ಧನ್ಯವಾದ ಹೇಳಬೇಕು ಎನ್ನುತ್ತಿದ್ದಾರೆ. ಕಾರಣ ಈ ಪ್ರಕರಣದಿಂದ ಅವರಿಗೆ ಜನರ ಅನುಕಂಪದ ಜೊತೆಗೆ ಒಳ್ಳೆಯ
ಒಟ್ಟಾರೆ ಆಗೋದೆಲ್ಲಾ ಒಳ್ಳೆಯದಕ್ಕೆ ಅಂತ ದೊಡ್ಡವರು ಹೇಳೋದು ಇದಕ್ಕೆ ಇರಬೇಕು ಕಿಡ್ನಾಪರ್ಸ್ ಕೈಗೆ ಸಿಕ್ಕಿಕೊಂಡು ಅವರು ಬದುಕಿ ಬಂದಿದ್ದೇ ಹೆಚ್ಚು. ಅಂಥದ್ದರಲ್ಲಿ ಪ್ರಕಾಶ್ಗೆ ಇದರಲ್ಲಿ ಡಬಲ್ ಧಮಾಕ, ಜೀವಸಹಿತ ಬದುಕಿ ಬಂದಿದ್ದರ ಜೊತೆಗೆ ರಾಜಕೀಯವಾಗಿ ಮರು ಜೀವ ಸಿಕ್ಕಂತಾಗಿದೆ.