ETV Bharat / state

ಕೊರೊನಾ ವಾರಿಯರ್ಸ್​​ ಕಡೆ ತಿರುಗಿದ ಕೋವಿಡ್​: ಕೋಲಾರದ ಮೂವರು ವೈದ್ಯರಿಗೆ ಸೋಂಕು - ವೈದ್ಯರಿಗೆ ಕೊರೊನಾ ಸೋಂಕು ಸುದ್ದಿ

ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದ್ದು, ಆಕೆಗೆ ಚಿಕಿತ್ಸೆ ನೀಡಿದ ಮೂವರು ವೈದ್ಯರಿಗೂ ಕೊರೊನಾ ಸೋಂಕು ತಗುಲಿದೆ.

three doctors tested corona positive
ಮೂವರು ವೈದ್ಯರಿಗೆ ಕೊರೊನಾ
author img

By

Published : Jun 21, 2020, 4:03 PM IST

ಕೋಲಾರ: ಇಷ್ಟುದಿನ ಸಾಮಾನ್ಯ ಜನರಿಗೆ ಚಿತ್ರಹಿಂಸೆ ನೀಡುತ್ತಿದ್ದ ಮಹಾಮಾರಿ ಸೋಂಕು ಈಗ ಕೊರೊನಾ ವಾರಿಯರ್ಸ್​ಗಳಾದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ವಕ್ಕರಿಸಿ ಬೆದರಿಸುತ್ತಿದೆ.

ಕೋಲಾರ ತಾಲೂಕು ಜಂಗಮಗುರ್ಜೇನಹಳ್ಳಿ ಗ್ರಾಮದ 50 ವರ್ಷದ ಮಹಿಳೆಗೆ ಕೋಲಾರದ ಆರ್​.ಎಲ್​.ಜಾಲಪ್ಪ ಆಸ್ಪತ್ರೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಆಪರೇಷನ್​ ಮಾಡಲಾಗಿತ್ತು. ಆ ನಂತರ ಮಹಿಳೆಯನ್ನು ಕೋವಿಡ್​ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಈ ​ವೇಳೆ ಮಹಿಳೆಗೆ ಸೋಂಕು ತಗುಲಿರುವುದು ದೃಢವಾಗಿತ್ತು. ಇದರಿಂದ ಆತಂಕಗೊಂಡಿದ್ದ ಆರ್​.ಎಲ್​.ಜಾಲಪ್ಪ ಆಸ್ಪತ್ರೆಯ ಸಿಬ್ಬಂದಿ ಮತ್ತು ಮಹಿಳೆಗೆ ಚಿಕಿತ್ಸೆ ನೀಡಿದ್ದ ವೈದ್ಯರನ್ನು ಕೋವಿಡ್​ ಟೆಸ್ಟ್​ಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಮಹಿಳೆಗೆ ಆಪರೇಷನ್​ ಮಾಡಿದ್ದ ಮೂವರು ವೈದ್ಯರಿಗೂ ಕೊರೊನಾ ಪಾಸಿಟಿವ್​ ಬಂದಿದೆ.

ಕೋಲಾರದಲ್ಲಿ ಮೂವರು ವೈದ್ಯರಿಗೆ ಕೊರೊನಾ

ಈ ಹಿನ್ನೆಲೆಯಲ್ಲಿ ಆರ್​.ಎಲ್​.ಜಾಲಪ್ಪ ಆಸ್ಪತ್ರೆಯ ಮೂವರು ವೈದ್ಯರನ್ನು ಕೋವಿಡ್​ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಆಸ್ಪತ್ರೆಯ 22 ಕ್ಕೂ ಹೆಚ್ಚು ಜನ ವೈದ್ಯಕೀಯ ಸಿಬ್ಬಂದಿಯನ್ನು ಕ್ವಾರಂಟೈನ್​ ಮಾಡಲಾಗಿದೆ. ಆಸ್ಪತ್ರೆಯ ಎಲ್ಲ ಸಿಬ್ಬಂದಿಯ ರಕ್ತದ ಹಾಗೂ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.

ಸದ್ಯ ಆಪರೇಷನ್​ ಥಿಯೇಟರಿಗೂ ಸೋಂಕು ನಿವಾರಕ ಸಿಂಪಡಿಸಿ ಮೂರು ದಿನಗಳ ಕಾಲ ಸೀಲ್​ಡೌನ್​ ಮಾಡಲಾಗಿದೆ. ಈ ನಡುವೆ ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್​ ಒಬ್ಬರಿಗೂ ಕೊರೊನಾ ಪಾಸಿಟಿವ್​ ಬಂದಿರುವ ಹಿನ್ನೆಲೆಯಲ್ಲಿ ಆಕೆಯ ಟ್ರಾವೆಲ್​ ಹಿಸ್ಟರಿಯನ್ನು ಕಲೆ ಹಾಕಲಾಗುತ್ತಿದೆ.
ಕೋಲಾರದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕೋಲಾರದಲ್ಲಿ ಸೋಂಕಿತರ ಸಂಖ್ಯೆ 56 ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.