ಕೋಲಾರ : ಹೆಚ್.ಡಿ.ದೇವೇಗೌಡರನ್ನ ಈಗಾಗಲೇ ಪ್ರಧಾನ ಮಂತ್ರಿಯನ್ನಾಗಿ ಮಾಡಲಾಗಿದೆ. ಹೀಗಾಗಿ ಈ ಬಾರಿ ರಾಹುಲ್ ಗಾಂಧಿ ಅವರನ್ನ ಪ್ರಧಾನ ಮಂತ್ರಿ ಮಾಡಬೇಕು ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದದರು.
ಕೆ.ಎಚ್.ಮುನಿಯಪ್ಪ
ಇಂದು ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹೆಚ್.ಡಿ.ದೇವೇಗೌಡರನ್ನು ಸಂದರ್ಭನುಸಾರ ಈ ಹಿಂದೆಯೇ ಪ್ರಧಾನಮಂತ್ರಿಯನ್ನಾಗಿ ಮಾಡಲಾಗಿದೆ. ದೇಶದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಸೀಟುಗಳನ್ನು ಗೆದ್ದು ಮಿತ್ರ ಪಕ್ಷಗಳ ಸಹಕಾರದಿಂದ ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವುದು ನಮ್ಮ ಮುಂದಿನ ಗುರಿ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 80 ಸೀಟು ಬಂದರೂ ಸಹ ಜೆಡಿಎಸ್‍ಗೆ ಅಧಿಕಾರವನ್ನು ಕೊಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಮೈತ್ರಿ ಸರ್ಕಾರ 5 ವರ್ಷ ಸುಭ್ರದವಾಗಿ ಇರುತ್ತದೆ ಎಂದು ಭವಿಷ್ಯ ನುಡಿದರು.
ಇನ್ನು ಚಿಂಚೋಳಿ ಶಾಸಕ ಉಮೇಶ್ ಜಾದವ್ ರಾಜೀನಾಮೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೊದಲಿನಿಂದಲೂ ಅವರು ಕಾಂಗ್ರೆಸ್ ಪಕ್ಷ ಬಿಡುವುದಾಗಿ ಹೇಳುತ್ತಿದ್ದರು. ಈಗ ರಾಜೀನಾಮೆಯನ್ನ ಸ್ಪೀಕರ್ ಅವರಿಗೆ ನೀಡಲಾಗಿದೆ. ಸ್ವೀಕಾರ ಮಾಡುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ. ರಾಜೀನಾಮೆಯನ್ನ ಮನೆಯಲ್ಲಿಯೇ ಪಡೆದುಕೊಳ್ಳಬಹುದು ಇದಕ್ಕೆ ಯಾವುದೇ ನಿರ್ಬಂಧವಿಲ್ಲವೆಂದರು. ನಾಳೆ ಯಶವಂತಪುರನಿಂದ ಯಲಹಂಕ, ಚಿಕ್ಕಬಳ್ಳಾಪುರ, ಕೋಲಾರ ಮಾರ್ಗವಾಗಿ ದೆಹಲಿಗೆ ಹೊಸ ರೈಲು ಪ್ರಾರಂಭವಾಗಲಿದ್ದು, ಇದು ವಾರಕ್ಕೊಮ್ಮೆ ಯಶವಂತಪುರನಿಂದ ಹೋಗಲಿದೆ ಎಂದು ತಿಳಿಸಿದ್ರು.