ಕೋಲಾರ: ಹೊಸ ವರ್ಷಾಚರಣೆ ಹಿನ್ನೆಲೆ ಜಿಲ್ಲಾಡಳಿತದಿಂದ ಯಾವುದೇ ರೀತಿಯ ಹೊಸ ನಿಯಮಗಳನ್ನು ವಿಧಿಸಿಲ್ಲ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದ್ದಾರೆ.
ತಮ್ಮ ಕಚೇರಿ ಸಭಾಂಗಣಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವರ್ಷಾಚರಣೆಗೆ ಯಾವುದೇ ಹೊಸ ನಿಯಮ ಜಾರಿ ಮಾಡಿಲ್ಲ. ಜೊತೆಗೆ ನಮ್ಮಲ್ಲಿ ಜನಸಂದಣಿ ಸೇರುವ ಹಾಗೂ ಪಾರ್ಟಿ ಮಾಡುವ ಯಾವುದೇ ಪ್ರವಾಸಿ ತಾಣಗಳಿಲ್ಲ ಎಂದರು.
ಬದಲಾಗಿ ಸರ್ಕಾರದ ಕೊರೊನಾ ನಿರ್ದೇಶನಗಳನ್ನು ಜಾರಿ ಮಾಡಲಾಗಿದೆ. ಕೋವಿಡ್ ನಿಯಮಗಳಂತೆ ಹೊಸ ವರ್ಷಾಚರಣೆ ಮಾಡಲು ಈಗಾಗಲೇ ಎಲ್ಲೆಡೆ ನಿರ್ದೇಶನ ನೀಡಲಾಗಿದೆ. ಅದರಂತೆ ಜನರು ಕೂಡ ಮುನ್ನೆಚ್ಚರಿಕೆ ವಹಿಸಿ ವರ್ಷಾಚರಣೆ ಮಾಡುವಂತೆ ತಿಳಿಸಿದರು.
ಇನ್ನು ನಮ್ಮ ಜಿಲ್ಲೆಗೆ ಬ್ರಿಟನ್ನಿಂದ ಬಂದವರು ಯಾರೂ ಇಲ್ಲ. ಬದಲಾಗಿ ಯುಎಸ್ನಿಂದ ಮೂವರು ಬಂದಿದ್ದು, ಅವರಿಗೂ ಈಗಾಗಲೇ ನೆಗೆಟಿವ್ ವರದಿ ಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪುನರ್ ಪರೀಕ್ಷೆ ಮಾಡುವಂತೆ ಸೂಚಿಸಲಾಗಿದೆ. ಜೊತೆಗೆ ಕೊರೊನಾ ಲಸಿಕೆ ನೀಡಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ಮೊದಲ ಹಂತದಲ್ಲಿ ಆಶಾ ಕಾರ್ಯಕರ್ತೆಯರಿಗೆ, ವೈದ್ಯರಿಗೆ ನೀಡಲು ತಯಾರಿ ನಡೆದಿದೆ ಎಂದರು.
ಇದನ್ನೂ ಓದಿ: ಈ ಬಾರಿ ಅದ್ಧೂರಿ ಹೊಸ ವರ್ಷಾಚರಣೆ ಇಲ್ಲ : ಬೆಂಗಳೂರಿನಲ್ಲಿ ಡಿ.31ರ ಸಂಜೆ 6ರಿಂದ ನಿಷೇಧಾಜ್ಞೆ