ಕೋಲಾರ: ಲೋಕಸಭಾ ಚುನಾವಣೆ ಸಮೀಪಿಸುತ್ತಿದಂತೆ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಬಿರುಸು ಪಡ್ಕೊಂಡಿದ್ದು, ಕೋಲಾರ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಎಸ್ ಮುನಿಸ್ವಾಮಿ ಕ್ಯಾಂಪೇನ್ ಮಾಡಿದರು.
ಕೋಲಾರ ಲೋಕಸಭಾ ಕ್ಷೆತ್ರದಲ್ಲಿ ಅಭ್ಯರ್ಥಿಗಳ ಹಣೆಬರಹ ಬರೆಯುವಲ್ಲಿ ಚಿಂತಾಮಣಿ ಹಾಗೂ ಶಿಡ್ಲಘಟ್ಟ ನಗರದ ಮತದಾರರು ಬಹಳ ಮುಖ್ಯವಾದ ಪಾತ್ರವಹಿಸುತ್ತಾರೆ. ಹೀಗಾಗಿ ಈ ಎರಡೂ ಕಡೆ ಇವತ್ತು ಕೇಸರಿ ನಾಯಕರ ಪ್ರಚಾರ ಜೋರಾಗಿತ್ತು.
ಕಮಲ ಪಕ್ಷದ ಎಸ್.ಮುನಿಸ್ವಾಮಿ ಕಳೆದೆರಡು ದಿನಗಳಿಂದ ಈ ಎರಡೂ ಕ್ಷೇತ್ರಗಳಲ್ಲಿ ಬೀಡುಬಿಟ್ಟು ಮತಬಾಂಧವರ ಮನವೊಲಿಸುತ್ತಿದ್ದಾರೆ. ಇವರಿಗೆ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಎಂ.ಸಿ ಸುಧಾಕರ್ ಸಾಥ್ ಕೊಟ್ಟರು.
ನಗರದ ಬಸ್ ನಿಲ್ದಾಣದ ಬಳಿಯಿಂದ ಮುನಿಸ್ವಾಮಿ ಪರ ಪ್ರಚಾರ ಶುರುಮಾಡಿದ ಎಂ.ಸಿ ಸುಧಾಕರ್, ದಾರಿಯುದ್ದಕ್ಕೂ ಕೆ.ಎಚ್. ಮುನಿಯಪ್ಪ ವಿರುದ್ದ ಆಕ್ರೋಶ ಹೊರಹಾಕಿದರು.