ಕೋಲಾರ : ಅಕ್ರಮವಾಗಿ ಸಾಗಾಣಿಕೆಯ ಶಂಕೆಯ ಮೇರೆಗೆ ಆಕ್ಸಿಜನ್ ಸಿಲಿಂಡರ್ಗಳನ್ನ ಹೊಂದಿದ್ದ ಟೆಂಪೋ ತಡೆದು ಪರಿಶೀಲನೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಗರದ ಡೂಂ ಲೈಟ್ ಸರ್ಕಲ್ ಬಳಿ ತಹಶೀಲ್ದಾರ್ ಶೋಭಿತ ದಾಳಿ ನಡೆಸಿ, ಆಕ್ಸಿಜನ್ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನ ತಡೆದು ತಪಾಸಣೆ ನಡೆಸಿದ್ರು.
ದಾಳಿ ವೇಳೆ ಆಕ್ಸಿಜನ್ ಟೆಂಪೋದಲ್ಲಿ ಸುಮಾರು 160 ಖಾಲಿ ಸಿಲಿಂಡರ್ಗಳಿದ್ದು, ಮಾಲೂರು ಕೈಗಾರಿಕಾ ಪ್ರದೇಶದಲ್ಲಿರುವ ವೆಂಕಟೇಶ್ವರ ಗ್ಯಾಸ್ ಕಂಪನಿಯಲ್ಲಿ ಆಕ್ಸಿಜನ್ ತುಂಬಿಕೊಂಡು ಬರಲು ಹೋಗುತ್ತಿದ್ದ ವಾಹನ ಇದಾಗಿತ್ತು.
ಆಸ್ಪತ್ರೆ ಹಾಗೂ ಕೈಗಾರಿಕೆಗಳಿಗೆ ಆಕ್ಸಿಜನ್ ಪೂರೈಸಲು ಖಾಲಿ ಸಿಲಿಂಡರ್ಗಳಲ್ಲಿ ಆಕ್ಸಿಜನ್ ತುಂಬಿಕೊಂಡು ಬರಲು ಹೊರಟಿತ್ತು ಈ ವಾಹನ ಹೊರಟಿತ್ತು.
ಓದಿ: ಶಾಕಿಂಗ್ ಸುದ್ದಿ.. ಇತರೆ ಕಾಯಿಲೆಗಳಿಲ್ಲದಿದ್ದರೂ ಸಹ ಕೊರೊನಾ ಸೋಂಕಿಗೆ ಬಲಿಯಾದವರೇ ಹೆಚ್ಚು!