ETV Bharat / state

ಸಾಂಕ್ರಾಮಿಕ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕುರ್ಚಿಗಾಗಿ ಕಿತ್ತಾಡುತ್ತಿದೆ: ಕೃಷ್ಣ ಬೈರೇಗೌಡ

ಬಿಜೆಪಿ ಮಾಸ್ಕ್, ವೆಂಟಿಲೇಟರ್, ಆಕ್ಸಿಜನ್​ ದಂಧೆಯಲ್ಲಿ ಲೂಟಿ ಹೊಡೆಯುತ್ತಿದೆ. ಇಂತಹ ನೀಚ ಸರ್ಕಾರ ನೋಡಿಲ್ಲ. ಕೊರೊನಾ ಸಂಕಷ್ಟದಲ್ಲೂ ಅಧಿಕಾರಕ್ಕಾಗಿ ಕಚ್ಚಾಟ ನಡೆಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ‌ ಜನರನ್ನು ನಡು ನೀರಿನಲ್ಲಿ ಕೈ ಬಿಟ್ಟಿದೆ..

 Krishna Bhairegowda
Krishna Bhairegowda
author img

By

Published : Jun 8, 2021, 4:58 PM IST

Updated : Jun 8, 2021, 6:49 PM IST

ಕೋಲಾರ : ಕೊರೊನಾ ಸಂದರ್ಭದಲ್ಲೂ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಲೂಟಿ ಮಾಡುತ್ತಿದೆ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಕೋಲಾರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕುರ್ಚಿಗೆ ಕದನ ನಡೆಸುತ್ತಿದ್ದು, ರಾಜ್ಯವನ್ನು ಲೂಟಿ ಹೊಡೆಯೋದರಲ್ಲೂ ಸಹ ನಿರತರಾಗಿದ್ದಾರೆ ಎಂದು ಆರೋಪಿಸಿದರು.

ಸಾಂಕ್ರಾಮಿಕ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕುರ್ಚಿಗಾಗಿ ಕಿತ್ತಾಡುತ್ತಿದೆ: ಕೃಷ್ಣ ಬೈರೇಗೌಡ

ಈ ಹಿಂದೆ ಪ್ರಧಾನಮಂತ್ರಿ ಕಾಂಗ್ರೆಸ್ ಪಕ್ಷವನ್ನು 10 ಪರ್ಸೆಂಟ್​ ಸರ್ಕಾರ ಎಂದು ಟೀಕೆ ಮಾಡಿದ್ದರು. ಆದರೆ, ಬಿಜೆಪಿಯವರ ಬಳಿ ಶೇ.20ರಷ್ಟು ಕಮಿಷನ್ ಇಲ್ಲದೆ ಹೋದರೆ ಯಾವುದೇ ಕೆಲಸ ಆಗುವುದಿಲ್ಲ ಎಂದು ಟೀಕೆ ಮಾಡಿದರು.

ಬಿಜೆಪಿ ಮಾಸ್ಕ್, ವೆಂಟಿಲೇಟರ್, ಆಕ್ಸಿಜನ್​ ದಂಧೆಯಲ್ಲಿ ಲೂಟಿ ಹೊಡೆಯುತ್ತಿದೆ. ಇಂತಹ ನೀಚ ಸರ್ಕಾರ ನೋಡಿಲ್ಲ. ಕೊರೊನಾ ಸಂಕಷ್ಟದಲ್ಲೂ ಅಧಿಕಾರಕ್ಕಾಗಿ ಕಚ್ಚಾಟ ನಡೆಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ‌ ಜನರನ್ನು ನಡು ನೀರಿನಲ್ಲಿ ಕೈ ಬಿಟ್ಟಿದೆ ಎಂದರು.

ದೇಶದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವುದರಲ್ಲಿ ರಾಜ್ಯ ಎರಡನೆ ಸ್ಥಾನದಲ್ಲಿದೆ. ನಮ್ಮ‌ ತೆರಿಗೆಯಲ್ಲಿ ಬೇರೆ ರಾಜ್ಯಗಳಿಗೆ ಆಕ್ಸಿಜನ್​ ಕೊಟ್ಟ ಕೇಂದ್ರ ಸರ್ಕಾರ, ಬಿಜೆಪಿ ಮತ ಹಾಕಿದ ತಪ್ಪಿಗೆ ನಮಗೆ ಆಕ್ಸಿಜನ್​ ನೀಡಿಲ್ಲ. ಎಂಪಿಗಳು ಇದುವೆರಗೂ ಆಕ್ಸಿಜನ್ ಬೇಕು ಎಂದು ಕೇಳಿಲ್ಲ. ನಮ್ಮನ್ನು ಕಾಪಾಡಬೇಕಾದ ಸರ್ಕಾರ ಕನ್ನಡಿಗರಿಗೆ ದ್ರೋಹ ಮಾಡಿದೆ ಎಂದರು.

Last Updated : Jun 8, 2021, 6:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.