ETV Bharat / state

ಅಸ್ಪೃಶ್ಯತೆ  ನಿವಾರಣೆಗೆ ಇಡೀ ರಾಜ್ಯದಲ್ಲಿ ಆಂದೋಲನ ಮಾಡಲಾಗುವುದು: ಕೋಟ ಶ್ರೀನಿವಾಸ ಪೂಜಾರಿ - ಅಸ್ಪೃಶತೆ ನಿವಾರಣೆ ಕುರಿತು ಸಚಿವರ ಪ್ರತಿಕ್ರಿಯೆ

ದಲಿತಯುವಕನಿಗೆ ದಂಡ ವಿಧಿಸಿರುವ ವಿಚಾರಕ್ಕೆ ಕೋಟ ಶ್ರೀನಿವಾಸ್​ ಪೂಜಾರಿ ಪ್ರತಿಕ್ರಿಯಿಸಿ ಅಸ್ಪೃಶ್ಯತೆ ನಿವಾರಣೆಗೆ ಇಡೀ ರಾಜ್ಯದಲ್ಲಿ ಆಂಧೋಲನ ಮಾಡಲಾಗುವುದು ಎಂದು ಹೇಳಿದರು.

KN_KLR_DHALITHA
ಕೋಟ ಶ್ರೀನಿವಾಸ ಪೂಜಾರಿ
author img

By

Published : Sep 28, 2022, 2:38 PM IST

ಕೋಲಾರ: ಅಸ್ಪೃಶ್ಯತೆ ನಿವಾರಣೆಗೆ ಇಡೀ ರಾಜ್ಯದಲ್ಲಿ ಆಂದೋಲನ ಮಾಡಲಾಗುವುದು ಎಂದು, ಉಳ್ಳೇರಹಳ್ಳಿಯಲ್ಲಿ ದಲಿತ ಕುಟುಂಬಕ್ಕೆ ದಂಡ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಳ್ಳೇರಹಳ್ಳಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕುಟುಂಬಕ್ಕೆ ಧೈರ್ಯ ಹೇಳುವಂತಹ ಕೆಲಸ ಮಾಡಲಾಗುವುದು. ಅಲ್ಲದೇ, ಸರ್ಕಾರದಿಂದ ಅವರಿಗೆ ಸಿಗಬೇಕಿರುವ ಎಲ್ಲ ಸೌಲಭ್ಯಗಳು ಅವರ ಕುಟುಂಬಕ್ಕೆ ಸಿಗುವಂತೆ ಮಾಡಲಾಗುವುದು ಎಂದರು. ಇನ್ನು ಈಗಾಗಲೇ ಜಿಲ್ಲಾಡಳಿತದಿಂದ ಜಾಗ ಮಂಜೂರು ಮಾಡಲಾಗಿದ್ದು, ಮನೆ ಕಟ್ಟಿಕೊಳ್ಳಲು ಒಂದೂವರೆ ಲಕ್ಷ ಕೊಟ್ಟಿರುವುದನ್ನ,‌ ವಿಶೇಷ ಅನುದಾನದಡಿ ಐದು ಲಕ್ಷ ಕೊಡುವಂತೆ ಆದೇಶ ಮಾಡಲಾಗುವುದು ಎಂದು ಹೇಳಿದರು.

ಇನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳೊಂದಿಗೆ ಈಗಾಗಲೇ‌ ಮಾತುಕತೆ ನಡೆಸಿದ್ದು, ಬಾಲಕನ ಉನ್ನತ ಶಿಕ್ಷಣ ಖರ್ಚುವೆಚ್ಚಗಳನ್ನ ಭರಿಸುವುದಾಗಿ ಹೇಳಿದ್ದಾರೆ. ಅಸ್ಪೃಶ್ಯತೆ ನಿವಾರಣೆಗೆ ಇಡೀ ರಾಜ್ಯದಲ್ಲಿ ಬಹುದೊಡ್ಡ ಆಂದೋಲವನ್ನ ಪ್ರಾರಂಭಿಸಲು ಮುಂದಾಗಿದ್ದು, ಒಬ್ಬ ಮನುಷ್ಯನನ್ನ ಒಬ್ಬ ಮನಷ್ಯ ಮುಟ್ಟಲಾರದ ಪರಿಸ್ಥಿತಿ ಇರುವುದು ದುರದೃಷ್ಟ, ಹೀಗಾಗಿ ಎಲ್ಲ ದಲಿತರು ಸಮಾನವಾಗಿ ಬದುಕಲು ಅವಕಾಶ ಮಾಡಿಕೊಡಲು ಬದ್ದರಾಗಿರುತ್ತೇವೆ ಎಂದರು.

ಇನ್ನು ಪಿಎಫ್​ಐ ಬ್ಯಾನ್​ ಮಾಡಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಸರ್ಕಾರ ಗುಪ್ತ ಮಾಹಿತಿಯನ್ನ ಆಧರಿಸಿ ಕೆಲವರ‌‌ನ್ನ ಬಂಧಿಸಿದ್ದು, ಅದರ ಭಾಗವಾಗಿ ಕೆಲ ಸಂಘಟನೆಗಳನ್ನ ಬ್ಯಾನ್ ಮಾಡಿದ್ದಾರೆ. ಇದರ ಉದ್ದೇಶ ಕಾನೂನು ಕೈಗೆತ್ತಿಕೊಳ್ಳುವ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ತಡೆಯುವುದು ಎಂದರು. ಭಯೋತ್ಪಾದನೆ ಮಾಡುವ ಯಾವುದೇ ಶಕ್ತಿಯಾಗಲಿ ಅದನ್ನ ನಿಯಂತ್ರಣ ಮಾಡುವುದು ಕೇಂದ್ರ ಸರ್ಕಾರದ ಕೆಲಸ ಅದನ್ನ ಮಾಡಿದೆ ಎಂದು ಹೇಳಿದರು.

ಬಳಿಕ ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆ ಕುರಿತು ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆ ಪಾದ ಯಾತ್ರೆಗಳು ಸಹಜ. ವಿರೋಧ ಪಕ್ಷದವರು ಈ ಯಾತ್ರೆಯಿಂದ, ಬಿಜೆಪಿ ಮೇಲೆ ಯಾವುದೆ ಪರಿಣಾಮ ಬೀರುವುದಿಲ್ಲ, ವಿರೋಧ ಪಕ್ಷವಾಗಿ ಅವರ ಪಾದ ಯಾತ್ರೆಯನ್ನ ನಾವು ಸ್ವಾಗತ ಮಾಡುತ್ತೇವೆ ಎಂದರು‌.

ಇದನ್ನೂ ಓದಿ: ದಲಿತ ಬಾಲಕ ದೇವರನ್ನು ಮುಟ್ಟಿದ್ದಕ್ಕೆ ದಂಡದ ಬೆದರಿಕೆ.. ಕೋಲಾರದಲ್ಲಿ ಎಂಟು ಜನರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.