ETV Bharat / state

ಕೊನೆ ಶ್ರಾವಣ ಶನಿವಾರ: ಚಿಕ್ಕತಿರುಪತಿಯ ವೆಂಕಟೇಶ್ವರನ ದರ್ಶನಕ್ಕೆ ಹರಿದುಬಂದ ಭಕ್ತ ಸಾಗರ - venkateshwara temple

ಕರ್ನಾಟಕದ ಚಿಕ್ಕತಿರುಪತಿಯೆಂದೇ ಖ್ಯಾತಿಪಡೆದ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕತಿರುಪತಿಯ ಅಭಯವೆಂಕಟರಮಣ ಸ್ವಾಮಿ ದೇವಾಲಯಗಳಲ್ಲಿ ಕೊನೆ ಶ್ರಾವಣ ಶನಿವಾರ ಪ್ರಯುಕ್ತ ವಿಶೇಷ ಪೂಜೆ ಅಭಿಷೇಕ ಮಾಡಲಾಯಿತು.

ಅಭಯವೆಂಕಟರಮಣ ಸ್ವಾಮಿ
author img

By

Published : Aug 25, 2019, 6:56 AM IST

ಕೋಲಾರ : ಶ್ರಾವಣ ಮಾಸ ಅಂದ್ರೆ ಹಬ್ಬಗಳ ಮಾಸ, ಸಮೃದ್ದಿಯ ಮಾಸ, ಶುಭ ನಕ್ಷತ್ರಗಳ ಮಾಸ,ಎಂದು ಹೇಳಲಾಗುತ್ತದೆ. ಹಾಗಾಗಿ ಶ್ರಾವಣ ಮಾಸದ ನಾಲ್ಕನೇ ಶನಿವಾರ ದೇವಾಲಯಗಳಲ್ಲಿ ಅದರಲ್ಲೂ ವೆಂಕಟೇಶ್ವರಸ್ವಾಮಿಯ ದೇವಾಲಯಗಳಲ್ಲಿ ಭಕ್ತ ಸಾಗರವೇ ಹರಿದು ಬಂದಿತ್ತು. ವೆಂಕಟೇಶ್ವರನ ಭಕ್ತಿಯಲ್ಲಿ ಮಿಂದೆದ್ದು ಭಕ್ತರು ಏಳುಕುಂಡಲವಾಡ ವೆಂಕಟರಮಣ ಗೋವಿಂದ ಗೋವಿಂದ ಅಂಥ ಸ್ಮರಣೆ ಮಾಡ್ತಿದ್ರು..

ಕೊನೆ ಶ್ರಾವಣ ಶನಿವಾರ ಪ್ರಯುಕ್ತ ಚಿಕ್ಕತಿರುಪತಿಯಲ್ಲಿ ವಿಶೇಷ ಪೂಜೆ

ಕರ್ನಾಟಕದ ಚಿಕ್ಕತಿರುಪತಿಯೆಂದೇ ಖ್ಯಾತಿಪಡೆದ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯ ಅಭಯವೆಂಕಟರಮಣ ಸ್ವಾಮಿ ದೇವಾಲಯಗಳದಲ್ಲಿ ಮುಂಜಾನೆ ಐದು ಗಂಟೆಯಿಂದಲೇ ವಿಶೇಷ ಪೂಜೆ ಅಭಿಷೇಕಗಳು ನಡೆದವು. ಅಲ್ಲದೆ ಲಕ್ಷಾಂತ ಜನ ಭಕ್ತರ ಅಭಯವೆಂಕಟರಮಣಸ್ವಾಮಿ ದರ್ಶನ ಪಡೆದಿದ್ದಾರೆ.

ಆಂಧ್ರದ ತಿರುಮಲ -ತಿರುಪತಿಗೆ ಹೋಗಲಾರದವರು ಮಾಲೂರಿನ ಚಿಕ್ಕತಿರುಪತಿಗೆ ಬಂದು ಅಭಯ ವೆಂಕಟರಮಣಸ್ವಾಮಿಯ ದರ್ಶನ ಪಡೆಯುತ್ತಾರೆ. ಅದ್ರಂತೆ ಎಂ.ಪಿ ಮುನಿಸ್ವಾಮಿ ಹಾಗೂ ನೂತನ ಮಂತ್ರಿಗಳಾದ ಎಚ್.ನಾಗೇಶ್ ಅವರು ದೇವಾಲಯಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಇನ್ನು ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಇಂದು ದೇವಾಲಯದಲ್ಲಿ ವಿಶೇಷ ಭದ್ರತೆ ಹಾಗೂ ನೀರು ಇನ್ನಿತರ ವ್ಯವಸ್ಥೆಗಳನ್ನು ಮಾಡಲಾಗಿತ್ತು.

Intro:ಕೋಲಾರ
ದಿನಾಂಕ - ೨೪-೦೮-೧೯
ಸ್ಲಗ್ - ಕೊನೆಯ ಶ್ರಾವಣ
ಫಾರ್ಮೆಟ್ - ಪ್ಯಾಕೇಜ್

ಆಂಕರ್: ಶ್ರಾವಣ ಮಾಸ ಅಂದ್ರೆ ಹಬ್ಬಗಳ ಮಾಸ, ಸಮೃದ್ದಿಯ ಮಾಸ, ಶುಭ ನಕ್ಷತ್ರಗಳ ಮಾಸ,ಎಂದು ಹೇಳಲಾಗುತ್ತದೆ. ಹಾಗಾಗಿ ಇವತ್ತು ಶ್ರಾವಣ ಮಾಸದ ನಾಲ್ಕನೇ ಶನಿವಾರ ದೇವಾಲಯಗಳಲ್ಲಿ ಅದರಲ್ಲೂ ವೆಂಕಟೇಶ್ವರಸ್ವಾಮಿಯ ದೇವಾಲಯಗಳಲ್ಲಿ ಭಕ್ತ ಸಾಗರವೇ ಹರಿದು ಬಂದಿತ್ತು.ವೆಂಕಟೇಶ್ವರನ ಭಕ್ತಿಯಲ್ಲಿ ಮಿಂದೆದ್ದು ಭಕ್ತರು ಏಳುಕುಂಡಲವಾಡ ವೆಂಕಟರಮಣ ಗೋವಿಂದ ಗೋವಿಂದ ಅಂಥ ಸ್ಮರಣೆ.. ಮಾಡ್ತಿದ್ರು..
Body:ವಾಯ್ಸ್ ಓವರ್: ಅದ್ದೂರಿಯಾಗಿ ಅಲಂಕೃತಗೊಂಡಿರುವ ಅಭಯ ವೆಂಕಟರಮಣಸ್ವಾಮಿ, ನೋಡಿದಷ್ಷೂ ದೂರ ಭಕ್ತರ ಸಾಲು ಸಾಲು, ಎಲ್ಲರ ಬಾಯಲ್ಲೂ ವೆಂಕಟರಮಣ ಗೋವಿಂದಾ ಗೋವಿಂದಾ ಅನ್ನೋ ಸ್ಮರಣೆ, ಇದೆಲ್ಲಾ ಕಂಡು ಬಂದಿದ್ದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯಲ್ಲಿ. ಶ್ರಾವಣ ಮಾಸ ಅಂದ್ರೆ ಅದು ವಿಷ್ಣುವಿನ ಮಾಸ ಎಂದು ಹೇಳಲಾಗುತ್ತದೆ ಕಾರಣ ಮಾಹಾವಿಷ್ಣುವು ಶ್ರಾವಣ ಮಾಸದಲ್ಲಿ ಜನಿಸಿದ ಅನ್ನೋ ಕಾರಣಕ್ಕೆ ಶ್ರಾವಣ ಮಾಸದಲ್ಲಿ ವೆಂಕಟೇಶ್ವರನಿಗೆ ವಿಶೇಷ ಪೂಜೆ ಅಲಂಕಾರವನ್ನು ಏರ್ಪಡಿಸಲಾಗಿರುತ್ತದೆ.ಅದರಲ್ಲೂ ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳ ಸಾಲು, ೧೭ ನಕ್ಷತ್ರಗಳು ಒಂದೇ ರೇಖೆಯಲ್ಲಿ ಬರುವ ಮೂಲಕ ಉತ್ತಮ ಮಳೆ ಬೆಳೆ ಸಂಮೃದ್ದಿಯನ್ನು ನೀಡುತ್ತದೆ ಅನ್ನೋ ಕಾರಣಕ್ಕೆ ಈಮಾಸವನ್ನು ಸಮೃದ್ದಿಯ ಮಾಸ ಎಂದು ಹೇಳಲಾಗುತ್ತದೆ. ಅದಕ್ಕಾಗಿನೆ ಇಂದು ವೆಂಕಟೇಶ್ವರ ಸ್ವಾಮಿಯ ದೇವಾಲಯಗಳಲ್ಲಿ ಭಕ್ತ ಸಾಗರ ಹರಿದು ಬಂದಿತ್ತು. ಅದರಂತೆ ಕರ್ನಾಟಕದ ಚಿಕ್ಕತಿರುಪತಿಯೆಂದೇ ಖ್ಯಾತಿಪಡೆದ ಅಭಯವೆಂಕಟರಮಣ ಸ್ವಾಮಿ ದೇವಾಲಯಗಳದಲ್ಲಿ ಮುಂಜಾನೆ ಐದು ಗಂಟೆಯಿಂದಲೇ ವಿಶೇಷ ಪೂಜೆ ಅಭಿಷೇಕಗಳು ನಡೆಯುತ್ತಿವೆ. ಅಲ್ಲದೆ ಅಭಯವೆಂಕಟರಮಣಸ್ವಾಮಿ ಯನ್ನು ದರ್ಶನ ಮಾಡಲು ಲಕ್ಷಾಂತ ಜನ ಭಕ್ತರ ಆಗಮಿಸುತ್ತಿದ್ದಾರೆ.

ಬೈಟ್:೧ ನರಸಿಂಹಾಚಾರ್ (ಪ್ರಧಾನ ಅರ್ಚಕರು)

ವಾಯ್ಸ್ ಓವರ್: ಇನ್ನು ಶ್ರಾವಣ ಮಾಸವನ್ನು ಪ್ರಮುಖವಾಗಿ ದೇವರ ಪೂಜೆ, ವ್ರತ, ಜಪ, ತಪಕ್ಕೆ, ಉತ್ತಮವಾದ ಮಾಸವೆಂದು ಹೇಳಲಾಗುತ್ತದೆ ಹಾಗಾಗಿನೆ ಈ ಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಗಳಿಗೆ ಭಕ್ತರು ಬಂದು ತಮ್ಮ ಬೇಡಿಕೆಗಳನ್ನು ದೇವರ ಮುಂದಿಡುತ್ತಾರೆ. ಅದರಂತೆ ಚಿಕ್ಕತಿರುಪತಿಯಲ್ಲಿ ವೆಂಕಟರಮಣಸ್ವಾಮಿಯ ದರ್ಶನ ಮಾಡಲು ಕರ್ನಾಟಕ ಮಾತ್ರವಲ್ಲದೆ ಆಂದ್ರ ಹಾಗೂ ತಮಿಳುನಾಡಿನಿಂದಲೂ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ್ರು. ಆಂದ್ರದ ತಿರುಮಲ -ತಿರುಪತಿಗೆ ಹೋಗಲಾರದವರು ಮಾಲೂರಿನ ಚಿಕ್ಕತಿರುಪತಿಗೆ ಬಂದು ಅಭಯ ವೆಂಕಟರಮಣಸ್ವಾಮಿಯ ದರ್ಶನ ಪಡೆಯುತ್ತಾರೆ. ಅದ್ರಂತೆ ಎಂ.ಪಿ ಮುನಿಸ್ವಾಮಿ ಹಾಗೂ ನೂತನ ಮಂತ್ರಿಗಳಾದ ಎಚ್.ನಾಗೇಶ್ ಅವರು ದೇವಾಲಯಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾದ್ರು. ಇನ್ನು ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಇಂದು ದೇವಾಲಯದಲ್ಲಿ ವಿಶೇಷ ಭದ್ರತೆ ಹಾಗೂ ನೀರು ಇನ್ನಿತರ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಬೈಟ್:೨ (ಭಕ್ತಾದಿ)Conclusion:ವಾಯ್ಸ್ ಓವರ್: ಒಟ್ಟಾರೆ ಇಂದು ಶ್ರಾವಣ ಮಾಸದ ನಾಲ್ಕನೇ ಶನಿವಾರ ಆದ ಕಾರಣಕ್ಕೆ ಕರ್ನಾಟಕದ ತಿರುಪತಿ ಎಂದೇ ಖ್ಯಾತಿ ಪಡೆದ ಚಿಕ್ಕತಿರುಪತಿಯ ಅಭಯಹಸ್ತ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಲಕ್ಷಾಂತರ ಸಂಖ್ಯೆಯ ಜನರು ಭಕ್ತಿಯಲ್ಲಿ ಮಿಂದೆದ್ದು ದೇವರ ಕೃಪೆಗೆ ಪಾತ್ರರಾದ್ರು.

ಮಹೇಶ್ ಈಟಿವಿ ಭಾರತ ಕೋಲಾರ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.