ಕೋಲಾರ: ಆಗಸ್ಟ್ ತಿಂಗಳು ಕಳೆದರೂ ಜಿಲ್ಲೆಯಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಚಿಕ್ಕಅಯ್ಯೂರು ಗ್ರಾಮದ ಗ್ರಾಮಸ್ಥರು ಮತ್ತು ಮಕ್ಕಳು ಮಳೆರಾಯನನ್ನು ಕೂರಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಮಣ್ಣಿನಲ್ಲಿ ಮಾಡಿದ್ದ ಮಳೆರಾಯನ ಮೂರ್ತಿಯನ್ನು ಊರೆಲ್ಲ ಮೆರವಣಿಗೆ ನಡೆಸಿದರು. ಊರಿನ ಮನೆ ಮನೆಯಲ್ಲೂ ಪೂಜೆ ನೆರವೇರಿಸಲಾಯಿತು. ನಂತರ ಮಳೆರಾಯನನ್ನು ಗ್ರಾಮದಲ್ಲಿನ ಬಾವಿಯಲ್ಲಿ ನಿಮಜ್ಜನ ಮಾಡಿದರು.
ಬಳಿಕ ಬಾಯಿ ಬಡಿದುಕೊಂಡರು. ಹೀಗೆ ಮಾಡಿದ್ರೆ ಮಳೆ ಬರುತ್ತದೆ ಅನ್ನೋದು ನಂಬಿಕೆ ಈ ಭಾಗದ ಜನರಲ್ಲಿದೆ.