ಕೋಲಾರ: ಐದು ಅಂಗಡಿಗಳ ಶೆಟರ್ ಮುರಿದು ಸರಣಿಗಳ್ಳತನ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಾಯಲ್ಪಾಡು ಗ್ರಾಮದ ಜನರಲ್ ಸ್ಟೋರ್, ಜ್ಯುವೆಲ್ಲರಿ ಶಾಪ್, ಪೆಟ್ರೋಲ್ ಅಂಗಡಿ, ಚಿಲ್ಲರೆ ಅಂಡಿಗಗಳು ಸೇರಿದಂತೆ ಒಟ್ಟು ಐದು ಅಂಗಡಿಗಳಲ್ಲಿ ಚೋರರು ತಮ್ಮ ಕೈಚಳಕ ತೋರಿಸಿದ್ದಾರೆ.
ಇನ್ನು ಸುಮಾರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದು, ರಾತ್ರಿ ಪಾಳಯದಲ್ಲಿ ಪೊಲೀಸರು ಗಸ್ತು ಮಾಡದೆ ಇರುವುದರಿಂದ ಈ ಘಟನೆ ಜರುಗಿದೆ ಎಂದು ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ರಾಯಲ್ಪಾಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.