ETV Bharat / state

ಜನರ ಶಾಂತಿ, ನೆಮ್ಮದಿಗಾಗಿ ಕೊಡಗಿನಲ್ಲಿ 144 ಸೆಕ್ಷನ್ ಜಾರಿ: ಗೃಹ ಸಚಿವ ಆರಗ ಜ್ಞಾನೇಂದ್ರ - ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ

ಕೊಡಗು ಚಲೋ ಮಾಡಲು ಆಗುವುದಿಲ್ಲ, ಯಾವುದೇ ಪಕ್ಷಕ್ಕೂ ಪ್ರತಿಭಟನೆ ಮಾಡುವ ಅವಕಾಶವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

section-144-enforced-in-kodagu-for-maintenance-of-peace-says-araga-jnanendra
ಜನರ ಶಾಂತಿ, ನೆಮ್ಮದಿಗಾಗಿ ಕೊಡಗಿನಲ್ಲಿ 144 ಸೆಕ್ಷನ್ ಜಾರಿ: ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Aug 23, 2022, 3:32 PM IST

ಕೋಲಾರ: ಕಾಂಗ್ರೆಸ್​ನ ಕೊಡಗು ಚಲೋ ವಿಚಾರದಲ್ಲಿ ಯಾವ ಭಯ ಇಲ್ಲ. ನಮಗೆ ಜನರ ಶಾಂತಿ, ನೆಮ್ಮದಿ ಮುಖ್ಯ. ಹೀಗಾಗಿ ಕೊಡಗಿನಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಜಿಲ್ಲೆಯ ಕೆಜಿಎಫ್​ನಲ್ಲಿ ಇಂದು ನೂತನ ಡಿಆರ್ ಕಚೇರಿ ಉದ್ಘಾಟನೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡು ಪಕ್ಷಗಳು ಜಗಳ ಮಾಡಿಕೊಳ್ಳುವ ಮೂಲಕ ಕೊಡಗಿನ ಶಾಂತಿ ಕದಡಬಾರದು. ಕೊಡಗು ಚಲೋ ಮಾಡಲು ಆಗುವುದಿಲ್ಲ, ಯಾವುದೇ ಪಕ್ಷಕ್ಕೂ ಅಲ್ಲಿ ಪ್ರತಿಭಟನೆ ಮಾಡುವ ಅವಕಾಶವಿಲ್ಲ ಎಂದರು.

ಸಾವರ್ಕರ್ ಫೋಟೋ ವಿವಾದ ಶಿವಮೊಗ್ಗದಲ್ಲಿ ಆರಂಭವಾಗಿತ್ತು. ಸಾವರ್ಕರ್ ಓರ್ವ ಗೌರವಾನ್ವಿತ ಸ್ವಾತಂತ್ರ್ಯ ಹೋರಾಟಗಾರ. ಆದರೆ, ಬ್ರಿಟಿಷ್ ಬೂಟ್ ನೆಕ್ಕಿದವನು ಅಂತಾ ಹೇಳಿದ್ದರಿಂದ ಇಷ್ಟೊಂದು ಗಲಾಟೆ ಸೃಷ್ಟಿ ಶುರುವಾಗಿದೆ. ಈಗ ಎಲ್ಲೆಡೆ ಶಾಂತಿ ಸುವ್ಯವಸ್ಥೆ ಇದೆ ಎಂದರು.

ಜನರ ಶಾಂತಿ, ನೆಮ್ಮದಿಗಾಗಿ ಕೊಡಗಿನಲ್ಲಿ 144 ಸೆಕ್ಷನ್ ಜಾರಿ: ಗೃಹ ಸಚಿವ ಆರಗ ಜ್ಞಾನೇಂದ್ರ

ಇದನ್ನೂ ಓದಿ: ಮಡಿಕೇರಿ ಚಲೋ ಮುಂದೂಡಿಕೆ, ಚರ್ಚಿಸಿ ಮುಂದಿನ ದಿನಾಂಕ ನಿರ್ಧಾರ: ಸಿದ್ದರಾಮಯ್ಯ

ಗಣೇಶ ಹಬ್ಬ ರಾಜ್ಯದಲ್ಲಿ ಶಾಂತಿಯುತವಾಗಿ ನಡೆಯಬೇಕು. ಸೂಕ್ಷ್ಮ ಪ್ರದೇಶಗಳಲ್ಲೂ ಗಣೇಶನ ಹಬ್ಬ ಮಾಡಲು ನಿರ್ಧಾರ ಮಾಡಿದ್ದೇವೆ. ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು, ನಾವು ಅಲ್ಲಿ ಭದ್ರತೆ ಕೊಡುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಕೆ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ನನಗೆ ಇದರ ಬಗ್ಗೆ ಮಾಹಿತಿ ಇಲ್ಲ. ಮಾಹಿತಿ ಪಡೆದು ಇದರ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ಅಲ್ಲದೇ, ಲೋಕಾಯುಕ್ತ ಬಲಪಡಿಸುತ್ತೇವೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿದೆ. ಈ ಬಗ್ಗೆ ಕ್ಯಾಬಿನೆಟ್​ನಲ್ಲೂ ಚರ್ಚೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಎಸಿಬಿ ರದ್ದುಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಅರ್ಜಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.