ಕೋಲಾರ: ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ 18 ಜನರ ವರದಿ ನೆಗೆಟಿವ್ ಬಂದಿರುವ ಹಿನ್ನಲೆ ಜಿಲ್ಲಾಡಳಿತ ಕೊಂಚ ನಿರಾಳವಾಗಿದೆ.
ಜಿಲ್ಲೆಯ ಎರಡು ಕುಟುಂಬಗಳೊಂದಿಗೆ ಸೋಂಕಿತ ವ್ಯಕ್ತಿ ಸಂಪರ್ಕ ಹೊಂದಿದ್ದ ಪರಿಣಾಮ, ಸುಮಾರು 21 ಜನರನ್ನ ಹೋಂ ಕ್ವಾರಂಟೇನ್ ಮಾಡಲಾಗಿತ್ತು. ಜೊತೆಗೆ 21 ಜನರ ರಕ್ತ ಮಾದರಿಗಳನ್ನ ಪರೀಕ್ಷಿಸಲಾಗಿದ್ದು, ಈ ಹಿನ್ನಲೆ 18 ಜನರ ವರದಿ ನೆಗೆಟಿವ್ ಬಂದಿದೆ. ಇನ್ನು ಉಳಿದ ಮೂವರ ವರದಿಗಾಗಿ ಕಾದು ಕುಳಿತಿರುವ ಜಿಲ್ಲಾಡಳಿತ ಸಧ್ಯಕ್ಕೆ ಕೊಂಚ ನಿರಾಳವಾಗಿದೆ.
ಇನ್ನು ಕೋಲಾರ ಗಡಿಭಾಗವಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೈಲು ನರಸಾಪುರ ಗ್ರಾಮದ ಕೊರೊನಾ ಸೋಂಕಿತ ವ್ಯಕ್ತಿ, ಕೋಲಾರ ತಾಲೂಕಿನ ನರಸಾಪುರ ಗ್ರಾಮದ ಎರಡು ಕುಟುಂಬಗಳೊಂದಿಗೆ ಸಂಪರ್ಕ ಹೊಂದಿದ್ದ ಪರಿಣಾಮ, ನರಸಾಪುರ ಗ್ರಾಮದ ಸುಮಾರು 21 ಜನರನ್ನ ಹೊಂ ಕ್ವಾರಂಟೈನ್ ಮಾಡಲಾಗಿತ್ತು.
ಈ ಮೂಲಕ ನರಸಾಪುರ, ವೇಮಗಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ರು. ಇದೀಗ 18 ಜನರ ವರದಿ ನೆಗಟೀವ್ ಬಂದಿರುವ ಹಿನ್ನಲೆ ನರಸಾಪುರ ಗ್ರಾಮದ ಜನತೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಜೊತೆಗೆ ಮೂವರ ವರದಿಗಾಗಿ ಕಾದುಕುಳಿತಿದ್ದಾರೆ.