ಕೋಲಾರ: ಖಾಸಗಿ ಕಾಂಪ್ಲೆಕ್ಸ್ವೊಂದಕ್ಕೆ ಅಡ್ಡಲಾಗಿದೆ ಎಂದು ಬಡವರ ಅಂಗಡಿಗಳನ್ನು ಜೆಸಿಬಿ ಮೂಲಕ ಕೆಡವಿದ್ದ ಅಧಿಕಾರಿಗಳ ವಿರುದ್ಧ ಶಾಸಕ ರಮೇಶ್ ಕುಮಾರ್ ಹರಿಹಾಯ್ದಿದ್ದಾರೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಪುಂಗನೂರು ಕ್ರಾಸ್ ಬಳಿ ಈ ಘಟನೆ ಜರುಗಿದ್ದು, ಪಿಡ್ಲ್ಯೂಡಿ ಅಧಿಕಾರಿಗಳ ವಿರುದ್ಧ ಶಾಸಕ ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸಪುರದ ಪುಂಗನೂರು ಕ್ರಾಸ್ ಬಳಿಯ ರಸ್ತೆ ಬದಿಯಲ್ಲಿ ಸಣ್ಣ ಅಂಡಿಗಳನ್ನಿಟ್ಟುಕೊಂಡು ಬಡವರು ಜೀವನ ಸಾಗಿಸುತ್ತಿದ್ದರು. ಈ ವೇಳೆ ಪುಂಗನೂರು ಶಾಸಕರೊಬ್ಬರು ಇಲ್ಲಿ ಜಮೀನನ್ನ ತೆಗೆದುಕೊಂಡಿದ್ದು, ಅದಕ್ಕೆ ಹೊಂದಿಕೊಂಡಂತಿರುವ ಕಾಂಪ್ಲೆಕ್ಸ್ ಖರೀದಿ ಮಾಡುವ ಸಲುವಾಗಿ, ಕಾಂಪ್ಲೆಕ್ಸ್ಗೆ ಅಡ್ಡಲಾಗಿದ್ದ ಅಂಗಡಿಗಳನ್ನ ತೆರವುಗೊಳಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹೀಗಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಯಾದ ಜಗದೀಶ್ ಹಾಗೂ ಕಿರಿಯ ಅಧಿಕಾರಿಗಳು ಏಕಾಏಕಿ ಬಡವರ ಮಳಿಗೆಗಳನ್ನು ತೆರವು ಮಾಡಿದ್ದು, ಅಂಗಡಿಗಳಲ್ಲಿದ್ದಂತಹ ವಸ್ತುಗಳನ್ನ ಸಹ ನಾಶಪಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್, ಅಧಿಕಾರಿಗಳ ಈ ಕೃತ್ಯಕ್ಕೆ ಛೀಮಾರಿ ಹಾಕಿ, ಹತ್ತು ದಿನಗಳೊಳಗೆ ಬಡವರ ಅಂಗಡಿಗಳನ್ನ ಕಟ್ಟಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಕೋವಿಡ್ ಅಟ್ಟಹಾಸ: ತುಮಕೂರು ಕೋವಿಡ್ ಟೆಸ್ಟಿಂಗ್ ಸೆಂಟರ್ಗಳ ಕಾರ್ಯವೈಖರಿ ಹೇಗಿದೆ?