ETV Bharat / state

ಕೋಲಾರದಲ್ಲಿ ತುಂತುರು ಮಳೆ: ಒಣಗಿ ಹೋಗುತ್ತಿದ್ದ ಬೆಳೆಗೆ ಕೊಂಚ ಜೀವಕಳೆ!

ಬರಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ಎರಡು ಮೂರು ದಿನಗಳಿಂದ ತುಂತುರು ಮಳೆ ಸುರಿದಿದ್ದು, ಪರಿಣಾಮ ಒಣಗುವ ಹಂತ ತಲುಪಿದ್ದ ಹೊಲಗಳಲ್ಲಿ ಒಂದಷ್ಟು ಜೀವಕಳೆ ಬಂದಿದೆ.

ಅಕಾಲಿಕ ತುಂತುರು ಮಳೆ: ರೈತರಲ್ಲಿ ತಂದ ಹರ್ಷ
author img

By

Published : Aug 25, 2019, 6:51 PM IST

ಕೋಲಾರ: ಜಿಲ್ಲೆಯಲ್ಲಿ ಜುಲೈ ತಿಂಗಳು ಕಳೆದರೂ ಸಾಕಷ್ಟು ಮಳೆಯಾಗದ ಪರಿಣಾಮ ರೈತರು ಒಣ ಭೂಮಿಯಲ್ಲೇ ಬಿತ್ತನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು, ಕಳೆದ ಮೂರು ನಾಲ್ಕು ವರ್ಷಗಳಿಂದ ಮೇಲಿಂದ ಮೇಲೆ ಭೀಕರ ಬರಕ್ಕೆ ತುತ್ತಾಗಿರುವ ಕೋಲಾರ ಜಿಲ್ಲೆಯ ಜನರು ಈ ವರ್ಷವೂ ಬರಕ್ಕೆ ತುತ್ತಾಗಿದ್ದಾರೆ. ಬರದಿಂದ ತತ್ತರಿಸಿ ಹೋಗಿರುವ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಬಿದ್ದ ತುಂತುರು ಮಳೆಯಿಂದ ಬೆಳೆಗಳಿಗೆ ಕೊಂಚ ಜೀವ ಬಂದಿದೆ.

ತುಂತುರು ಮಳೆ: ರೈತರಲ್ಲಿ ಹರ್ಷ

ಹೀಗೆ ತುಂತುರು ಮಳೆಯಾದ್ರು ಮುಂದುವರೆದರೆ ಈ ವರ್ಷದ ಬೆಳೆ ಇಲ್ಲವಾದ್ರು ಕನಿಷ್ಠ ಜನ-ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿಗಾದ್ರು ಅನುಕೂಲವಾಗುತ್ತದೆ ಅನ್ನೋದು ರೈತರ ಲೆಕ್ಕಾಚಾರ. ಇನ್ನು ಮುಂದಿನ ಹತ್ತು ಹದಿನೈದು ದಿನಗಳಲ್ಲಿ ಒಳ್ಳೆಯ ಮಳೆಯಾದ್ರೆ ರೈತರ ನಿರೀಕ್ಷೆಯಂತೆ ಒಂದಷ್ಟು ಬೆಳೆಗಳು ರೈತರ ಕೈ ಹಿಡಿಯುತ್ತವೆ. ಇಲ್ಲವಾದಲ್ಲಿ ರೈತರ ಪರಿಸ್ಥಿತಿ ಹೇಳತೀರದಾಗುತ್ತದೆ. ಹಾಗಾಗಿ ಸರ್ಕಾರ ನಮ್ಮ ಸಂಕಷ್ಟಕ್ಕೆ ನೆರವು ನೀಡಬೇಕು ಅನ್ನೋದು ರೈತರ ಅಳಲಾಗಿದೆ.

Intro:ಜಿಲ್ಲೆ : ಕೋಲಾರ
ದಿನಾಂಕ : 25-08-2019
ಫಾರ್ಮೆಟ್​: PKG
ಸ್ಲಗ್​: ತುಂತುರು ಮಳೆ ತಂದ ಬೆಳೆ..

ಆಂಕರ್: ಆ ಜಿಲ್ಲೆಯ ರೈತರು ದೇವರ ಮೇಲೆ ಬಾರ ಹಾಕಿ ಒಣ ಭೂಮಿಯಲ್ಲಿ ತಮ್ಮ ಬದುಕನ್ನು ಬಿತ್ತಿದ್ದರು, ಮಳೆಬಾರದೆ ಇನ್ನೇನು ಎಲ್ಲವೂ ಮುಗಿಯಿತು ಅನ್ನೋ ವೇಳೆ ಆ ತುಂತುರು ಮಳೆ ಮರು ಜೀವ ನೀಡಿದೆ, ಮಣ್ಣಲ್ಲೇ ಮಣ್ಣಾಗುತ್ತಿದ್ದ ಬೆಳೆಗೆ ಕೊಂಚ ಹಸಿರು ಕಳೆ ಮೂಡುವಂತೆ ಮಾಡಿದೆ...
Body:ವಾ/ಓ:1 ಒಣ ಭೂಮಿಯಲ್ಲೇ ಬಿತ್ತನೆ ಮಾಡುತ್ತಿರುವ ರೈತರು, ಮತ್ತೊಂದೆಡೆ ಭೂಮಿಯನ್ನು ಸೀಳಿ ಮೇಲೆದ್ದಿರುವ ಬೆಳೆ,ಅಲ್ಲೇ ಕೆಲಸದಲ್ಲಿ ತೊಡಗಿರುವ ರೈತರು ಇದೆಲ್ಲಾ ಕಂಡು ಬಂದಿದ್ದು ಬರದ ನಾಡು ಕೋಲಾರದಲ್ಲಿ. ಹೌದು ಈಬಾರಿ ಜುಲೈ ತಿಂಗಳು ಕಳೆದ್ರು ಕೋಲಾರ ಜಿಲ್ಲೆಯಲ್ಲಿ ಒಂದು ಹನಿ ಮಳೆಯಾಗಿಲ್ಲ, ಮಳೆಗಾಗಿ ಕಾದು ಕುಳಿತಿದ್ದ ರೈತರು ಆದಂಗಾಗಲಿ ಎಂದು ದೇವರ ಮೇಲೆ ಬಾರ ಹಾಕಿ ಒಣ ಭೂಮಿಯಲ್ಲೇ ಬಿತ್ತನೆ ಮಾಡಿದ್ರು. ಆದ್ರೆ ಕಳೆದ ಹದಿನೈದು ದಿನಗಳಲ್ಲಿ ಉತ್ತರ ಕರ್ನಾಟಕ ಸೇರಿದಂತೆ ಹಲವೆಡೆ ಮಳೆ ಪ್ರವಾಹ ಪರಿಸ್ಥಿತಿ ನಿರ್ಮಾಣ ಮಾಡಿದ್ರೆ. ಕೋಲಾರದಲ್ಲಿ ಎರಡು ಮೂರು ದಿನಗಳ ಕಾಲ ಬೆಂಬಿಡದೆ ತುಂತುರು ಜಡಿ ಮಳೆ ಸುರಿದಿತ್ತು, ಪರಿಣಾಮ ಒಣಗುವ ಹಂತ ತಲುಪಿದ್ದ ಹೊಲಗಳಲ್ಲಿ ಒಂದಷ್ಟು ಜೀವ ಕಳೆಬಂದಿದೆ ಒಣಗಿ ಹೋದಿದ್ದ ಹೊಲಗಳಲ್ಲಿ ಒಂದಷ್ಟು ಬೆಳೆಗಳು ಚಿಗುರೊಡೆಯುತ್ತಿದೆ. ಹೊಲಗಳಲ್ಲಿ ಬಿತ್ತನೆ ಮಾಡಿದ್ದ ರಾಗಿ, ಅವರೆ, ಜೋಳ, ನೆಲಗಡನೆ ಬೆಳೆಗಳು ಕೊಂಚ ಹಸಿರಾಗುತ್ತಿವೆ ಇದರಿಂದ ಎಲ್ಲ ಮುಗಿದು ಹೋಯ್ತು ಎಂದುಕೊಂಡಿದ್ದ ರೈತರಲ್ಲಿ ಮತ್ತೆ ಆಸೆ ಚಿಗುರೊಡೆದಿದೆ.

ಬೈಟ್​:1 ಸತೀಶ್​ (ರೈತರು)

ವಾ/ಓ:2 ಇನ್ನು ಕಳೆದ ಮೂರು ನಾಲ್ಕು ವರ್ಷಗಳಿಂದ ಮೇಲಿಂದ ಮೇಲೆ ಭೀಕರ ಬರಕ್ಕೆ ತುತ್ತಾಗಿರುವ ಕೋಲಾರ ಜಿಲ್ಲೆಯ ಜನರು ಈವರ್ಷವೂ ಬರಕ್ಕೆ ತುತ್ತಾಗಿದ್ದಾರೆ. ಬರದಿಂದ ತತ್ತರಿಸಿ ಹೋಗಿರುವ ಜಿಲ್ಲೆಯಲ್ಲಿ ಇತ್ತೀಚೆಗೆ ಬಿದ್ದ ತುಂತುರು ಮಳೆಗೆ ಬೆಳೆಗಳಿಗೆ ಕೊಂಚ ಜೀವ ಬಂದಿದೆ ಆದ್ರೆ ಗಣೇಶ ಹಬ್ಬದ ವೇಳೆಗೆ ಅಲ್ಪ ಸ್ವಲ್ಪವಾದ್ರು ಮಳೆಯಾದ್ರೆ, ಕೊನೆ ಪಕ್ಷ ಈ ವರ್ಷ ಬೆಳೆ ಇಲ್ಲವಾದ್ರು ಕನಿಷ್ಠ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿಗಾದ್ರು ಅನುಕೂಲವಾಗುತ್ತದೆ ಅನ್ನೋದು ರೈತರ ಲೆಕ್ಕಾಚಾರ. ಇನ್ನು ಮುಂದಿನ ಹತ್ತು ಹದಿನೈದು ದಿನಗಳಲ್ಲಿ ಒಳ್ಳೆಯ ಮಳೆಯಾದ್ರೆ ರೈತರ ನಿರೀಕ್ಷೆಯಂತೆ ಒಂದಷ್ಟು ಬೆಳೆಗಳು ರೈತರ ಕೈ ಹಿಡಿಯುತ್ತವೆ ಇಲ್ಲವಾದಲ್ಲಿ ರೈತರ ಪರಿಸ್ಥಿತಿ ಹೇಳತೀರದಾಗುತ್ತದೆ.ಹಾಗಾಗಿ ಸರ್ಕಾರಗಳಾದ್ರು ನಮ್ಮ ಸಂಕಷ್ಟಕ್ಕೆ ನೆರವು ನೀಡಬೇಕು ಅನ್ನೋದು ರೈತರ ಅಳಲು.

ಬೈಟ್​:2 ಶಬರೀಶ್​ (ಸ್ಥಳೀಯರು)Conclusion:ವಾ/ಓ:3 ಒಟ್ಟಾರೆ ಸದಾ ಆಕಾಶ ನೋಡಿಕೊಂಡು ಬರೀ ನಿರೀಕ್ಷೆಗಳಲ್ಲೇ ಜೀವನ ದೂಡುತ್ತಿರುವ ಕೋಲಾರ ಜಿಲ್ಲೆಯ ರೈತರಿಗೆ ಈವರ್ಷವೂ ಮಳೆ ಕೈಕೊಟ್ಟಿದ್ದು ರೈತರ ನಿರೀಕ್ಷೆಯ ಕಟ್ಟೆಯೊಡೆದಿದೆ, ಇನ್ನೇನಿದ್ರು ಜಿಲ್ಲೆಯ ಜನರ ಬದುಕು ದೇವರೇ ಕಾಪಾಡಬೇಕಷ್ಟೇ...
ETV Bharat Logo

Copyright © 2024 Ushodaya Enterprises Pvt. Ltd., All Rights Reserved.