ETV Bharat / state

ನಾಳೆ ಕೋಲಾರಕ್ಕೆ ರಾಹುಲ್​ ಗಾಂಧಿ: ಕುತೂಹಲ ಕೆರಳಿಸಿದ ಭೇಟಿ..! - ಕೋಲಾರದಲ್ಲಿ ರಾಹುಲ್​ ಜೈ ಭಾರತ್​ ರ್ಯಾಲಿ

ನಾಳೆ ರಾಹುಲ್​ ಗಾಂಧಿ ಅವರು ಕೋಲಾರಕ್ಕೆ ಭೇಟಿ ನೀಡಲಿದ್ದಾರೆ. ಜಿಲ್ಲೆಯಲ್ಲಿ 2019 ರಲ್ಲಿ ನೀಡಿದ ಹೇಳಿಕೆಯಿಂದ ಸಂಸದ ಸ್ಥಾನ ಕಳೆದುಕೊಂಡಿದ್ದು, ಇದಾದ ಬಳಿಕದ ಮೊದಲ ಭೇಟಿ ಇದಾಗಿದೆ.

ನಾಳೆ ಕೋಲಾರಕ್ಕೆ ರಾಹುಲ್​ ಗಾಂಧಿ
ನಾಳೆ ಕೋಲಾರಕ್ಕೆ ರಾಹುಲ್​ ಗಾಂಧಿ
author img

By

Published : Apr 15, 2023, 1:35 PM IST

ಬೆಂಗಳೂರು: ಕೋಲಾರದಲ್ಲಿ 2019ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮೋದಿ ಉಪನಾಮ ಬಳಸಿದ್ದರಿಂದ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ನಾಳೆ ಜಿಲ್ಲೆಗೆ ಆಗಮಿಸಲಿದ್ದಾರೆ. ಸಂಸದ ಸ್ಥಾನ ಅನರ್ಹವಾಗಲು ಕಾರಣವಾದ ಹೇಳಿಕೆ ನೀಡಿದ ನಾಡಿನಲ್ಲಿ ನಾಳೆ ನಡೆಯುವ "ಜೈ ಭಾರತ್​" ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ.

ಹಲವು ದಿನಗಳಿಂದ ಮುಂದೂಡುತ್ತಲೇ ಬಂದಿದ್ದ ರಾಹುಲ್​ ಗಾಂಧಿ ಕಾರ್ಯಕ್ರಮ ನಾಳೆ ನಿಗದಿಯಾಗಿದೆ. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಮುಖ್ಯಸ್ಥ ಡಿ ಕೆ ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ.

ನಾಳೆ ಬೆಳಗ್ಗೆ ಬೆಂಗಳೂರಿಗೆ ಆಗಮಿಸುವ ರಾಹುಲ್​ ಗಾಂಧಿ ಕೆಪಿಸಿಸಿ ಕಚೇರಿಯ ಬಳಿ ಹೊಸದಾಗಿ ನಿರ್ಮಿಸಲಾದ ಇಂದಿರಾ ಗಾಂಧಿ ಭವನವನ್ನು ಉದ್ಘಾಟಿಸಲಿದ್ದಾರೆ. 750 ಜನರ ಆಸನ ಸಾಮರ್ಥ್ಯದ ಕಚೇರಿ ಮತ್ತು ಸಭಾಂಗಣ ಇದಾಗಿದೆ. ಬಳಿಕ ಕೋಲಾರ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ.

ಇದಕ್ಕೂ ಮೊದಲು ರಾಹುಲ್​ ಗಾಂಧಿ ನಡೆಸಬೇಕಿದ್ದ ರ‍್ಯಾಲಿಯನ್ನು ಏಪ್ರಿಲ್ 5 ರಂದು ನಿಗದಿಪಡಿಸಲಾಗಿತ್ತು. ನಂತರ ಅದನ್ನು ಏಪ್ರಿಲ್ 9 ಕ್ಕೆ ಮತ್ತು ಏಪ್ರಿಲ್ 16 ಕ್ಕೆ ಮುಂದೂಡಲಾಯಿತು. ಚುನಾವಣಾ ತಯಾರಿ, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಮತ್ತು ಸೂರತ್​ ಕೋರ್ಟಲ್ಲಿ ಪ್ರಕರಣದ ಹಿನ್ನೆಲೆ ಕಾರ್ಯಕ್ರಮ ಸತತವಾಗಿ ಮುಂದೂಡಲ್ಪಟ್ಟಿತ್ತು.

ಕಂಟಕವಾಗಿರುವ ಕೋಲಾರ ಹೇಳಿಕೆ: 2019 ರ ಲೋಕಸಭೆ ಚುನಾವಣೆಯಲ್ಲಿ ಕೋಲಾರದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ರಾಹುಲ್​ ಗಾಂಧಿ ಅವರು ಮೋದಿ ಉಪನಾಮ ಬಳಸಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದವಾಗಿ ಇದರ ವಿರುದ್ಧ ಸೂರತ್​ನಲ್ಲಿ ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ ಮಾನಹಾನಿ ಕ್ರಿಮಿನಲ್​ ಕೇಸ್​ ದಾಖಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ್ದ ಸೂರತ್‌ ನ್ಯಾಯಾಲಯ ಮಾರ್ಚ್ 23 ರಂದು ಆದೇಶ ನೀಡಿದ್ದು, ರಾಹುಲ್​ರನ್ನು ದೋಷಿ ಎಂದು ಘೋಷಿಸಿದೆ. ಅಲ್ಲದೇ, 2 ವರ್ಷಗಳ ಜೈಲು ಶಿಕ್ಷೆ, ದಂಡ ವಿಧಿಸಿತು. ಪ್ರಕರಣದಲ್ಲಿ ಜಾಮೀನು ಕೂಡ ನೀಡಲಾಗಿದೆ. ತೀರ್ಪು ಹೊರಬಿದ್ದ ದಿನದ ನಂತರ ಕ್ರಿಮಿನಲ್​ ಕೇಸಲ್ಲಿ ಶಿಕ್ಷೆಯಾದ ಕಾರಣ ಅವರ ಲೋಕಸಭಾ ಸದಸ್ಯ ಸ್ಥಾನ ಅನರ್ಹಗೊಳಿಸಲಾಗಿದೆ. ತಮಗೆ ನೀಡಲಾದ ಶಿಕ್ಷೆಯ ವಿರುದ್ಧ ರಾಹುಲ್​ ಮೇಲ್ಮನವಿ ಅರ್ಜಿ ಸಲ್ಲಿಕೆ ಮಾಡಿದ್ದು, ಸೂರತ್​ ಸೆಷನ್ಸ್​ ನ್ಯಾಯಾಲಯ ವಿಚಾರಣೆ ನಡೆಸಿದ್ದು, ತೀರ್ಪು ಕಾಯ್ದಿರಿಸಿದೆ.

ರಾಜ್ಯ ವಿಧಾನಸಭೆಗೆ ಮೇ 10 ರಂದು ಚುನಾವಣೆ ಘೋಷಣೆಯಾಗಿದ್ದು, ಭಾನುವಾರದ ಅವರ ಭೇಟಿ ಪಕ್ಷದ ದೃಷ್ಟಿಯಿಂದ ಮಹತ್ವದ್ದಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ವರುಣದ ಟಿಕೆಟ್​ ಪಡೆದಿದ್ದು, ಕೋಲಾರ ಕ್ಷೇತ್ರದಿಂದಲೂ ಸ್ಪರ್ಧೆಗೆ ಮನಸ್ಸು ಮಾಡಿದ್ದಾರೆ. ರಾಹುಲ್​ ಅವರು ಈ ಬಗ್ಗೆ ಮಹತ್ವದ ಘೋಷಣೆ ಮಾಡಲಿದ್ದಾರಾ ಎಂಬ ಕುತೂಹಲವೂ ಇದೆ. ಕಾಂಗ್ರೆಸ್​ 2 ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕೋಲಾರ ಕ್ಷೇತ್ರಕ್ಕೆ ಇನ್ನೂ ತನ್ನ ಅಭ್ಯರ್ಥಿಯನ್ನು ಅಖೈರು ಮಾಡಿಲ್ಲ.

ಓದಿ: ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ: ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.