ಕೋಲಾರ: ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಕಾರ್ಮಿಕ ಸಾವು - ಕೋಲಾರದಲ್ಲಿ ಕುಸಿದು ಬಿದ್ದು ಕಾರ್ಮಿಕ ಸಾವು
ರಾತ್ರಿ ಪಾಳಯದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಿತ್ರಾಣಗೊಂಡು ಕಾರ್ಮಿಕ ಕುಸಿದು ಬಿದಿದ್ದಾರೆ. ಕೂಡಲೇ ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆದಲ್ಲಿಯೇ ಮೃತಪಟ್ಟಿದ್ದಾನೆ.
ಕೋಲಾರ: ಕರ್ತವ್ಯ ನಿರತ ಕಾರ್ಮಿಕನೊಬ್ಬ ಕಾರ್ಖಾನೆಯಲ್ಲಿ ಮೃತಪಟ್ಟಿರುವ ಘಟನೆ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದ ವರಾಕ್ ಕಂಪನಿಯಲ್ಲಿ ನಿನ್ನೆ ತಡರಾತ್ರಿ ಜರುಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಿಸನಹನಹಳ್ಳಿ ಗ್ರಾಮದ ನಾಗೇಶ್ (28) ಮೃತ ಕಾರ್ಮಿಕ.
ರಾತ್ರಿ ಪಾಳಯದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಿತ್ರಾಣಗೊಂಡು ಕಾರ್ಮಿಕ ಕುಸಿದು ಬಿದಿದ್ದಾರೆ. ಕೂಡಲೇ ಆತನನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆದಲ್ಲಿಯೇ ಮೃತಪಟ್ಟಿದ್ದಾನೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೋಷಕರು ಮತ್ತು ಸಂಬಂಧಿಕರು ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಮಗ ನಿನ್ನೆ ರಾತ್ರಿ ಸಹ ಆರೋಗ್ಯವಾಗಿದ್ದ, ಕೆಲಸಕ್ಕೆ ಹೋದಾಗ ತಡರಾತ್ರಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಕಂಪನಿಯಿಂದ ನಮಗೆ ಫೋನ್ ಬಂದಿದ್ದು, ಮಗನ ಸಾವಿಗೆ ಕೆಲಸದ ಒತ್ತಡವೇ ಕಾರಣ ಎಂದು ಆರೋಪಿಸಿದ್ದಾರೆ.
ಇನ್ನು ಕಂಪನಿಯ ಮೇಲ್ವಿಚಾರಕ ಸುನೀಲ್ ತ್ರಿಪಾಟಿ ಮಾತನಾಡಿ, ನಾವು ಕಾರ್ಮಿಕರಿಗೆ ಯಾವುದೇ ರೀತಿಯ ಒತ್ತಡ ಹೇರುತ್ತಿಲ್ಲ, ಮತ್ತು ಹೆಚ್ಚಿನ ಕೆಲಸ ಮಾಡಿಸಿಲ್ಲ. ಕಾನೂನಿನಡಿ ಕಾರ್ಮಿಕನಿಗೆ ಸೇರಬೇಕಾದ ಎಲ್ಲ ಸವಲತ್ತನ್ನು ಕಂಪನಿ ನೀಡುತ್ತದೆ ಎಂದು ಭರವಸೆ ನೀಡಿದರು.
ಆದರೆ, ಪೋಷಕರು ಮತ್ತು ಸಂಬಂಧಿಕರು ಇದಕ್ಕೆ ಒಪ್ಪದ ಕಾರಣ ಈ ಪ್ರಕರಣ ವೇಮಗಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸದ್ಯ ವೇಮಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.