ETV Bharat / state

ಕಳಪೆ ರಸ್ತೆ ಕಾಮಗಾರಿ : ಆಂಜನೇಯ ವೇಷ ತೊಟ್ಟು ವಿನೂತನ ಪ್ರತಿಭಟನೆ - ಕೋಲಾರದಲ್ಲಿ ಕಳಪೆ ರಸ್ತೆ ಕಾಮಗಾರಿ ಆಂಜನೇಯ ವೇಷ ತೊಟ್ಟು ವಿನೂತನವಾಗಿ ಪ್ರತಿಭಟನೆ

ಕಾಮಗಾರಿ ಪೂರ್ಣಗೊಳಿಸದೆ ಅರ್ಧಕ್ಕೆ ಬಿಟ್ಟಿರುವ ರಸ್ತೆಯಿಂದ ಪ್ರಾಣ ಕಳೆದುಕೊಂಡವರ ಹಾಗೂ ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಗುತ್ತಿಗೆದಾರರು ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಅಲ್ಲದೆ ಕೂಡಲೇ ರಸ್ತೆ ಕಾಮಕಾರಿಯನ್ನ ಪೂರ್ಣಗೊಳಿಸಬೇಕೆಂದು ಮನವಿ ಮಾಡಿದರು..

ಆಂಜನೇಯ ವೇಷ ತೊಟ್ಟು ವಿನೂತನವಾಗಿ ಪ್ರತಿಭಟನೆ
ಆಂಜನೇಯ ವೇಷ ತೊಟ್ಟು ವಿನೂತನವಾಗಿ ಪ್ರತಿಭಟನೆ
author img

By

Published : Aug 23, 2021, 4:45 PM IST

ಕೋಲಾರ : ರಸ್ತೆ ದುರಸ್ಥಿಗೆ ಆಗ್ರಹಿಸಿ ರಸ್ತೆ ತಡೆದು ಆಂಜನೇಯ ವೇಷ ಧರಿಸಿ ವಿನೂತನವಾಗಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು‌. ಕೆಜಿಎಫ್ ತಾಲೂಕಿನ ಬೇತಮಂಗಲದಿಂದ ನೆರೆ ರಾಜ್ಯಕ್ಕೆ ಹೋಗುವಂತಹ ರಸ್ತೆಯಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆಯೇ ಕಾಮಗಾರಿ ಪ್ರಾರಂಭಿಸಲಾಗಿದೆ.

ಆದರೆ, ಈವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಬದಲಾಗಿ ರಸ್ತೆಯನ್ನ ಅಲ್ಲಲ್ಲಿ ಅಗೆದು ಡಾಂಬರೀಕರಣ ಮಾಡದೆ, ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ. ರಸ್ತೆಯನ್ನ ಹಾಳು ಮಾಡಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಆಂಜನೇಯ ವೇಷ ತೊಟ್ಟು ವಿನೂತನವಾಗಿ ಪ್ರತಿಭಟನೆ

ಇನ್ನು, ಕೋಲಾರದ ಗಡಿ ಭಾಗದಿಂದ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವಂತಹ ಹೆದ್ದಾರಿ ಇದಾಗಿದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಇದರಿಂದ ರಸ್ತೆ ಸರಿಯಿಲ್ಲದ ಪರಿಣಾಮ ಪ್ರತಿ ನಿತ್ಯ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಲವಾರು ಮಂದಿ ಈ ರಸ್ತೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಮಗಾರಿ ಪೂರ್ಣಗೊಳಿಸದೆ ಅರ್ಧಕ್ಕೆ ಬಿಟ್ಟಿರುವ ರಸ್ತೆಯಿಂದ ಪ್ರಾಣ ಕಳೆದುಕೊಂಡವರ ಹಾಗೂ ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಗುತ್ತಿಗೆದಾರರು ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಅಲ್ಲದೆ ಕೂಡಲೇ ರಸ್ತೆ ಕಾಮಕಾರಿಯನ್ನ ಪೂರ್ಣಗೊಳಿಸಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ : ಲೈವ್​ ವಿಡಿಯೋ: ಹಾವುಗಳಿಗೆ ರಾಖಿ ಕಟ್ಟುವ ಹುಚ್ಚಾಟ, ಕಚ್ಚಿಸಿಕೊಂಡು ಪ್ರಾಣಬಿಟ್ಟ ಯುವಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.