ಫೋನ್ ಕದ್ದಾಲಿಕೆ.. ಸಿಬಿಐ ತನಿಖೆಯಿಂದ ಎಲ್ಲಾ ಬಹಿರಂಗವಾಗಲಿ-ಶಾಸಕ ನಂಜೇಗೌಡ.. - karnata political development
ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಹಿಂದಿನಿಂದಲೂ ಫೋನ್ ಕದ್ದಾಲಿಕೆ ನಡೆದುಕೊಂಡು ಬಂದಿದೆ. ಈಗ ಸಿಬಿಐಗೆ ಕೊಡುವುದು ಏನು? ಎಂದು ಪ್ರಶ್ನಿಸಿದ ಅವರು ತನಿಖೆಯ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ.
![ಫೋನ್ ಕದ್ದಾಲಿಕೆ.. ಸಿಬಿಐ ತನಿಖೆಯಿಂದ ಎಲ್ಲಾ ಬಹಿರಂಗವಾಗಲಿ-ಶಾಸಕ ನಂಜೇಗೌಡ..](https://etvbharatimages.akamaized.net/etvbharat/prod-images/768-512-4180174-thumbnail-3x2-netjpg.jpg?imwidth=3840)
ಕೋಲಾರ: ಫೋನ್ ಕದ್ದಾಲಿಕೆ ಹಿಂದಿನಿಂದಲೂ ನಡೆದುಗೊಂಡು ಬಂದಿದೆ. ಇದರಲ್ಲಿ ಎಲ್ಲಾ ಪಾರ್ಟಿಯವ್ರು ಇದ್ದಾರೆ. ಹೀಗಾಗಿ ಸಿಬಿಐ ತನಿಖೆಯಿಂದ ಎಲ್ಲವೂ ಹೊರ ಬರಲಿ ಎಂದು ಮಾಲೂರು ಕಾಂಗ್ರೆಸ್ ಶಾಸಕ ಕೆ. ವೈ ನಂಜೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಹಿಂದಿನಿಂದಲೂ ಫೋನ್ ಕದ್ದಾಲಿಕೆ ನಡೆದುಕೊಂಡು ಬಂದಿದೆ. ಈಗ ಸಿಬಿಐಗೆ ಕೊಡುವುದು ಏನು? ಎಂದು ಪ್ರಶ್ನಿಸಿದ ಅವರು ತನಿಖೆಯ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ.
ಇನ್ನು ಈ ವಿಚಾರವಾಗಿ ಸಿದ್ದರಾಮಯ್ಯನವರು ಸಿಬಿಐ ತನಿಖೆಗೆ ಒತ್ತಾಯಿಸಲಿಲ್ಲ. ತನಿಖೆಗೆ ನೀಡಿರುವುದನ್ನು ಸ್ವಾಗತಿಸಿದ್ದಾರಷ್ಠೇ.ತನಿಖೆಯಲ್ಲಿ ಆಪರೇಷನ್ ಕಮಲ ಸೇರಿ ಎಲ್ಲವೂ ಹೊರಗೆ ಬರಬೇಕು ಎಂದರು. ಅಲ್ಲದೆ ಬರ ಹಾಗೂ ನೆರೆ ಪರಿಹಾರ ಘೋಷಣೆ ಮಾಡದೆ ತರಾತುರಿಯಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಲಾಗಿದೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ರು. ಇನ್ನು ರಾಜ್ಯದಲ್ಲಿ ಆಡಳಿತ ಕುಂಠಿತವಾಗಿದ್ದು, ಜನರಿಗೆ ಸರ್ಕಾರವೇ ಇಲ್ಲ ಎಂದೆನಿಸುತ್ತಿದೆ. ಶಾಸಕನಾದ ನನಗೇ ಸರ್ಕಾರ ಇಲ್ಲ ಅಂತಾ ಅನಿಸುತ್ತಿದೆ. ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ.
17 ತಿಂಗಳು ನಾವು ಸಂತೋಷವಾಗಿದ್ದೆವು. ಬಿಜೆಪಿ ಅವರಿಗೆ ಆಪರೇಷನ್ ಕಮಲ ಮಾಡಿ ಸರ್ಕಾರ ರಚನೆ ಮಾಡೋದು ಬೇಕಿತ್ತಾ ಎಂದು ಪ್ರಶ್ನಿಸಿದ ಅವರು, ಮಂತ್ರಿಮಂಡಲ ರಚಿಸೋಕೆ ಬಿಜೆಪಿಗೆ ಒಂದು ತಿಂಗಳು ಬೇಕಾ ಎಂದು ಕುಟುಕಿದ್ರು. ಅನ್ನಭಾಗ್ಯ ಯೋಜನೆಯ ಅಕ್ಕಿ ಕಡಿತ ಚರ್ಚೆ ವಿಚಾರಕ್ಕೆ ಸಂಬಂದಿಸಿದಂತೆ, ಹಿಂದಿನ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಬಿಜೆಪಿ ಕೈ ಹಾಕಬಾರದು. ಅನ್ನಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್‌ನಿಂದಾಗಿ ಜನ ನೆಮ್ಮದಿಯಾಗದ್ದಾರೆ. ಹೀಗಾಗಿ ಹಿಂದಿನ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಕೈ ಹಾಕಿದರೆ ಜನರ ಮುಂದೆ ಹೋಗಿ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ದಿನಾಂಕ - ೧೯-೦೮-೧೯
ಸ್ಲಗ್ - ಶಾಸಕ ನಂಜೇಗೌಡ
ಫಾರ್ಮೆಟ್ - ಎವಿಬಿಬಿ
ಆಂಕರ್ : ಫೋನ್ ಕಾದ್ದಲಿಕೆ ಹಿಂದೆಯಿಂದಲೂ ನಡೆದುಗೊಂಡು ಬಂದಿದೆ, ಇದರಲ್ಲಿ ಎಲ್ಲಾ ಪಾರ್ಟಿಯವ್ರು ಇದ್ದಾರೆ ಹೀಗಾಗಿ ಸಿಬಿಐ ತನಿಖೆಯಿಂದ ಎಲ್ಲವೂ ಹೊರ ಬರಲಿ ಎಂದು ಕೋಲಾರದಲ್ಲಿ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಪ್ರತಿಕ್ರಿಯೆ ನೀಡಿದ್ರು. ಇಂದು ಕೋಲಾರದಲ್ಲಿ ಫೋನ್ ಕಾದ್ದಲಿಕೆ ಪ್ರಕರಣ ಸಿಬಿಐಗೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಹಿಂದಿನಿಂದಲೂ ಫೋನ್ ಕದ್ದಾಲಿಕೆ ನಡೆದುಕೊಂಡು ಬಂದಿದ್ದು, ಈಗ ಸಿಬಿಐಗೆ ಕೊಡುವುದು ಏನು ಎಂದು ಪ್ರಶ್ನಿಸಿದ ಅವರು, ಸಿಬಿಐಗೆ ಕೊಡುವ ಅವಶ್ಯಕತೆ ಇರಲಿಲ್ಲ ಎಂದರು. ಇನ್ನು ಸಿದ್ದರಾಮಯ್ಯ ನವರು ಸಿಬಿಐ ತನಿಖೆಗೆ ಒತ್ತಾಯ ಮಾಡಿಲ್ಲ, ಸಿಬಿಐ ತನಿಖೆಗೆ ನೀಡಿರುವುದನ್ನ ಸ್ವಾಗತ ಮಾಡಿದ್ದಾರಷ್ಟೆ ಎಂದ ಅವರು, ಆಪರೇಷನ್ ಕಮಲ ಸೇರಿ ಎಲ್ಲವೂ ಹೊರಗೆ ಬರಬೇಕು ಎಂದರು. ಅಲ್ಲದೆ ಬರ ಹಾಗೂ ನೆರೆ ಪರಿಹಾರ ಘೋಷಣೆ ಮಾಡದೆ ತರಾತುರಿಯಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಲಾಗಿದೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ರು. ಇನ್ನು ರಾಜ್ಯದಲ್ಲಿ ಆಡಳಿತ ಕುಂಠಿತವಾಗಿದ್ದು, ಶಾಸಕನಾದ ನನಗೇ ಸರ್ಕಾರ ಇಲ್ಲ ಅಂತ ಅನಿಸುತ್ತಿದೆ, ಅಧಿಕಾರಿಳೇ ಆಡಳಿತ ನಡೆಸುತ್ತಿದ್ದಾರೆ ಜನ ಪ್ರತಿನಿದಿಗಳಿಗೆ ಸರ್ಕಾರವೇ ಇಲ್ಲ ಎಂದಿನಿಸುತ್ತದೆ ಎಂದು ಹೇಳಿದ್ರು. ಅಲ್ಲದೆ ೧೪ ತಿಂಗಳು ನಾವು ಸಂತೋಷವಾಗಿದ್ದೆವು, ಬಿಜೆಪಿ ಅವರಿಗೆ ಆಪರೇಷನ್ ಕಮಲ ಮಾಡಿ ಸರ್ಕಾರ ರಚನೆ ಮಾಡೋದು ಬೇಕಿತ್ತಾ ಎಂದು ಪ್ರಶ್ನಿಸಿದ ಅವರು, ಮಂತ್ರಿಗಳು ಮಾಡೋಕೆ ಬಿಜೆಪಿಗೆ ಒಂದು ತಿಂಗಳು ಬೇಕಾ ಎಂದು ಕುಟುಕಿದ್ರು. ಇನ್ನು ಅನ್ನ ಭಾಗ್ಯ ಯೋಜನೆಯ ಅಕ್ಕಿ ಕಡಿತ ಚರ್ಚೆ ವಿಚಾರಕ್ಕೆ ಸಂಬಂದಿಸಿದಂತೆ, ಹಿಂದಿನ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಬಿಜೆಪಿ ಅವ್ರು ಕೈ ಹಾಕಬಾರದು, ಅನ್ನಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್‌ನಿಂದಾಗಿ ಜನ ನೆಮ್ಮದಿಯಾಗದ್ದಾರೆ, ಹೀಗಾಗಿ ಹಿಂದಿನ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಕೈ ಹಾಕಿದರೆ ಜನರ ಮುಂದೆ ಹೋಗಿ ಹೋರಾಟ ಮಾಡುತ್ತೆÃವೆ ಎಂದು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ರು.
ಬೈಟ್ ೧: ನಂಜೇಗೌಡ (ಮಾಲೂರು ಶಾಸಕ)
ಬೈಟ್ ೨: ನಂಜೇಗೌಡ (ಮಾಲೂರು ಶಾಸಕ)Body:..Conclusion:..