ಕೋಲಾರ : ಭಾನುವಾರದ ಹಿನ್ನೆಲೆ ಕೋಲಾರದಲ್ಲಿ ಮಾಂಸ ಖರೀದಿಗೆ ಜನರು ಸಾಲುಗಟ್ಟಿ ನಿಂತಿದ್ದರು.
ನಗರದ ಚಿಕನ್ ಮಾರುಕಟ್ಟೆ ಹಾಗೂ ಚಿಕನ್ ಅಂಗಡಿಗಳ ಮುಂದೆ ಜನರು ಸರದಿ ಸಾಲಿನಲ್ಲಿ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು, ಮುಖಕ್ಕೆ ಮಾಸ್ಕ್ ಧರಿಸಿ ಚಿಕನ್ ಖರೀದಿಸಿದರು.
ಇತರೆ ದಿನಗಳಿಗಿಂತ ಇಂದು ಚಿಕನ್ ಖರೀದಿಗೆ ಬಂದಿದ್ದ ಜನರ ಸಂಖ್ಯೆ ಹೆಚ್ಚಾಗಿತ್ತು. ಜೊತೆಗೆ ಪಾತಾಳಕ್ಕೆ ಕುಸಿದ ಚಿಕನ್ ವ್ಯಾಪಾರ ಚೇತರಿಕೆ ಕಂಡಿದ್ದು, ಒಂದು ಕೆ.ಜಿ ಚಿಕನ್ ಬೆಲೆ 170-180 ರೂ. ವರೆಗೆ ಹೆಚ್ಚಾಗಿದೆ.