ಕೋಲಾರ : ಎಐಸಿಸಿ ರಾಜ್ಯ ಉಸ್ತುವಾರಿ ಕಾರ್ಯದರ್ಶಿ ವೇಣುಗೋಪಾಲ್ ಅವರಿಗೆ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕೋಲಾರದಲ್ಲಿ ಟಾಂಗ್ ನೀಡಿದರು.
ಈ ಬಾರಿಯ ಲೋಕಸಭಾ ಚುನಾವಾಣೆಯಲ್ಲಿ ಕಾಂಗ್ರೆಸ್ ಪರ ಕೆಸಲ ಮಾಡದ ಕಾಂಗ್ರೆಸಿಗರಿಗೆ ಡೆಡ್‍ಲೈನ್ ನೀಡಿದ ವೇಣುಗೋಪಾಲ್ ಅವರಿಗೆ ಟಾಂಗ್ ನೀಡಿದ ಅವರು, ನನಗೆ ಡೆಡ್‍ಲೈನ್ ಕೊಡುವುದಕ್ಕೆ ವೇಣುಗೋಪಾಲ್ ನನ್ನ ಅಣ್ಣನಾ, ಇಲ್ಲ ನಮ್ಮ ಅಪ್ಪನಾ?, ಪಕ್ಷದಿಂದ ಉಚ್ಛಾಟನೆ ಮಾಡುವುದಾದರೆ ಮಾಡಲಿ, ನಮಗೇನೂ ಬೇರೆ ಪಕ್ಷಗಳೇ ಇಲ್ಲವಾ ಎಂದು ಪ್ರಶ್ನಿಸಿದ್ರು.
ಅಲ್ಲದೆ ನಮ್ಮ ಸ್ವಂತ ಬಲದಿಂದ ನಾವು ಶಾಸಕರಾಗಿರುವುದು, ಪ್ರಜಾಪ್ರಭುತ್ವದಲ್ಲಿ ಭಾರತ ದೇಶದಲ್ಲಿ ಸಾವಿರಾರು ಪಕ್ಷಗಳಿವೆ, ಪಕ್ಷದಿಂದ ಕಿತ್ಹಾಕುವ ಹಾಗಿದ್ದರೆ ಕಿತ್ಹಾಕಲಿ ಉಚ್ಛಾಟನೆ ಮಾಡಲಿ ಬಿಡಿ ಎಂದರು.
ಯಾರೇ ಹೇಳಿದ್ರೂ ಕಾಂಪ್ರಮೈಸ್ ಇಲ್ಲ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದರು.