ETV Bharat / state

ಜಮೀನು ವಿವಾದಕ್ಕಾಗಿ ಕೋರ್ಟ್‌, ಕಚೇರಿ ಅಲೆದಾಡಿ ಸುಸ್ತು: ಚುನಾವಣಾ ಅಖಾಡಕ್ಕಿಳಿದ 60ರ ಮಹಿಳೆ! - ಜಮೀನು ವಿವಾದ

ಕೋಲಾರದಲ್ಲಿ ಮಹಿಳೆಯೊಬ್ಬರು ತಮ್ಮ 60ನೇ ವಯಸ್ಸಿನಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

old woman is contesting elections in Kolar
ಚುನಾವಣೆಗೆ ಸ್ಪರ್ಧಿಸುತ್ತಿರುವ ವೃದ್ದೆ
author img

By

Published : Apr 19, 2023, 3:00 PM IST

ಕೋಲಾರ: ಈ ಮಹಿಳೆಯ ವಯಸ್ಸು 60. ತನ್ನ ಜಮೀನು ವಿವಾದ ಬಗೆಹರಿಸಲು ಕೋರ್ಟ್‌, ಕಚೇರಿ ಅಂತ ಸುಮಾರು 24 ವರ್ಷಗಳ ಕಾಲ ಸಾಕಷ್ಟು ಸುತ್ತಾಡಿದ್ದಾರೆ. ಎಲ್ಲಿಯೂ ಇವರಿಗೆ ಪರಿಹಾರ ಸಿಕ್ಕಿಲ್ಲವಂತೆ. ಇದರಿಂದ ಬೇಸತ್ತು ಇದೀಗ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ನಂಬಿಗಾನಹಳ್ಳಿ ಗ್ರಾಮದ ಚಿಕ್ಕಮರಿಯಪ್ಪ ಎಂಬವರ ಪತ್ನಿ ನಾರಾಯಣಮ್ಮ ತಮಟೆ ವಾದ್ಯಗಳ ಮೂಲಕ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಬಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಇದನ್ನು ಗಮನಿಸಿದ ಅಧಿಕಾರಿಗಳು ಹಾಗೂ ಅಲ್ಲಿ ನೆರೆದಿದ್ದ ಜನತೆ ಅರೆಕ್ಷಣ ದಂಗಾಗಿದ್ದರು. ಮನೆಯಲ್ಲಿ ವಿಶ್ರಾಂತಿ ಹಾಗು ಮೊಮ್ಮಕ್ಕಳೊಂದಿಗೆ ಕಾಲ ಕಳೆಯಬೇಕಿದ್ದ ವಯಸ್ಸಲ್ಲಿ ಅದ್ರಲ್ಲೂ ಮಾಲೂರಿನ ಘಟಾನುಘಟಿ ನಾಯಕರುಗಳ ಮಧ್ಯೆ ಚುನಾವಣೆಯಲ್ಲಿ ಸ್ಫರ್ಧಿಸುತ್ತಿರುವುದಕ್ಕೆ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

old woman is contesting elections in Kolar
ಚುನಾವಣೆಗೆ ಸ್ಪರ್ಧಿಸುತ್ತಿರುವ ವೃದ್ದೆ

ನಾರಾಯಣಮ್ಮ ನಾಮಪತ್ರ ಸಲ್ಲಿಸಲು ವಿಶೇಷವಾದ ಕಾರಣ ನಂಬಿಗಾನಹಳ್ಳಿ ಗ್ರಾಮದಲ್ಲಿರುವ ಜಮೀನು ವಿವಾದ. ಈ ವಿವಾದದಲ್ಲಿ ಸುಮಾರು 20 ವರ್ಷಗಳ ಕಾಲ ತಾಲೂಕು ಕಚೇರಿ, ಕೋರ್ಟು ಎಂದೆಲ್ಲ ಇವರು ಅಲೆದಾಡಿದ್ದಾರೆ. ಅಧಿಕಾರಿಗಳು, ಕೆಲವು ಸಂಬಂಧಿಕರಿಂದ ಅವರ ಜಮೀನು ವಿವಾದ ಬಗೆಹರಿದಿಲ್ಲ. ಇದರಿಂದ ಬೇಸರಗೊಂಡಿರುವ ನಾರಾಯಣಮ್ಮ ತಾನು ಚುನಾವಣೆಗೆ ನಿಂತು ಗೆದ್ದು ಅಧಿಕಾರ ಸಿಕ್ಕರೆ ಆಗ ಅಧಿಕಾರಿಗಳು ನಮ್ಮ ಜಮೀನು ವಿವಾದ ಬಗೆಹರಿಸಿಕೊಡ್ತಾರೆ ಎಂಬ ಉದ್ದೇಶ ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ನನ್ನಂತ ಅದೆಷ್ಟೋ ಜನರು ಹೀಗೆ ತಮ್ಮ ಜಮೀನು ವಿವಾದಗಳನ್ನು ಬಗೆಹರಿಸಿಕೊಳ್ಳಲು ನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಅಂಥವರ ಕಷ್ಟವನ್ನು ಅಧಿಕಾರಿಗಳು ಹಾಗೂ ಸಂಬಂಧಪಟ್ಟವರಿಗೆ ತಿಳಿಸಬೇಕೆಂದು ಈ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕಳೆದೊಂದು ತಿಂಗಳಿಂದ ಚುನಾವಣೆಗೆ ಸ್ಪರ್ಧಿಸುವ ವಿಧಾನಗಳನ್ನು ತಿಳಿದುಕೊಂಡ ನಾರಾಯಣಮ್ಮ, ಚುನಾವಣೆಗೆ ಸ್ಪರ್ಧಿಸಲು ಬೇಕಾದ ದಾಖಲಾತಿಗಳನ್ನು ಕಲೆಹಾಕಿದ್ದಾರೆ. ನಂತರ ತಾನು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಒಂದಷ್ಟು ಜನರನ್ನು ಸೇರಿಸಿಕೊಂಡು ಅಲಂಕರಿಸಿದ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕವೇ ಮಾಲೂರು ತಾಲೂಕು ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರಿ ಬಿಟ್ಟು ರಾಜಕೀಯಕ್ಕೆ ಎಂಟ್ರಿ.. ಇವರು ತೇರದಾಳ ಮತಕ್ಷೇತ್ರದ ಆಪ್ ಅಭ್ಯರ್ಥಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.