ETV Bharat / state

ಕೋಲಾರ: ಬ್ಯಾಗ್​ನಲ್ಲಿ ನವಜಾತ ಹೆಣ್ಣು ಶಿಶು ಬಿಟ್ಟು ಹೋದ ಪೋಷಕರು - Kolar Government Hospital

ನವಜಾತ ಹೆಣ್ಣು ಶಿಶುವನ್ನು ಪೋಷಕರು ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಕೋಲಾರದಲ್ಲಿ ನಡೆದಿದೆ.

dasdd
ನವಜಾತ ಹೆಣ್ಣು ಶಿಶು ಬಿಟ್ಟು ಪರಾರಿಯಾದ ಪೋಷಕರು
author img

By

Published : Jan 28, 2021, 7:25 PM IST

ಕೋಲಾರ: ನವಜಾತ ಹೆಣ್ಣು ಶಿಶುವೊಂದನ್ನ ಆಸ್ಪತ್ರೆಯ ಆವರಣದಲ್ಲಿಯೇ ಬಿಟ್ಟು ಪೋಷಕರು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಬ್ಯಾಗ್​ನಲ್ಲಿ ನವಜಾತ ಹೆಣ್ಣು ಶಿಶು ಬಿಟ್ಟು ಪರಾರಿಯಾದ ಪೋಷಕರು

ನಗರದ ಎಸ್ಎನ್ಆರ್ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಈ ಘಟನೆ ಜರುಗಿದ್ದು, ಬ್ಯಾಗ್​ನಲ್ಲಿ ಹೆಣ್ಣು ಶಿಶುವನ್ನು ಇರಿಸಿ ಅದರ ಮೇಲೆ ಬಟ್ಟೆಗಳನ್ನು ಹಾಕಿ ಬಿಟ್ಟು ಹೋಗಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಮಗು ಅಳುವುದನ್ನು ಗಮನಿಸಿದ ಎಸ್.ಎನ್.ಆರ್ ಆಸ್ಪತ್ರೆ ಸಿಬ್ಬಂದಿ ಮಗುವನ್ನು ರಕ್ಷಿಸಿ ಎಂಐಸಿಯು ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೇರೆ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ತಂದು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಪೋಷಕರು ಬಿಟ್ಟು ಹೋಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಜೊತೆಗೆ ಮಗುವಿನ ಪೋಷಕರ ಬಗ್ಗೆ ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.