ETV Bharat / state

ಕೊರೊನಾ ಆತಂಕ: ಮಾಂಸದಂಗಡಿ ಮುಚ್ಚಿಸಿದ ನಗರಸಭೆ ಅಧಿಕಾರಿಗಳು - latest corona news in kolar

ಕೊರೊನಾ ಆತಂಕ ಹೆಚ್ಚಾಗಿರುವ ಹಿನ್ನೆಲೆ ನಗರದಲ್ಲಿ ತೆರೆದಿದ್ದ ಮಾಂಸದಂಗಡಿಗಳ ಮೇಲೆ ನಗರಸಭೆ ಅಯುಕ್ತ ಶ್ರೀಕಾಂತ್ ನೇತೃತ್ವದಲ್ಲಿ ದಾಳಿ ನಡೆಸಿ ಅವುಗಳನ್ನು ಮುಚ್ಚಿಸುತ್ತಿದ್ದಾರೆ.

chicken-shop
ಮಾಂಸದಂಗಡಿ ಮುಚ್ಚಿಸಿದ ನಗರಸಭೆ ಅಧಿಕಾರಿಗಳು
author img

By

Published : Mar 23, 2020, 11:45 AM IST

ಕೋಲಾರ: ಕೊರೊನಾ ಆತಂಕ ಹೆಚ್ಚಾಗಿರುವ ಹಿನ್ನೆಲೆ ನಗರದಲ್ಲಿ ತೆರೆದಿದ್ದ ಮಾಂಸದಂಗಡಿಗಳ ಮೇಲೆ ನಗರ ಸಭೆ ಅಧಿಕಾರಿಗಳು ದಾಳಿ ಮಾಡಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ.

ನಗರದ ಅಮ್ಮವಾರಿ ಪೇಟೆ, ಟವರ್ ಸೇರಿದಂತೆ ನಗರದೆಲ್ಲೆಡೆ ತೆರೆಯಲಾಗಿದ್ದ ಮಾಂಸದಂಗಡಿಗಳ ಮೇಲೆ ದಾಳಿ ನಡೆಸಿ, ಅಂಗಡಿಗಳನ್ನ ತೆರೆಯದಂತೆ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ನಗರದಲ್ಲಿ ಮಾಂಸ ಮಾರಾಟ ನಿಷೇಧಿಸುವಂತೆ ಅಂಗಡಿ ಮಾಲಿಕರಿಗೆ ನೋಟಿಸ್ ನೀಡಲಾಗಿದ್ದು, ಅಂಗಡಿ ತೆರೆದರೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ‌.

ಮಾಂಸದಂಗಡಿ ಮುಚ್ಚಿಸಿದ ನಗರಸಭೆ ಅಧಿಕಾರಿಗಳು

ನಗರಸಭೆ ಆಯುಕ್ತ ಶ್ರೀಕಾಂತ್ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲಡೆ ಕೊರೊನಾ ಆತಂಕ ಹೆಚ್ಚಾಗಿದ್ದು, ಸೋಂಕುವ ಹರಡದಂತೆ ಎಚ್ಚರ ವಹಿಸಿ ಮುಂಜಾಗೃತ ಕ್ರಮವಾಗಿ ಕೋಲಾರ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೆ ಜಿಲ್ಲಾಡಳಿತ ಹಾಗು ನಗರಸಭೆಯಿಂದಲೂ, ಕೋಲಾರ ನಗರದಲ್ಲಿ ಬೀದಿ ಬದಿ ವ್ಯಾಪಾರ, ಮಾಂಸದಂಗಡಿಗಳು, ಹೋಟೆಲ್ ಗಳನ್ನ ತೆರೆಯದಂತೆ ಸೂಚನೆ ನೀಡಲಾಗಿದೆ.

ಹೊಟೆಲ್ ಗಳಲ್ಲಿ ಕೇವಲ ಪಾರ್ಸೆಲ್​ ನೀಡಲು ಅವಕಾಶ ನೀಡಿದ್ದು, ಇದನ್ನ ಹೊರತುಪಡಿಸಿ ತೆರೆಯಲಾಗಿರುವ ಅಂಗಡಿಗಳನ್ನು ಮುಚ್ಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.