ETV Bharat / state

ಮುಳಬಾಗಿಲು ನಗರಸಭೆ ಚುನಾವಣೆ: ಕಿಂಗ್ ಮೇಕರ್ ಆದ ಸಚಿವ ನಾಗೇಶ್ - ಜೆಡಿಎಸ್​​ನ ಸಮೃಧ್ದಿ ಮಂಜುನಾಥ್ ಬೆಂಬಲ‌

ಇತ್ತೀಚೆಗೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಸಚಿವರ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಲೆ ಇತ್ತು. ಜೊತೆಗೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ವಿಶ್ವಾಸ ತೆಗೆದುಕೊಳ್ಳದೇ, ಏಕಾಏಕಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್​ಗೆ, ಜೆಡಿಎಸ್​​ನ ಸಮೃಧ್ದಿ ಮಂಜುನಾಥ್ ಬೆಂಬಲ‌ ಘೋಷಣೆ ಮಾಡಿದ್ದರು.

mulabagilu-corparation-election-leatest-news
ಮುಳಬಾಗಿಲು ನಗರಸಭೆ ಚುನಾವಣೆ, ಕಿಂಗ್ ಮೇಕರ್ ಆದ ಸಚಿವ ನಾಗೇಶ್...
author img

By

Published : Oct 31, 2020, 11:04 PM IST

ಕೋಲಾರ: ಜಿಲ್ಲೆಯ ಮುಳಬಾಗಿಲು ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಯಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದಾರೆ.

ಮುಳಬಾಗಿಲು ನಗರಸಭೆ ಚುನಾವಣೆ, ಕಿಂಗ್ ಮೇಕರ್ ಆದ ಸಚಿವ ನಾಗೇಶ್

ಇಂದು ಮುಳಬಾಗಿಲು ನಗರಸಭೆಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಸಲಾಗಿತ್ತು. ಅಲ್ಲದೇ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಜೆಡಿಎಸ್​​ನ ಸಮೃದ್ದಿ ಮಂಜುನಾಥ್ ನಡುವೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ನಿನ್ನೆ ಸಂಜೆಯವರೆಗೆ ಬಹುತೇಕ ಖಚಿತವಾಗಿತ್ತು. ಆದರೆ ಬಿಜೆಪಿಯಿಂದ ಓರ್ವ ಸದಸ್ಯನನ್ನ ಹೊಂದಿದ್ದ ಸಚಿವ ನಾಗೇಶ್, ಇಬ್ಬರು ಮುಖಂಡರ ಲೆಕ್ಕಾಚಾರಗಳನ್ನ ತಲೆಕೆಳಗಾಗುವಂತೆ ಮಾಡಿ ನಗರಸಭೆ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ್ದಾರೆ.

ಮುಳಬಾಗಿಲು ನಗರ ಸಭೆಯ ಒಟ್ಟು 31 ಸ್ಥಾನಗಳಲ್ಲಿ, ಜೆಡಿಎಸ್ 11, ಕಾಂಗ್ರೆಸ್ 7, ಬಿಜೆಪಿ 2, ಎಸ್​​ಡಿಪಿಐ 2, ಸ್ವತಂತ್ರ 9 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದಿದ್ದರು. ಈ ವೇಳೆ, ಸಮೃದ್ದಿ ಮಂಜುನಾಥ್ ಬೆಂಬಲಿತ ಜೆಡಿಎಸ್​​ನ 11 ಸದಸ್ಯರಿದ್ದರೆ. ಕಾಂಗ್ರೆಸ್ ಸ್ವತಂತ್ರ ಹಾಗೂ ಒಬ್ಬ ಬಿಜೆಪಿ ಬೆಂಬಲಿತ ಕೊತ್ತೂರು ಮಂಜುನಾಥ್ ಬಣದವರ ನಡುವೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಬಹುತೇಕ ಖಚಿತವಾಗಿತ್ತು.

ಇತ್ತೀಚೆಗೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಸಚಿವರ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಲೆ ಇತ್ತು. ಜೊತೆಗೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ವಿಶ್ವಾಸ ತೆಗೆದುಕೊಳ್ಳದೇ, ಏಕಾಏಕಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್​ಗೆ, ಜೆಡಿಎಸ್​​ನ ಸಮೃದ್ಧಿ ಮಂಜುನಾಥ್ ಬೆಂಬಲ‌ ಘೋಷಣೆ ಮಾಡಿದ್ದರು.

ಈ ಸಂದರ್ಭವನ್ನ ಬಳಕೆ ಮಾಡಿಕೊಂಡ ಸಚಿವ ನಾಗೇಶ್, ಬಿಜೆಪಿಯ ಒಬ್ಬ ಅಭ್ಯರ್ಥಿ, ಎಸ್​​ಡಿಪಿಐ ಇಬ್ಬರು ಸದಸ್ಯರು ಹಾಗೂ ಸ್ವತಂತ್ಯ 3 ಅಭ್ಯರ್ಥಿ ಸೇರಿದಂತೆ ಸಚಿವರ ಒಂದು ಮತವನ್ನ ಜೆಡಿಎಸ್​​​ನ 11 ಸದಸ್ಯರಿಗೆ ಬೆಂಬಲ ಘೋಷಿಸಿದರು. ಜೆಡಿಎಸ್ ನಲ್ಲಿಯೇ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದಲ್ಲಿ ಮೇಲುಗೈ ಸಾಧಿಸಿದ್ದಾರೆ. ಈ ಮೂಲಕ ಕೊತ್ತೂರು ಮಂಜುನಾಥ್ ಹಾಗೂ ಸಮೃದ್ದಿ ಮಂಜುನಾಥ್ ಅವರಿಗೆ ಸಚಿವ ನಾಗೇಶ್ ಟಾಂಗ್ ನೀಡಿದ್ದಾರೆ.

ಲಾಠಿ ಚಾರ್ಜ್​:

ಮುಳಬಾಗಿಲು ನಗರಸಭೆ ಚುನಾವಣೆಯಲ್ಲಿ ಕೆಲಕಾಲ ಗದ್ದಲ ಉಂಟಾಗಿದ್ದು, ಸಚಿವ ನಾಗೇಶ್ ವಿರುದ್ದ ಜೆಡಿಎಸ್ ಕಾರ್ಯಕರ್ತರು ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಈ ಸಂಧರ್ಭ ಗುಂಪು ಚದುರಿಸಲು ಪೊಲೀಸರಿಂದ ಲಾಠಿ ಚಾರ್ಜ್ ಸಹ ಮಾಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.