ETV Bharat / state

ಕೆರೆಗಳ ಸ್ವಚ್ಛತೆಗೆ ಆಗುವ ವೆಚ್ಚವನ್ನು ನಾವು ಭರಿಸುತ್ತೇವೆ: ಸಂಸದ ಮುನಿಸ್ವಾಮಿ

ಕೋಲಾರ ಜಿಲ್ಲೆಯ ಕೆಲ ಕೆರೆಗಳ ಸ್ವಚ್ಛತೆಯ ಸಂಪೂರ್ಣ ವೆಚ್ಚವನ್ನು ನಾನು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಭರಿಸುತ್ತಿದ್ದೇವೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.

dsd
ಸಂಸದ ಎಸ್.ಮುನಿಸ್ವಾಮಿ
author img

By

Published : May 27, 2020, 5:07 PM IST

ಕೋಲಾರ: ಕೋಲಾರಮ್ಮ ಕೆರೆಯಂತೆಯೇ ಕೋಡಿಕಣ್ಣೂರು ಕೆರೆ ಸ್ವಚ್ಛಗೊಳಿಸಿ ಕೆ.ಸಿ. ವ್ಯಾಲಿ ನೀರನ್ನು ಹರಿಸಲಾಗುವುದು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.

ಸಂಸದ ಎಸ್.ಮುನಿಸ್ವಾಮಿ

ಜಿಲ್ಲೆಗೆ ಹೊಂದಿಕೊಂಡಿರುವ ಕೋಡಿಕಣ್ಣೂರು ಕೆರೆಯ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಮುನಿಸ್ವಾಮಿ, ಅಂತರ್ಜಲ ವೃದ್ಧಿಗಾಗಿ ಬೆಂಗಳೂರಿನ ಕೋರಮಂಗಲ-ಚಲಘಟ್ಟದ ತ್ಯಾಜ್ಯ ನೀರನ್ನು ಎರಡು ಹಂತದಲ್ಲಿ ಶುದ್ಧೀಕರಿಸಿ ಜಿಲ್ಲೆಯ 126 ಕೆರೆಗಳಿಗೆ ಹರಿಸಲಾಗುತ್ತಿದೆ. ಸೀಪೂರು ಮತ್ತು ಹೂಹಳ್ಳಿ ಕೆರೆಯ ಮೂಲಕ ಕೋಡಿಕಣ್ಣೂರು ಕೆರೆಗೆ ಕೆ.ಸಿ. ವ್ಯಾಲಿ ನೀರು ಕೆಲವೇ ದಿನಗಳಲ್ಲಿ ಹರಿಯುವುದರಿಂದ ಕೆರೆಯ ಸ್ವಚ್ಛತೆ ಕಾರ್ಯ ಮಾಡಲಾಗುತ್ತಿದೆ. ಸುಮಾರು 15 ಜೆಸಿಬಿಗಳ ಮೂಲಕ ಕೆರೆ ಸ್ವಚ್ಛಗೊಳಿಸುವ ಜೊತೆಗೆ ಒತ್ತುವರಿ ತೆರವು ಮತ್ತು ಕೆರೆಯ ಕೋಡಿಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದೆ ಎಂದರು. ಅದೇ ರೀತಿ ಸಿಎಸ್​ಆರ್ ಅನುದಾನದಲ್ಲಿ ಜಿಲ್ಲೆಯ ಕೆರೆಗಳನ್ನು ಅಭಿವೃದ್ಧಿಪಡಿಸಲು ನೀಲನಕ್ಷೆ ತಯಾರಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಮಾತನಾಡಿ, ಕೆ.ಸಿ. ವ್ಯಾಲಿ ಮೊದಲ ಹಂತದಲ್ಲಿ ಜಿಲ್ಲೆಯ 126 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಇದರ ಜೊತೆಗೆ ಮತ್ತಷ್ಟು ಕೆರೆಗಳನ್ನು ತುಂಬಿಸಲಾಗುವುದು. ಸೆಪ್ಟೆಂಬರ್ ಅಂತ್ಯಕ್ಕೆ ಕೆ.ಸಿ. ವ್ಯಾಲಿಯಿಂದ ಸುಮಾರು 400 ಎಂ.ಎಲ್‍.ಡಿ ನೀರು ಬರುವುದರಿಂದ ಜಿಲ್ಲೆಯ ಕೆರೆಗಳನ್ನು ಮತ್ತಷ್ಟು ತುಂಬಿಸಲು ಅನುಕೂಲವಾಗುತ್ತದೆ. ಅಲ್ಲದೆ ಕೋಲಾರಮ್ಮ ಕೆರೆ ಹಾಗೂ ಕೋಡಿಕಣ್ಣೂರು ಕೆರೆಗಳು ತುಂಬಿದ ನಂತರ ಕೆರೆಗಳ ಬಳಿ ವಾಕಿಂಗ್ ಪಾತ್, ಬೋಟಿಂಗ್​ ವ್ಯವಸ್ಥೆ ಮಾಡಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.