ಕೋಲಾರ: ಸಿದ್ದರಾಮಯ್ಯ ಅವರು ಕ್ರಾಸ್ ಎಂಬ ಪದ ಬಳಕೆ ಮಾಡಿರುವುದು ಅವರ ವಯಸ್ಸಿಗೆ ತಕ್ಕದಾದುದಲ್ಲ ಎಂದು ಕೋಲಾರದಲ್ಲಿ ಸಂಸದ ಎಸ್. ಮುನಿಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹಿರಿಯರಾಗಿದ್ದು ಈ ರೀತಿಯ ಹೇಳಿಕೆಗಳನ್ನು ನೀಡಬಾರದು. ಕ್ರಾಸ್ ಎಂಬ ಪದವನ್ನು ಪ್ರಾಣಿಗಳಿಗೆ ಬಳಸುತ್ತಾರೆ. ಆದ್ರೆ ಸಿದ್ದರಾಮಯ್ಯ ಅವರು ಮತಗಳ ಓಲೈಕೆಗಾಗಿ, ಓಟ್ ಬ್ಯಾಂಕಿಗೋಸ್ಕರ ಈ ಪದವನ್ನು ಬಳಸಿದ್ದಾರೆ. ಹಿರಿಯರಾದ ಅವರು ಮುಂದೆ ಮಾತನಾಡುವಾಗ ಯೋಚಿಸಿ ಮಾತನಾಡಲಿ ಎಂದು ಸಲಹೆ ನೀಡಿದರು.
ಪದೇ ಪದೆ ಪ್ರತಿಭಟನೆ, ಬಂದ್ ಮಾಡಬೇಡಿ: ರೈತರಿಗೆ ಸಿಎಂ ಮನವಿ
ಇಡೀ ದೇಶದಲ್ಲಿ ಯಾರು ಕ್ರಾಸಿಂಗ್ ಇಲ್ಲ, ಮತದಾರರನ್ನು ಸೆಳೆಯಲು ಈ ರೀತಿ ಹೇಳಿಕೆ ನೀಡಬಾರದು ಎಂದು ಸಂಸದ ಮುನಿಸ್ವಾಮಿ ಒತ್ತಾಯಿಸಿದರು.