ಕೋಲಾರ: ಕೊರೊನಾ ರೋಗ ತಡೆಗೆ ಬಂದಿರುವ ವ್ಯಾಕ್ಸಿನ್ ಲಸಿಕೆ ಪರಿಶೀಲಿಸಲು ಇಂದು ಕೋಲಾರ ಜಿಲ್ಲಾಸ್ಪತ್ರೆಗೆ ಸಂಸದ ಮುನಿಸ್ವಾಮಿ ಭೇಟಿ ನೀಡಿದ್ರು.
ಲಸಿಕೆ ನೀಡಲು ತರಬೇತಿ ಪಡೆದ ಆರೋಗ್ಯ ಶುಶ್ರೂಕಿಯರೊಂದಿಗೆ ಸಂಸದರು ಚರ್ಚೆ ನಡೆಸಿದ್ರು. ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಈ ಸಭೆಯಲ್ಲಿ ಆರೋಗ್ಯ ಸಹಾಯಕಿಯರು ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ಲಸಿಕೆ ಕುರಿತಂತೆ ಚರ್ಚೆ ನಡೆಸಿ, ಪರಿಶೀಲನೆ ನಡೆಸಿದ್ರು. ಜಿಲ್ಲೆಯಲ್ಲಿ ಜನವರಿ ಕೊನೆಯ ವಾರದಿಂದ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗ್ತಿದ್ದು, ಇದಕ್ಕೆ ಬೇಕಾದ ಪೂರ್ವಸಿದ್ಧತೆಗಳನ್ನು ಆರೋಗ್ಯ ಇಲಾಖೆ ಕೈಗೊಂಡಿದೆ.
ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಲಸಿಕೆ ನೀಡಬೇಕಾದವರ ಪಟ್ಟಿಯನ್ನು ತಯಾರಿಸಲಾಗಿದ್ದು, 3,800 ಮಂದಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. ನಂತರ ಎರಡನೇ ಹಂತದಲ್ಲಿ ಲಸಿಕೆ ನೀಡಲು ಮತ್ತೊಂದು ಪಟ್ಟಿ ತಯಾರಿಸಲಾಗುವುದು. ಲಸಿಕೆಯ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸಂಸದ ಮುನಿಸ್ವಾಮಿ ಇದೇ ವೇಳೆ ಮನವಿ ಮಾಡಿದರು.