ಕೋಲಾರ : ಪಾಕಿಸ್ತಾನದ ಪರ ಘೋಷಣೆ ಕೂಗಿರುವ ಅಮೃತ ಲಿಯೋನಾ ಅರೆಜ್ಞಾನ ಹೊಂದಿರುವಾಕೆ. ತಂದೆ ತಾಯಿಗೆ ಬೇಡವಾದ ಅಮೂಲ್ಯ ನಮ್ಮ ದೇಶಕ್ಕೂ ಬೇಡ ಎಂದು ಸಂಸದ ಎಸ್ ಮುನಿಸ್ವಾಮಿ ಕಿಡಿಕಾರಿದ್ದಾರೆ. ಈ ದೇಶದಲ್ಲಿ ಹುಟ್ಟಿ ಈ ದೇಶದಿಂದ ಅನುಕೂಲಗಳನ್ನ ಪಡೆದು ಪಾಕಿಸ್ತಾನದ ಪರ ಘೋಷಣೆ ಕೂಗುವವರಿಗೆ, ಕಾನೂನಿನಲ್ಲಿ ತಿದ್ದುಪಡಿ ತಂದು ಬಂಧಿಸಬೇಕು ಎಂದರು.
ಪಾಕಿಸ್ತಾನಿ ಏಜೆಂಟ್‌ಗಳನ್ನು ಮೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಪಾಕಿಸ್ತಾನ ಕೊಡುವ ಹಣದಲ್ಲಿ ದೇಶದಲ್ಲಿ ಒಡಕು ಮೂಡಿಸುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದರು. ಪಾಕಿಸ್ತಾನ್ ಜಿಂದಾಬಾದ್ ಎನ್ನುವ ದೇಶದ್ರೋಹಿಗಳು ನಮ್ಮ ದೇಶದಲ್ಲಿಯೇ ಇರಬಾರದು. ದೇಶದ್ರೋಹ ಮಾಡುವವರು ಹಿಂದೂ-ಮುಸ್ಲಿಂ ಯಾರೇ ಆಗಲಿ ಅವರಿಗೆ ಕ್ಷಮೆ ಇಲ್ಲ. ಕಾನೂನು ರೀತಿ ಕಠಿಣ ಶಿಕ್ಷೆ ಆಗಬೇಕೆಂದರು. ಅಲ್ಲದೆ ಅಮೂಲ್ಯಳಿಗೆ ಇನ್ನೂ ಚಿಕ್ಕ ವಯಸ್ಸು, ಯಾರನ್ನೋ ಓಲೈಸುವುದಕ್ಕೆ ಈ ರೀತಿಯ ಕೆಲಸ ಮಾಡುತ್ತಿದ್ದಾರೆ ಎಂದರು.