ETV Bharat / state

ಕುಟುಂಬಸ್ಥರ ವಿರೋಧದ ಮಧ್ಯೆ ಪ್ರೇಮ ವಿವಾಹ.. ತನ್ನ 2 ವರ್ಷ ಮಗಳೊಂದಿಗೆ ತಾಯಿ ನೇಣಿಗೆ ಶರಣು! - ಕೋಲಾರ ಸುದ್ದಿ,

ಕುಟುಂಬಸ್ಥರ ವಿರೋಧದ ಮಧ್ಯಯೂ ಪ್ರೇಮ ವಿವಾಹ ಮಾಡಿಕೊಂಡಿದ್ದ ಮಹಿಳೆಯೊಬ್ಬಳು ತನ್ನ ಎರಡು ವರ್ಷ ಮಗಳೊಂದಿಗೆ ನೇಣಿಗೆ ಶರಣಾಗಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

Mother and child suicide, Mother and child suicide in Kolar, Kolar news, Kolar crime news, ಮಗು ಕೊಂದು ತಾಯಿ ಆತ್ಮಹತ್ಯೆ, ಕೋಲಾರದಲ್ಲಿ ಮಗು ಕೊಂದು ತಾಯಿ ಆತ್ಮಹತ್ಯೆ, ಕೋಲಾರ ಸುದ್ದಿ, ಕೋಲಾರ ಅಪರಾಧ ಸುದ್ದಿ,
ತಾಯಿ ಮಗ
author img

By

Published : Jul 1, 2021, 9:48 AM IST

ಕೋಲಾರ: ಎರಡು ವರ್ಷದ ಮಗುವನ್ನ ಮೊದಲು ಮನೆಯ ಕಿಟಕಿಗೆ ನೇಣು ಹಾಕಿ ಬಳಿಕ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಣಿಘಟ್ಟದ ಚಿನ್ನಾಪುರ ಎಂಬ ಗ್ರಾಮದಲ್ಲಿ ನಡೆದಿದೆ. ಮೃತರು ಭಾನುಪ್ರಿಯಾ ( 21) ಮತ್ತು ಆಕೆಯ ಎರಡು ವರ್ಷದ ಮಗಳು ನಿಧಿ ಎಂದು ಗುರುತಿಸಲಾಗಿದೆ.

Mother and child suicide, Mother and child suicide in Kolar, Kolar news, Kolar crime news, ಮಗು ಕೊಂದು ತಾಯಿ ಆತ್ಮಹತ್ಯೆ, ಕೋಲಾರದಲ್ಲಿ ಮಗು ಕೊಂದು ತಾಯಿ ಆತ್ಮಹತ್ಯೆ, ಕೋಲಾರ ಸುದ್ದಿ, ಕೋಲಾರ ಅಪರಾಧ ಸುದ್ದಿ,
ಭಾನುಪ್ರಿಯ

ಕುಟುಂಬ ಕಲಹದಿಂದ ತಾಯಿ ಮಗುವನ್ನ ನೇಣಿಗೆ ಹಾಕಿದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮೃತ ಭಾನುಪ್ರಿಯಾ ಇದೇ ಗ್ರಾಮದ ಹರೀಶ್ ಕುಮಾರ್ ಎಂಬಾತನನ್ನ ಕಳೆದ ಮೂರು ವರ್ಷಗಳ ಹಿಂದೆ ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದರು. ಈ ಮಧ್ಯೆ ಕುಟುಂಬದಲ್ಲಿ ಆಗಾಗ ಗಲಾಟೆಯಾಗುತ್ತಿದ್ದು, ಇದರಿಂದ ಮನನೊಂದಿದ್ದರು ಎಂದು ತಿಳಿದು ಬಂದಿದೆ.

ನಿಧಿ

ಕೌಟುಂಬಿಕ ಕಲಹಕ್ಕೆ ಬೇಸತ್ತಿದ್ದ ತಾಯಿ ಭಾನುಪ್ರಿಯ ತನ್ನ ಎರಡು ವರ್ಷದ ಹೆಣ್ಣು ಮಗುವನ್ನ ಮನೆಯ ಕಿಟಕಿಯೊಂದಕ್ಕೆ ನೇಣು ಹಾಕಿದ್ದಾರೆ. ಬಳಿಕ ತಾನೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಕೋಲಾರದ ಜಿಲ್ಲಾಸ್ಪತ್ರೆಗೆ ರವಾನಿಸಿದರು. ಈ ಘಟನೆ ಸಂಭಂದ ಕೋಲಾರ‌ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಓದಿ: 'ಲಕ್ಕಿ' ಕಳೆದುಕೊಂಡ ಹರಿಪ್ರಿಯಾ: ವಿದಾಯ ಹೇಳಲು ಮನಸ್ಸು ಒಪ್ಪುತ್ತಿಲ್ಲ ಎಂದು ಭಾವುಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.