ETV Bharat / state

ಹಣದ ವಿಚಾರ: ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಕೊನೆ! - ಕೋಲಾರ ಲೇಟೆಸ್ಟ್​ ಕ್ರೈಂ ನ್ಯೂಸ್​

ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಕಳೆದ ರಾತ್ರಿ ಇಬ್ಬರು ಸ್ನೇಹಿತರ ನಡುವೆ ಹಣಕ್ಕಾಗಿ ಶುರುವಾಗಿದ್ದ ಜಗಳ ಕೊಲೆಯಲ್ಲಿ ಆಂತ್ಯವಾಗಿದೆ.

kolar
ಚೈನ್ ಬಾಬು ಮೃತ ದೇಹ
author img

By

Published : Dec 20, 2020, 5:50 PM IST

ಕೋಲಾರ: ಹಣದ ವಿಚಾರಕ್ಕೆ ಕುಡಿದ ಮತ್ತಿನಲ್ಲಿ ಇಬ್ಬರು ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡಿದೆ.

ಹಣದ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ: ಕೊಲೆಯಲ್ಲಿ ಅಂತ್ಯ

ಬಾಬು ಆಲಿಯಾಸ್​ ಚೈನ್ ಬಾಬು ಕೊಲೆಯಾದ ವ್ಯಕ್ತಿ. ಈತ ಸಣ್ಣಪುಟ್ಟ ಕೆಲಸದ ಜೊತೆಗೆ ರಿಯಲ್ ​ಎಸ್ಟೇಟ್​ ವ್ಯವಹಾರ ಮಾಡಿಕೊಂಡಿದ್ದ. ಇದೇ ಪಟ್ಟಣದ ಜಿಮ್​ ಟ್ರೈನರ್​ ಶಶಿ ಎಂಬಾತನೊಂದಿಗೆ ಒಳ್ಳೆಯ ಸ್ನೇಹಿತನಾಗಿದ್ದ. ಇವರಿಬ್ಬರ ನಡುವೆ ಹಲವು ವರ್ಷಗಳಿಂದ ಸ್ನೇಹವಿತ್ತು ಎನ್ನಲಾಗಿದೆ. ಈ ವೇಳೆ ಹಣದ ವ್ಯವಹಾರಗಳು ನಡೆದಿದ್ದು ಬಾಬು, ಶಶಿ ಬಳಿ ಕೆಲವು ವರ್ಷಗಳ ಹಿಂದೆ 50 ಸಾವಿರ ರೂ. ಹಣ ಪಡೆದಿದ್ದ. ಆದರೆ ಹಣ ಹಿಂದಿರುಗಿಸದೆ ಸತಾಯಿಸುತ್ತಿದ್ದನಂತೆ. ಇದೇ ವಿಚಾರ ಇಬ್ಬರ ನಡುವಿನ ವೈಷಮ್ಯಕ್ಕೆ ಕಾರಣವಾಗಿದೆ.

ಕಳೆದ ರಾತ್ರಿ ಬಸ್​ ನಿಲ್ದಾಣದ ಬಳಿ ಇದ್ದ ಬಾಬುವನ್ನು ಜಿಮ್​ ಟ್ರೈನರ್​ ಶಶಿ ಮಾಲೂರಿನ ಹಳೇ ಸರ್ಕಸ್ ಮೈದಾನದ ಬಳಿ ಕೆರೆದುಕೊಂಡು ಹೋಗಿದ್ದಾನೆ. ಈ ವೇಳೆ ಬಾಬುವಿಗೆ ಚೆನ್ನಾಗಿ ಮದ್ಯ ಕುಡಿಸಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಬು ಸಾಯುವವರೆಗೂ ಅಲ್ಲೇ ಇದ್ದ ಶಶಿ, ನಂತರ ಮಾಲೂರು ಪೊಲೀಸ್​ ಠಾಣೆಗೆ ಶರಣಾಗಿದ್ದಾನೆ.

ಸದ್ಯ ಆರೊಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.