ಕೋಲಾರ: ಶ್ರೀನಿವಾಸಗೌಡರದ್ದು 11 ದಿನದ ತಿಥಿ, ವರ್ಷದ ತಿಥಿ ಎಲ್ಲ ಮಾಡಿ ಮುಗಿಸಿದ್ದೇವೆ ಎಂದು ಕೋಲಾರದಲ್ಲಿ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಆಕ್ರೋಶ ಹೊರಹಾಕಿದ್ದಾರೆ. ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕೋಲಾರ ಶಾಸಕ ಶ್ರೀನಿವಾಸಗೌಡ ವಿರುದ್ದ ಮತ್ತೆ ಹರಿಹಾಯ್ದರು.
ಅವರು ನಮ್ಮ ತಲೆಯಲ್ಲೆ ಇಲ್ಲ, ಅವರ ಎಲ್ಲಾ ತಿಥಿ ಮಾಡಿ ಎಳ್ಳು ನೀರು ಬಿಟ್ಟಾಗಿದೆ ಎಂದು ಹೇಳಿದರು. ಅವರ ಬಗ್ಗೆ ನಾವ್ಯಾಕೆ ಯೋಚನೆ ಮಾಡಬೇಕು. ಅವರ ಬಗ್ಗೆ ಮಾತನಾಡಿ ನನ್ನ ಬಾಯಿ ಹೊಲ ಸಾಗಲಿದೆ ಎಂದರು.
ಅಲ್ಪಸಂಖ್ಯಾತರ ಸಮಾವೇಶದ ಬಳಿಕ ಮುಂದಿನ ದಿನಗಳಲ್ಲಿ ಬಹು ಸಂಖ್ಯಾತರ ಸಮಾವೇಶವನ್ನು ಮಾಡಲಾಗುವುದು, ಚುನಾವಣೆಗೆ ಇನ್ನೂ 7 ತಿಂಗಳು ಬಾಕಿ ಇದೆ. ಇದು ಪ್ರಥಮ ಚಾಲನೆ ಎಲ್ಲ ವರ್ಗದ ಸಮಾವೇಶ ಮಾಡಲಾಗುವುದು. ಕೋಲಾರ ಕ್ಷೇತ್ರದಲ್ಲಿ ನಾನಂತು ಆಕಾಂಕ್ಷಿ ಅಲ್ಲ, ಪಕ್ಷದ ಯಾವುದೇ ಅಭ್ಯರ್ಥಿಗೆ ನಮ್ಮ ಬೆಂಬಲ ಇದೆ. ಈ ಬಾರಿ ಕೋಲಾರ ಕ್ಷೇತ್ರದಿಂದ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಿ ಗೆಲ್ಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಮ್ಸ್ ಆಸ್ಪತ್ರೆ ದುರಂತ: ಸಚಿವ ಸುಧಾಕರ್ ವಿರುದ್ಧ ಶಾಸಕ ಸೋಮಶೇಖರ ರೆಡ್ಡಿ ಅಸಮಾಧಾನ