ಕೋಲಾರ: ದೇವೇಗೌಡರಿಗೆ ಅವರ ಮಕ್ಕಳ ಮೇಲೆ ನಂಬಿಕೆ ಹೋಗಿರುವ ಪರಿಣಾಮ ಸ್ವತಃ ತಾವೇ ರಾಜ್ಯದಲ್ಲಿ ಸಂಚಾರ ಮಾಡುವುದಾಗಿ ಹೇಳಿದ್ದಾರೆಂದು ಕೋಲಾರದಲ್ಲಿ ಶಾಸಕ ಶ್ರೀನಿವಾಸಗೌಡ ಅವರು ವ್ಯಂಗ್ಯವಾಡಿದರು.
ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂ.ಎಲ್.ಸಿ ಚುನಾವಣೆಯಲ್ಲಿ ಹಾಸನ ಒಂದೇ ಒಂದು ಸ್ಥಾನವನ್ನು ಗೆದ್ದಿರುವ ಜೆಡಿಎಸ್‌ನವರು ಮುಂದೆ ರಾಜ್ಯದಲ್ಲಿ 132 ಸ್ಥಾನ ಗೆಲ್ಲುತ್ತಾ ಎಂದು ಪ್ರಶ್ನಿಸಿದರು.
ಜೊತೆಗೆ, ದೇವೇಗೌಡ ಅವರಿಗೆ ಅವರ ಮಕ್ಕಳ ಮೇಲೆ ನಂಬಿಕೆ ಹೋಗಿರುವುದರಿಂದ ದೇವೇಗೌಡರೇ ರಾಜ್ಯದಲ್ಲಿ ಸಂಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಇನ್ನು ಸಂಯುಕ್ತ ಸರ್ಕಾರ ಇದ್ದಾಗ ಕುಣಿಯಲಾರದೆ ನೆಲ ಡೊಂಕು ಎನ್ನುವಂತೆ ಆಡಳಿತ ಮಾಡಿದ್ರು ಎಂದು ಜೆಡಿಎಸ್ ಹಾಗು ಅಪ್ಪ ಮಕ್ಕಳ ವಿರುದ್ದ ಹರಿಹಾಯ್ದರು.
ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಜನ ಮನ್ನಣೆ ಹಾಕುತ್ತಾರೆ ಎಂದ ಅವರು, ಇನ್ನು ಮೇಕೆದಾಟು ವಿಚಾರ ಪಾದಯಾತ್ರೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಡಿಕೆಶಿ ಅವರು ಒಳ್ಳೆಯ ಯೋಜನೆಯನ್ನು ಹಮ್ಮಿಕೊಂಡಿದ್ದು, ಮೇಕೆದಾಟು ಯೋಜನೆ ಕಾಂಗ್ರೆಸ್ನಿಂದಲೇ ಆಗಿದೆ. ಜೆಡಿಎಸ್‌ನವರು ಏನೇನೊ ಹೇಳಿಕೊಳ್ಳುತ್ತಾರೆ. ಅದಕ್ಕೆ ಹೆಚ್ಚಿನ ಆದ್ಯತೆ ಕೊಡುವ ಹಾಗಿಲ್ಲ ಎಂದರು.
ಅಲ್ಲದೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಲ್ಲಿ ಅವಕಾಶ ಸಿಕ್ಕರೆ ಸ್ಪರ್ಧೆ ಮಾಡುತ್ತೇನೆ, ಇಲ್ಲವಾದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಸಂಕ್ರಾಂತಿ ಒಳಗಾಗಿ ಸಚಿವ ಸಂಪುಟ ವಿಸ್ತರಣೆ: ಯತ್ನಾಳ್ ಪುನರುಚ್ಚಾರ