ETV Bharat / state

ಬಿ ಕೆ ಹರಿಪ್ರಸಾದ್ ಹೇಳಿಕೆಗಳಿಂದ ಅವರ ಹಿರಿತನಕ್ಕೆ ಧಕ್ಕೆ: ಶಾಸಕ ಕೆ ವೈ ನಂಜೇಗೌಡ - etv bharat kannada

ಸರ್ಕಾರವನ್ನು ಬೀಳಿಸುವ ಕುರಿತ ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಮಾಲೂರು ಶಾಸಕ ಕೆ ವೈ ನಂಜೇಗೌಡ ಹೇಳಿದ್ದಾರೆ.

mla-ky-nanjegowda-reaction-on-b-k-hariprasad-statement
ಬಿ.ಕೆ.ಹರಿಪ್ರಸಾದ್ ಹೇಳಿಕೆಗಳು ಅವರ ಹಿರಿತನಕ್ಕೆ ಧಕ್ಕೆ: ಶಾಸಕ ಕೆ ವೈ ನಂಜೇಗೌಡ
author img

By

Published : Jul 24, 2023, 6:32 PM IST

Updated : Jul 24, 2023, 7:05 PM IST

ಬಿ ಕೆ ಹರಿಪ್ರಸಾದ್ ಹೇಳಿಕೆ ಶಾಸಕರ ಪ್ರತಿಕ್ರಿಯೆ

ಕೋಲಾರ: ಸಿಂಗಪೂರ್​ನಲ್ಲಿ ಕುಳಿತು ಸರ್ಕಾರ ಕೆಡವಲು ಹೋದರೆ ಅದು ತಿರುಕನ ಕನಸು ಎಂದು ಮಾಲೂರು ಶಾಸಕ ಕೆ ವೈ ನಂಜೇಗೌಡ ಹೇಳಿದರು. ಕೋಲಾರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ನಂಬಿಕೆ ಇಟ್ಟು ಕಾಂಗ್ರೆಸ್​​ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೆ ಸುಮಾರು ವರ್ಷಗಳ ನಂತರ ಕಾಂಗ್ರೆಸ್​​ಗೆ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇವತ್ತು ಮುಖ್ಯಮಂತ್ರಿಗಳು ತುಂಬಾ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.

ಇನ್ನು ಕಾಂಗ್ರೆಸ್​ ಪಕ್ಷ ನೀಡಿದ ಭರವಸೆಗಳನ್ನು ಈಡೇರಿಸಿದೆ. ಇದರಿಂದ ಮುಂದೆ ಲೋಕಸಭಾ ಚುನಾವಣೆಯನ್ನು ಯಾವ ರೀತಿ ಎದುರಿಸಬೇಕು ಎಂದು ಬಿಜೆಪಿಯವರಿಗೆ ತೊಂದರೆಯಾಗಬಹುದು. ಸರ್ಕಾರವನ್ನು ಬೀಳಿಸುವ ಕುರಿತ ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಕಾಂಗ್ರೆಸ್​ ಸರ್ಕಾರ ಮತ್ತು ಕಾಂಗ್ರೆಸ್​ ಪಕ್ಷ ರಾಜ್ಯದಲ್ಲಿ ಬಲಿಷ್ಠವಾಗಿದೆ. ಬಿಜೆಪಿಯವರು ಈ ಬಗ್ಗೆ ಕನಸು ಕಾಣುತ್ತಿದ್ದರೆ ಅದು ನನಸಾಗುವುದಿಲ್ಲ. ರಾಜ್ಯದ ಜನತೆಯ ನಂಬಿಕೆ ಉಳಿಸಿಕೊಳ್ಳಲು, ನಮ್ಮ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಪಕ್ಷದ ನಾಯಕರು ಕೆಲಸ ಮಾಡುತ್ತಿದ್ದಾರೆ ಎಂದರು.

ಇಂದು ಕರ್ನಾಟಕದಿಂದ ಪ್ರಾರಂಭವಾಗುತ್ತಿದೆ, ದೇಶದಲ್ಲಿ ಮತ್ತೆ ಕಾಂಗ್ರೆಸ್​ನ ಪ್ರಧಾನ ಮಂತ್ರಿಯನ್ನು ಕಾಣುವಂತಹ ದಿನ ಇನ್ನೊಂದು ವರ್ಷದ ಒಳಗಡೆಯಾಗುತ್ತದೆ. ಇನ್ನೂ ವಿಧಾನ ಪರಿಷತ್​ ಸದಸ್ಯ ಬಿ. ಕೆ. ಹರಿಪ್ರಸಾದ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಹರಿಪ್ರಸಾದ್ ಅವರು ತುಂಬಾ ಹಿರಿಯರು. ಅವರಿಗೆ ಪಕ್ಷದಲ್ಲಿ ತುಂಬಾ ಅವಕಾಶಗಳು ಸಿಕ್ಕಿದೆ. ಆದರೆ ಈ ರೀತಿಯ ಹೇಳಿಕೆ ಕೊಡುವುದು ಸರಿಯಲ್ಲ. ಎಐಸಿಸಿಯವರೆಗೆ ಹರಿಪ್ರಸಾದ್​ ಅವರ ಬಗ್ಗೆ ಒಳ್ಳೆಯ ಹೆಸರಿದೆ, ಅವರೆಲ್ಲಾ ನಮಗೆ ಮಾರ್ಗದರ್ಶನ ಕೊಡಬೇಕು. ಆದರೆ ಇಂತಹ ಹೇಳಿಕೆಗಳು ಅವರ ಹಿರಿತನಕ್ಕೆ ಧಕ್ಕೆ ತರುವಂತಹ ಕೆಲಸ ಆಗುತ್ತದೆ. ಜೊತೆಗೆ ಇವತ್ತು ಪಕ್ಷದಲ್ಲಿ ಜೂನಿಯರ್ಸ್​ಗಳ​ ಮಾರ್ಗದರ್ಶನವೂ ಅಗತ್ಯವಿದೆ, ಯುವಕರಿಗೆ ಅವಕಾಶ ಕೊಡಬೇಕಾಗಿದೆ ಎಂದರು.

ಸರ್ಕಾರವನ್ನು ಬೀಳಿಸಲು ಯಾರ ಕೈಯಲ್ಲೂ ಆಗುವುದಿಲ್ಲ - ಕೊತ್ತೂರು ಮಂಜುನಾಥ್ : ಮತ್ತೊಂದೆಡೆ, ಕಾಂಗ್ರೆಸ್​ ಸರ್ಕಾರವನ್ನ ಬೀಳಿಸುವ ಶಕ್ತಿ ಯಾರಿಗೂ ಇಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು. ಕೋಲಾರದಲ್ಲಿ ಮಾತನಾಡಿದ ಅವರು, ಸಿಂಗಪೂರ್​ನಲ್ಲಿ ಕುಳಿತು ಸರ್ಕಾರ ಉರುಳಿಸಲು ಪ್ಲಾನ್ ಮಾಡ್ತಿದ್ದಾರೆ ಎಂಬ ಡಿ ಕೆ ಶಿವಕುಮಾರ್​ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು 136 ಜನ ಶಾಸಕರಿದ್ದೇವೆ, ಸರ್ಕಾರವನ್ನು ಬೀಳಿಸಲು ಯಾರ ಕೈಯಲ್ಲೂ ಆಗುವುದಿಲ್ಲ. ಅಲ್ಲದೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇರುವವರೆಗೂ ಯಾರಿಗೂ ಸರ್ಕಾರವನ್ನ ಕದುಲಿಸಲು ಆಗುವುದಿಲ್ಲ ಎಂದರು.

ಅವರಿಬ್ಬರು ಕೋಲಾರದಲ್ಲಿನ ಅಂತರಗಂಗೆ ಬೆಟ್ಟ ಇದ್ದ ಹಾಗೆ ಆ ಬೆಟ್ಟವನ್ನ ಕದುಲಿಸಲು ಆಗುವುದಿಲ್ಲ. ಇನ್ನೂ ಈ ಕುರಿತು ಮಾತನಾಡಿಕೊಳ್ಳುವವರು ಮಾತನಾಡಿಕೊಳ್ಳಲಿ ಸರ್ಕಾರ ಸುಭಿಕ್ಷವಾಗಿದೆ ಎಂದ ಅವರು ಬಿ ಕೆ ಹರಿಪ್ರಸಾದ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಮಳೆ, ಗಾಳಿ ಹೇಗೆ ಹೇಳಿ ಕೇಳಿ ಬರುವುದಿಲ್ಲವೂ ಹಾಗೆ ಬಿ ಕೆ ಹರಿಪ್ರಸಾದ್ ಅವರ ಮಾತು ಎಂದರು.

ಇನ್ನೂ ರಮೇಶ್ ಕುಮಾರ್ ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನದ ಕುರಿತು ಮಾತನಾಡಿದ ಅವರು, ರಮೇಶ್​ ಕುಮಾರ್​ ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನ ಕೊಡಿ ಎಂದು ನಮ್ಮ ಜಿಲ್ಲೆಯ ಶಾಸಕರು ಯಾರೂ ಕೇಳಿಲ್ಲ, ಅವರು ಕೋಲಾರದ ಹುಲಿ. ಅಲ್ಲದೆ ಅವರಿಗೆ ಅಂತಹ ದರಿದ್ರ ಏನೂ ಬಂದಿಲ್ಲ. ಅವರಿಗೆ ಅಧಿಕಾರಕ್ಕಾಗಿ ಕೈಚಾಚುವ ಪರಿಸ್ಥಿತಿ ಇಲ್ಲ. ಅವರ ಮನೆಬಾಗಿಲಿಗೆ ಬಂದದ್ದನ್ನು ಬೇಡ ಎನ್ನುವಂತಹ ವ್ಯಕ್ತಿ. ರಮೇಶ್ ಕುಮಾರ್ ಅವರಿಗೆ ವಿಸಿಲ್ ಹೊಡೆಯುವಷ್ಟರಲ್ಲಿ ಅವರಿಗೆ ಬೇಕಾದ ಸ್ಥಾನ ಸಿಗುತ್ತೆ. ಆದರೆ ಅವರು ನ್ಯಾಯ, ಧರ್ಮ, ನೀತಿಯನ್ನು ಪಾಲನೆ ಮಾಡುವವರು ಎಂದರು. ಅಲ್ಲದೆ ಈ ಬಾರಿಯ ಜನರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಅವರಿಗೆ ಶಕ್ತಿಯಾಗಿ ನಾವೆಲ್ಲರೂ ಇರುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ:ಬಿಜೆಪಿಯ 14 ಕಾರ್ಯಕ್ರಮ ಕೈಬಿಟ್ಟ ಕಾಂಗ್ರೆಸ್​ ಸರ್ಕಾರ .. ಛಲವಾದಿ ನಾರಾಯಣಸ್ವಾಮಿ ಆಕ್ಷೇಪ

Last Updated : Jul 24, 2023, 7:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.