ETV Bharat / state

ಶರತ್​ ಅವರನ್ನ ಪಕ್ಷಕ್ಕೆ ಸೇರಿಸಬಾರದೆಂದು ಎಂಟಿಬಿ ಷರತ್ತು ಹಾಕಿದ್ದಾರೆ: ನಾಗೇಶ್ - ಸಚಿವ ನಾಗೇಶ್ ಲೆಟೆಸ್ಟ್ ನ್ಯೂಸ್​

ಎಂಟಿಬಿ ನಾಗರಾಜ್ ಅವರು ಯಾವುದೇ ಕಾರಣಕ್ಕೂ ಶರತ್​​ರವರನ್ನುಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬಾರದೆಂದು​ ಷರತ್ತು​ ಹಾಕಿದ್ದಾರೆ. ಅದು ಮುಖ್ಯಮಂತ್ರಿಯವರಿಗೆ ಬಿಟ್ಟ ವಿಚಾರ. ಶರತ್​ ಬಿಟ್ಟು ಕೊಟ್ಟಿದ್ರೆ ಎಂಟಿಬಿ ಗೆದ್ದು ಮಂತ್ರಿಯಾಗುತ್ತಿದ್ದರು : ಸಚಿವ ನಾಗೇಶ್

ಸಚಿವ ನಾಗೇಶ್​
Minister Nagesh
author img

By

Published : Dec 14, 2019, 7:57 PM IST

ಕೋಲಾರ : ಸರ್ಕಾರ ಸುಭದ್ರವಾಗುತ್ತಿದಂತೆ ಸಚಿವ ನಾಗೇಶ್ ಅಲರ್ಟ್ ಆಗಿದ್ದು, ಐದಾರು ವರ್ಷಗಳಿಂದ ಬೀಗ ಹಾಕಿದ್ದ ಕಚೇರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಬೀಗ ಹಾಕಿದ್ದ ಕಚೇರಿಗೆ ಚಾಲನೆ ನೀಡಿದ ಸಚಿವ ನಾಗೇಶ್​

ಕಳೆದ‌ ಐದಾರು ವರ್ಷಗಳಿಂದ ಬೀಗ ಹಾಕಿದ್ದ ಕಚೇರಿಗೆ ಇಂದು ಸಚಿವ ನಾಗೇಶ್​ ಭೇಟಿ ನೀಡಿ ಕೆಲಸಕ್ಕೆ ಮುಂದಾದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಎಂಟಿಬಿ ನಾಗರಾಜ್ ಹಾಗೂ ವಿಶ್ವನಾಥ್​ರವರಿಗೆ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ. ಆದರೆ ಗೆದ್ದಿರುವವರಿಗೆ ಮೊದಲ ಆದ್ಯತೆ, ಎಂಎಲ್​ಸಿ ಮಾಡೋದಕ್ಕೂ ಕಾಲಾವಕಾಶ ಬೇಕು. ಗೆದ್ದಿರುವವರೆಲ್ಲಾ ಎಂಟಿಬಿ ಹಾಗೂ ವಿಶ್ವನಾಥ್​ ಪರ ಬ್ಯಾಟಿಂಗ್​ ಮಾಡುತ್ತಿದ್ದಾರೆ ಎಂದರು.

ನಾನು ಕೂಡಾ ಶಿಫಾರಸು​​ ಮಾಡ್ತಿದ್ದೇನೆ. ಅವರೆಲ್ಲಾ ಸೋತರೂ ಗೆದ್ದಂತೆ. ಸರ್ಕಾರ ರಚನೆಯಾಗೋದಕ್ಕೆ ಅವರೇ ಕಾರಣ. ಹಾಗಾಗಿ ಅವರಿಗೆ ಸ್ಥಾನಮಾನ ನೀಡಲಾಗುತ್ತದೆ ಎಂದರು.

ಇನ್ನು ಶರತ್​ ವಿಚಾರವಾಗಿ ಪ್ರತಿಕ್ರಿಯಿಸಿ, ಶರತ್​ ಅವರನ್ನು ಮತ್ತೆ ಪಕ್ಷಕ್ಕೆ ಕರೆ ತರುವ ವಿಚಾರ ನನಗೆ ಗೊತ್ತಿಲ್ಲ. ಎಂಟಿಬಿ ನಾಗರಾಜ್ ಅವರು ಯಾವುದೇ ಕಾರಣಕ್ಕೂ ಶರತ್​​ರವರನ್ನುಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬಾರದೆಂದು​ ಷರತ್ತು​ ಹಾಕಿದ್ದಾರೆ. ಅದು ಮುಖ್ಯಮಂತ್ರಿಯವರಿಗೆ ಬಿಟ್ಟ ವಿಚಾರ. ಶರತ್​ ಬಿಟ್ಟು ಕೊಟ್ಟಿದ್ರೆ ಎಂಟಿಬಿ ಗೆದ್ದು ಮಂತ್ರಿಯಾಗುತ್ತಿದ್ದರು ಎಂದರು.

ಇನ್ನು ಡಿಸಿಎಂ ಹುದ್ದೆ ಬಗ್ಗೆ ಮಾತನಾಡಿ, ಇರುವ ಹುದ್ದೆಗಳನ್ನೇ ತೆಗೆಯಲು ಚಿಂತನೆ ಇದೆ. ಹಾಗೊಂದು ವೇಳೆ ಕೊಟ್ಟರೆ ರಮೇಶ್​ ಜಾರಕಿಹೊಳಿ ಮತ್ತು ಶ್ರೀರಾಮುಲುಗೆ ನೀಡುವ ಬಗ್ಗೆ ಚಿಂತನೆ ಇದೆ. ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸ ಅಡ್ಡಿಯಾಗಲ್ಲ. ಡಿ.22 ರೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದರು.

Intro:ಆಂಕರ್: ಸರ್ಕಾರ ಸುಭದ್ರವಾಗುತ್ತಿದಂತೆ ಸಚಿವ ನಾಗೇಶ್ ಅಲರ್ಟ್ ಆಗಿದ್ದಾರೆ.
ಮೂರು ತಿಂಗಳ ನಂತರ ‌ಕೋಲಾರ ಜಿಲ್ಲಾ‌ ಉಸ್ತುವಾರಿ ಸಚಿವರ ಕಚೇರಿಗೆ ಕೂಡಿಬಂದ ಭಾಗ್ಯ ಕೂಡಿ ಬಂದಿದೆ.Body:ಮೂರು ತಿಂಗಳ‌ ನಂತರ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ತಮ್ಮ ಕಚೇರಿಗೆ ಬೇಟಿ ನೀಡಿ, ಕಚೇರಿಯಲ್ಲಿ ಪೂಜೆ‌ ಪುನಸ್ಕಾರ ಮಾಡಿದ್ರು‌ ಜೊತೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕಾರಿಸಿದ್ರು. ಕಳೆದ‌ ಐದಾರು ವರ್ಷಗಳಿಂದ ಬೀಗಹಾಕಲಾಗಿದ್ದ ಉಸ್ತುವಾರಿ ಸಚಿವರ ಕಚೇರಿ ಬೀಗ ಹಾಕಲಾಗಿದ್ದು ಇಂದು ಚಾಲನೆ ಸಿಕ್ಕಂತಾಗಿದೆ‌. ಇನ್ನು ಇದೇ ವೇಳೆ ಮಾತನಾಡಿದ ಅವರು. ಮುಖ್ಯಂತ್ರಿಗಳು ಎಂಟಿಬಿ ನಾಗರಾಜ್ ಹಾಗೂ ವಿಶ್ವನಾಥ್​ ರವರಿಗೆ ಸ್ಥಾನ ಮಾನ ನೀಡುವ ಭರವಸೆ ನೀಡಿದ್ದಾರೆ, ಆದ್ರೆ ಮೊದಲು ಗೆದ್ದಿರುವವರಿಗೆ ಮೊದಲ ಆಧ್ಯತೆ, ಎಂಎಲ್​ಸಿ ಮಾಡೋದಕ್ಕೂ ಕಾಲಾವಕಾಶ ಬೇಕು,ಗೆದ್ದಿರುವವರೆಲ್ಲಾ ಎಂಟಿಬಿ ಹಾಗೂ ವಿಶ್ವನಾಥ್​ ಪರ ಬ್ಯಾಟಿಂಗ್​ ಮಾಡುತ್ತಿದ್ದಾರೆ ಜೊತೆಗೆ ನಾನು ಕೂಡಾ ರೆಕ್ಮಂಡ್​ ಮಾಡ್ತಿದ್ದೇನೆ ಎಂದು ಹೇಳಿದ್ರು. ಅವರೆಲ್ಲಾ ಸೋತರೂ ಗೆದ್ದಂತೆ, ಸರ್ಕಾರ ರಚನೆಯಾಗೋದಕ್ಕೆ ಅವರೇ ಕಾರಣ ಹಾಗಾಗಿ ಅವರಿಗೆ ಸ್ಥಾನಮಾನ ನೀಡಲಾಗುತ್ತದೆ ಎಂದ್ರು. ಇನ್ನು ಶರತ್​ರನ್ನು ಮತ್ತೆ ಪಕ್ಷಕ್ಕೆ ಕರೆತರುವ ವಿಚಾರ ನನಗೆ ಗೊತ್ತಿಲ್ಲ, ಎಂಟಿಬಿ ನಾಗರಾಜ್ ಅವರನ್ನು ಯಾವುದೇ ಕಾರಣಕ್ಕೆ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬಾರದೆಂದು​ ಕಂಡೀಷನ್​ ಹಾಕಿದ್ದಾರೆ, ಅದೇನಿದ್ರು ಮುಖ್ಯಮಂತ್ರಿಯವರಿಗೆ ಬಿಟ್ಟ ವಿಚಾರ, ಶರತ್​ ಬಿಟ್ಟುಕೊಟ್ಟಿದ್ರೆ ಎಂಟಿಬಿ ಗೆದ್ದು ಮಂತ್ರಿಯಾಗ್ತಿದ್ರು ಎಂದ್ರು.
Conclusion:ಇನ್ನು ಡಿಸಿಎಂ ಹುದ್ದೆ ವಿಚಾರ ಇರುವ ಹುದ್ದೆಗಳನ್ನೇ ತೆಗೆಯಲು ಚಿಂತನೆ ಇದೆ, ಹಾಗೊಂದುವೇಳೆ ಕೊಟ್ಟರೆ ರಮೇಶ್​ ಜಾರಕಿಹೊಳಿ ಮತ್ತು ಶ್ರೀರಾಮುಲುಗೆ ನೀಡುವ ಬಗ್ಗೆ ಚಿಂತನೆ ಇದೆ, ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸ ಅಡ್ಡಿಯಾಗಲ್ಲ 22 ರೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.