ETV Bharat / state

ವಿಶ್ವನಾಥ್​ಗೆ ಪರಿಷತ್​ ಟಿಕೆಟ್​ ನೀಡಲು ಬಿಎಸ್​ವೈಗೆ ಒಲವಿತ್ತು: ಸಚಿವ ಹೆಚ್.ನಾಗೇಶ್ - Minister H. Nagesh talks about H.vishwanath

ಮಾಜಿ ಶಾಸಕ ಹೆಚ್​.ವಿಶ್ವನಾಥ್​ಗೆ ಪರಿಷತ್​ ಟಿಕೆಟ್ ಕೈ ತಪ್ಪಿದಕ್ಕೆ ಅಬಕಾರಿ ಸಚಿವ ಹೆಚ್.ನಾಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

dfsdd
ವಿಶ್ವನಾಥ್​ಗೆ ಪರಿಷತ್​ ಟಿಕೆಟ್​ ನೀಡಲು ಬಿಎಸ್​ವೈಗೆ ಒಲವಿತ್ತು: ಅಬಕಾರಿ ಸಚಿವ ಹೆಚ್.ನಾಗೇಶ್
author img

By

Published : Jun 18, 2020, 5:20 PM IST

ಕೋಲಾರ: ಸಿಎಂ ಯಡಿಯೂರಪ್ಪನವರಿಗೆ ಹೆಚ್​.ವಿಶ್ವನಾಥ್​ಗೆ ಪರಿಷತ್​ ಟಿಕೆಟ್​ ನೀಡಲು ಒಲವಿತ್ತು. ಆದರೆ ಹೈಕಮಾಂಡ್ ವಿಶ್ವನಾಥ್​ ಹೆಸರನ್ನು ಕೈ ಬಿಟ್ಟಿರುವುದು ಬೇಸರ ತಂದಿದೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದ್ದಾರೆ.

ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್​​ಎಸ್​​ಎಲ್​​ಸಿ ಪರೀಕ್ಷೆ ಸಂಬಂಧ ಅಧಿಕಾರಿಗಳ ಸಭೆ ಬಳಿಕ ಮಾತನಡಿದ ಅವರು, ಕೆಲ ಸಮಯದಲ್ಲಿ ರಾಜಕೀಯದಲ್ಲಿ ಏರುಪೇರುಗಳು ಆಗುತ್ತವೆ. ಅದು ಒಬ್ಬರ ನಿರ್ಧಾರ ಅಲ್ಲ. ಕಾರಣಾಂತರಗಳಿಂದ ವಿಶ್ವನಾಥ್ ಹೆಸರನ್ನ ಕೈ ಬಿಡಲಾಗಿದೆ.

ಅಬಕಾರಿ ಸಚಿವ ಹೆಚ್.ನಾಗೇಶ್

ಅವರು ಒಂದು ಪಕ್ಷದ ಅಧ್ಯಕ್ಷರಾಗಿದ್ದವರು. ಅವರ ಆಗಮನದಿಂದ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಆದರೆ ಸ್ವಲ್ಪ ತಾಳ್ಮೆಯಿಂದ ಇದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಭವಿಷ್ಯ ಇದೆ. ಪಕ್ಷಕ್ಕೆ ದುಡಿದವರನ್ನು ಬಿಟ್ಟು ಮೂಲ ಬಿಜೆಪಿಗರಿಗೆ ಇಬ್ಬರಿಗೆ ಟಿಕೆಟ್ ನೀಡುವ ಮೂಲಕ ಕಾಂಪ್ರಮೈಸಿಂಗ್ ಫಾರ್ಮುಲಾ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವರ ಬಳಿ ಮಾತನಾಡಿ ಮನವೊಲಿಸಲು ಪ್ರಯತ್ನಿಸುವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.