ETV Bharat / state

ಅಂಗವಿಕಲತೆ ಶಾಪವಲ್ಲ, ಅದನ್ನು ಮರೆತು ಸಮಾಜದ ಆಸ್ತಿಯಾಗಿ ಬದುಕಬೇಕು: ಸಚಿವ ನಾಗೇಶ್

author img

By

Published : Sep 9, 2020, 2:01 PM IST

ನಗರದ ಶ್ರೀ ಅಂತರಗಂಗೆ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನರಿಗೆ ಯಂತ್ರಚಾಲಿತ ಹಾಗೂ ವಿವಿಧ ಸಾಧನಾ ಸಲಕರಣೆಗಳ ವಿತರಣಾ ಕಾರ್ಯಕ್ರಮ ಮತ್ತು “ಪೋಷಣ್ ಮಾಸಾಚರಣೆ” ಜಿಲ್ಲಾ ಮಟ್ಟದ ಸಮಾರಂಭದ ಉದ್ಘಾಟನೆಯನ್ನು ಸಚಿವ ಹೆಚ್​.ನಾಗೇಶ್ ನೆರವೇರಿಸಿದರು.

minister h nagesh talk about Disabled peoples
ಅಂಗವಿಕಲತೆ ಶಾಪವಲ್ಲ, ಅದನ್ನು ಮರೆತು ಸಮಾಜದ ಆಸ್ತಿಯಾಗಿ ಬದುಕಬೇಕು: ಸಚಿವ ಎಚ್. ನಾಗೇಶ್

ಕೋಲಾರ: ಅಂಗವಿಕಲತೆ ಎಂಬುದು ಶಾಪವಲ್ಲ. ಅಂಗವಿಕಲತೆ ಎಂಬುದನ್ನು ಮರೆತು ತಾವುಗಳು ಸಮಾಜದ ಆಸ್ತಿಯಾಗಿ ಬದುಕಿನ ದಾರಿಯನ್ನು ಕಂಡುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಹೇಳಿದರು.

ಅಂಗವಿಕಲತೆ ಶಾಪವಲ್ಲ, ಅದನ್ನು ಮರೆತು ಸಮಾಜದ ಆಸ್ತಿಯಾಗಿ ಬದುಕಬೇಕು: ಸಚಿವ ನಾಗೇಶ್

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ನಗರದ ಶ್ರೀ ಅಂತರಗಂಗೆ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನರಿಗೆ ಯಂತ್ರಚಾಲಿತ ಹಾಗೂ ವಿವಿಧ ಸಾಧನಾ ಸಲಕರಣೆಗಳ ವಿತರಣಾ ಕಾರ್ಯಕ್ರಮ ಮತ್ತು “ಪೋಷಣ್ ಮಾಸಾಚರಣೆ” ಜಿಲ್ಲಾ ಮಟ್ಟದ ಸಮಾರಂಭದ ಉದ್ಘಾಟನೆಯನ್ನು ಸಚಿವರು ನೆರವೇರಿಸಿದರು.

ವಿಕಲಚೇತನರು ಧೃತಿಗೆಡದೆ ಛಲದಿಂದ ಸಾಧಿಸಿದರೆ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಬಹುದಾಗಿದೆ ಎಂದರು. ಅಲ್ಲದೆ ಸಮಾಜದ ಮುಖ್ಯ ವಾಹಿನಿಗೆ ತರಲು ಸರ್ಕಾರದಿಂದ ಅನೇಕ ಯೋಜನೆಗಳಲ್ಲಿ ವಿವಿಧ ಸೌಲಭ್ಯಗಳನ್ನು ನೀಡುತ್ತಿದ್ದು, ಇದರಿಂದ ಅವರು ಸ್ವಾವಲಂಬಿ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.