ETV Bharat / state

ಶಂಕರ್, ಎಂಟಿಬಿ, ಮುನಿರತ್ನಗೆ ಸಚಿವ ಸ್ಥಾ‌ನ ಸಿಕ್ಕೇ ಸಿಗುತ್ತೆ: ಸಚಿವ ಎಚ್. ನಾಗೇಶ್ - ಸಚಿವ ಸ್ಥಾನ ಆಕಾಂಕ್ಷಿಗಳ ಬಗ್ಗೆ ಸಚಿವ ನಾಗೇಶ್​ ಪ್ರತಿಕ್ರಿಯೆ

ಎಚ್​​. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಗುವುದರ ಕುರಿತು ಗೊತ್ತಿಲ್ಲ, ಆದರೆ ಶಂಕರ್, ಎಂಟಿಬಿ, ಮುನಿರತ್ನಗೆ ಸಚಿವ ಸ್ಥಾ‌ನ ಸಿಕ್ಕೇ ಸಿಗುತ್ತೆ ಎಂದು ಕೋಲಾರದಲ್ಲಿ ಸಚಿವ ಎಚ್​. ನಾಗೇಶ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

minister h nagesh media reaction
ಸಚಿವ ಎಚ್.ನಾಗೇಶ್ ಹೇಳಿಕೆ
author img

By

Published : Jan 8, 2021, 1:36 PM IST

ಕೋಲಾರ: ಧನುರ್ಮಾಸ ಬಳಿಕ ಒಳ್ಳೆಯ ದಿನ ನೋಡಿಕೊಂಡು ಸಚಿವ ಸ್ಥಾನ ನೀಡುತ್ತಾರೆಂದು ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಹೇಳಿದರು.

ಸಚಿವ ಎಚ್.ನಾಗೇಶ್ ಹೇಳಿಕೆ

ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಕ್ರಾತಿ ಹಬ್ಬದ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಧನುರ್ಮಾಸದ ಬಳಿಕ ಒಳ್ಳೆಯ ದಿನ ನೋಡಿಕೊಂಡು ಆಕಾಂಕ್ಷಿಗಳಿಗೆ ಸಚಿವ ಸ್ಥಾನ ನೀಡುತ್ತಾರೆ. ಎಂ.ಎಲ್.ಸಿ ಶಂಕರ್ ಹೇಳಿದಂತೆ ಹಲವರ ತ್ಯಾಗದಿಂದ ಸರ್ಕಾರ ರಚನೆಯಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದರು.

ಇನ್ನು ಎಚ್​​. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಗುವುದರ ಕುರಿತು ಗೊತ್ತಿಲ್ಲ. ಆದರೆ ಶಂಕರ್, ಎಂಟಿಬಿ, ಮುನಿರತ್ನಗೆ ಸಚಿವ ಸ್ಥಾ‌ನ ಸಿಕ್ಕೇ ಸಿಗುತ್ತೆ ಎಂದರು. ಜೊತೆಗೆ ಸಂಕ್ರಾಂತಿ ಹಬ್ಬದ ನಂತರ ಯಾವಾಗ ಬೇಕಾದ್ರೂ ಸಚಿವ ಸಂಪುಟ ವಿಸ್ತರಣೆ ಆಗಬಹುದು ಎಂದರು.

ಇದನ್ನೂ ಓದಿ: 2021-22 ಬಜೆಟ್ ತಯಾರಿ: ವಿತ್ತ & ಉದ್ಯಮಿ ತಜ್ಞರ ಜತೆ ಪ್ರಧಾನಿ ಮೋದಿ ಇಂದು ಮಹತ್ವದ ಚರ್ಚೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.