ETV Bharat / state

ಯತ್ನಾಳ್​ಗೆ ನೋಟಿಸ್​ ನೀಡಿರುವುದು ಸಮಿತಿಗೆ ಬಿಟ್ಟ ವಿಚಾರ: ಬೈರತಿ ಬಸವರಾಜ್ - ಭೈರತಿ ಬಸವರಾಜ್ ಲೇಟೆಸ್ಟ್ ನ್ಯೂಸ್

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರವನ್ನು ಸತತವಾಗಿ ಟೀಕೆ ಮಾಡುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​​ಗೆ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಈ ಕುರಿತಂತೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಪ್ರತಿಕ್ರಿಯೆ ನೀಡಿದ್ದು, ನೋಟಿಸ್​ ಜಾರಿ ಮಾಡಿರುವುದು ಸಮಿತಿಗೆ ಸಂಬಂಧಿಸಿದ ವಿಚಾರ ಎಂದರು.

ಭೈರತಿ ಬಸವರಾಜ್
Minister Byrathi Basavaraj
author img

By

Published : Feb 13, 2021, 2:35 PM IST

Updated : Feb 13, 2021, 2:56 PM IST

ಕೋಲಾರ: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್​ ಅವರಿಗೆ ನೋಟಿಸ್​ ನೀಡಿರುವುದು ಕೇಂದ್ರ ಸಚಿವ ಸಮಿತಿಗೆ ಸಂಬಂಧಿಸಿದ ವಿಷಯ. ಸಮಿತಿ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಬದ್ಧವಾಗಿರುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದರು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಪ್ರತಿಕ್ರಿಯೆ ನೀಡಿರುವುದು

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರಿಗೆ ಮಾತನಾಡುವ ಚಟವಿರುತ್ತದೆ. ಹಾಗಾಗಿ ಈ ರೀತಿ ಮಾತನಾಡುತ್ತಾರೆ. ನೋಟಿಸ್​​ ನೀಡಿರುವುದು ಕೇಂದ್ರ ಸಚಿವ ಸಂಪುಟ ಸಮಿತಿಗೆ ಬಿಟ್ಟ ವಿಷಯ ಎಂದರು.

ಓದಿ: ಸರ್ಕಾರಕ್ಕೆ ಮುಜುಗರ ತಂದ ಆರೋಪ; ಶಾಸಕ ಯತ್ನಾಳ್​ಗೆ ಪಕ್ಷದ ಶೋಕಾಸ್ ನೋಟಿಸ್

ಇನ್ನು ರಾಜ್ಯವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಬೇಕು ಎಂದು ಸಿಎಂ ಯಡಿಯೂರಪ್ಪನವರು ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ತಮ್ಮದೇ ಸರ್ಕಾರ ಬರಬೇಕೆಂದು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಅದರ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ ಹೊರತು, ಯಾರೋ ಸಣ್ಣದಾಗಿ ಮಾತನಾಡುತ್ತಾರೆಂದು ನಾವು ಅವರ ಬಗ್ಗೆ ಮಾತನಾಡುವ ಪ್ರಮೇಯ ಇಲ್ಲ ಎಂದರು.

Last Updated : Feb 13, 2021, 2:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.