ETV Bharat / state

ಅಕ್ರಮ ಸಂಬಂಧ ಗ್ರಾಮದಲ್ಲಿ ಬಹಿರಂಗ: ಕೋಲಾರದಲ್ಲಿ ಕತ್ತು ಕೊಯ್ದು ವ್ಯಕ್ತಿಯ ಕೊಲೆ - Kolar

ಅಕ್ರಮ ಸಂಬಂಧ ಬಯಲು ಮಾಡಿದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Nov 3, 2021, 5:25 PM IST

ಕೋಲಾರ: ಅಕ್ರಮ ಸಂಬಂಧದ ವಿಷಯವನ್ನು ಗ್ರಾಮದಲ್ಲಿ ಬಹಿರಂಗಪಡಿಸಿದ ಕಾರಣಕ್ಕೆ ವ್ಯಕ್ತಿಯನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಪೂವಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಾರಾಯಣ ಸ್ವಾಮಿ (52) ಕೊಲೆಯಾದ ವ್ಯಕ್ತಿ. ಅಭಿಷೇಕ್ ಆರೋಪಿ. ಅಭಿಷೇಕ್ ಗ್ರಾಮದ ಮಹಿಳೆಯೊಬ್ಬಳ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಈ ವಿಷಯವನ್ನು ಕಣ್ಣಾರೆ ಕಂಡಿದ್ದ ಎನ್ನಲಾದ ನಾರಾಯಣ ಸ್ವಾಮಿ, ಆತನಿಗೆ ಬುದ್ದಿವಾದ ಹೇಳಿದ್ದ. ಅಲ್ಲದೇ ಈ ವಿಚಾರ ಗಾಮದಲ್ಲಿ ಬಹಿರಂಗವಾಗಿತ್ತು.

ನಾರಾಯಣ ಸ್ವಾಮಿ ಮೃತ ದೇಹ
ನಾರಾಯಣ ಸ್ವಾಮಿ ಮೃತದೇಹ

ಬಳಿಕ ಅಕ್ರಮ ಸಂಬಂಧ ಹೊಂದಿದ್ದ, ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದರಿಂದಾಗಿ ಕೋಪಗೊಂಡ ಅಭಿಷೇಕ್ ಈ ವಿಚಾರವನ್ನು ಬಯಲು ಮಾಡಿದ್ದು, ಆಕೆಯ ಆತ್ಮಹತ್ಯೆಗೆ ನಾರಾಯಣ ಸ್ವಾಮಿ ಕಾರಣ ಎಂದು ಹಗೆ ಸಾಧಿಸಿದ್ದ. ಅದರಂತೆ ಅಭಿಷೇಕ್ ನಿನ್ನೆ (ಮಂಗಳವಾರ) ಹಸು ಮೇಯಿಸಲು ಗ್ರಾಮದ ಹೊರವಲಯದ ಬಳಿ ಹೋಗಿ, ಮನೆಗೆ ಹಿಂತಿರುಗುವ ಸಂದರ್ಭದಲ್ಲಿ ನಾರಾಯಣ ಸ್ವಾಮಿ ಕತ್ತು ಕೊಯ್ದು ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೇತಮಂಗಲ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಅಭಿಷೇಕ್​​ನನ್ನು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.