ಕೋಲಾರ: ಜಿಲ್ಲೆಯಲ್ಲಿ 140 ಬಾರ್‌ಗಳಿದ್ದು, ಈವರೆಗೆ 8 ಬಾರ್‌ಗಳಲ್ಲಿ ಮದ್ಯ ಕಳ್ಳತನವಾಗಿದೆ, ಸುಮಾರು 6 ಕಳ್ಳಭಟ್ಟಿ ಹಾಗೂ ಸೇಂದಿ ಪ್ರಕರಣಗಳು ದಾಖಲಾಗಿವೆ ಎಂದು ಅಬಕಾರಿ ಅಧೀಕ್ಷಕಿ ಸುಮಿತಾ ತಿಳಿಸಿದರು.
ಕೋಲಾರ ಅಬಕಾರಿ ಅಧೀಕ್ಷಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಿತಾ, ಜಿಲ್ಲೆಯಲ್ಲಿ ಲಾಕ್ಡೌನ್ ಆದ ಬಳಿಕ ಮದ್ಯಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಆದ್ರೆ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನ ಬಂದ್ ಮಾಡಲಾಗಿದೆ. ಬಂದ್ ಬಳಿಕ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಮದ್ಯ ಸಿಗದ ಹಿನ್ನೆಲೆಯಲ್ಲಿ ಕಳೆದೊಂದು ವಾರದಲ್ಲಿ ಈವರೆಗೂ 6 ಕಳ್ಳಭಟ್ಟಿ ಹಾಗೂ ಸೇಂದಿ ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಹೇಳಿದರು.
ಒಟ್ಟು 180 ಲೀಟರ್ನಷ್ಟು ಬೆಲ್ಲದ ಕೊಳೆ, 3 ಲೀಟರ್ ಸೇಂದಿ ಹಾಗೂ 35 ಲೀಟರ್ನಷ್ಟು ಕಳ್ಳಭಟ್ಟಿಯನ್ನು ವಶಪಡಿಸಿಕೊಂಡಿದ್ದು, ಮೂರು ಜನರನ್ನು ಬಂಧಿಸಲಾಗಿದೆ. ಲಾಕ್ಡೌನ್ ಬಳಿಕ ಸುಮಾರು ಏಳುವರೆ ಲಕ್ಷದಷ್ಟು ಮದ್ಯ ಕಳುವಾಗಿದೆ ಎಂದು ಸ್ಪಷ್ಟಪಡಿಸಿದ್ರು.