ETV Bharat / state

ಕಾಂಗ್ರೆಸ್ ರೈತರ ಟವೆಲ್​ಗಳನ್ನು ಹಾಕಿಕೊಂಡು ಬೀದಿಗೆ ಬಂದಿದೆ: ಹೆಚ್​ಡಿಕೆ - Kolar Latest Update News

ವಿಧಾನ ಪರಿಷತ್​​ನ ಒಂದು ಮಸೂದೆಯನ್ನು ಅಂಗೀಕಾರ ಮಾಡುವ ಹಿನ್ನೆಲೆಯಲ್ಲಿ ಕೆಲವು ವರ್ಗದ ಜನರು ಜೆಡಿಎಸ್ ಪಕ್ಷ ರೈತರಿಗೆ ದ್ರೋಹ ಮಾಡಿದೆ ಎಂಬ ಅರೋಪಗಳನ್ನು ಮಾಡಿದ್ದಾರೆ. ಆದರೆ ಜೆಡಿಎಸ್ ರೈತರಿಗೆ ಯಾವುದೇ ಕಾರಣಕ್ಕೂ ದ್ರೋಹ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

Kolar
ಕಾಂಗ್ರೆಸ್ ರೈತರ ಟವೆಲ್​ಗಳನ್ನ ಹಾಕಿಕೊಂಡು ಬೀದಿಗೆ ಬಂದಿದೆ: ಹೆಚ್​ಡಿಕೆ ವ್ಯಂಗ್ಯ
author img

By

Published : Dec 9, 2020, 12:18 PM IST

ಕೋಲಾರ: ಕಾಂಗ್ರೆಸ್​ ಚಿಹ್ನೆಯ ಟವೆಲ್​ಗೆ ಬೆಲೆ ಇಲ್ಲದ ಕಾರಣ, ಇಂದು ಆ ಪಕ್ಷ ರೈತರ ಟವೆಲ್​ಗಳನ್ನು ಹಾಕಿಕೊಂಡು ಬೀದಿಗೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯ ಮಾಡಿದರು.

ಕಾಂಗ್ರೆಸ್ ರೈತರ ಟವೆಲ್​ಗಳನ್ನು ಹಾಕಿಕೊಂಡು ಬೀದಿಗೆ ಬಂದಿದೆ: ಹೆಚ್​ಡಿಕೆ

ಇಂದು ಕೋಲಾರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ವಿಧಾನ ಪರಿಷತ್​​ನ ಒಂದು ಮಸೂದೆಯನ್ನು ಅಂಗೀಕಾರ ಮಾಡುವ ಹಿನ್ನೆಲೆಯಲ್ಲಿ ಕೆಲವು ವರ್ಗದ ಜನರು ಜೆಡಿಎಸ್ ಪಕ್ಷ ರೈತರಿಗೆ ದ್ರೋಹ ಮಾಡಿದೆ ಎಂಬ ಆರೋಪಗಳನ್ನು ಮಾಡಿದ್ದಾರೆ. ಆದರೆ ಜೆಡಿಎಸ್ ರೈತರಿಗೆ ಯಾವುದೇ ಕಾರಣಕ್ಕೂ ದ್ರೋಹ ಮಾಡುವ ಪ್ರಶ್ನೆಯೇ ಇಲ್ಲ. ಅಲ್ಲದೇ ನಾನು ಮುಖ್ಯಮಂತ್ರಿಯಾಗಿದ್ದಾಗ ಸುಮಾರು 25 ಸಾವಿರ ಕೋಟಿ ರೂ ರೈತರ ಸಾಲಮನ್ನಾ ಮಾಡಿದ್ದೆ. ಆಗ ಯಾವ ರೈತ ಮುಖಂಡರೂ ಕುಮಾರಸ್ವಾಮಿ ಅವರಿಂದ ಅನುಕೂಲ ಆಗಿದೆ ಎಂದು ಹೇಳಿಲ್ಲ. ಇವತ್ತು ಸರ್ಟಿಫಿಕೇಟ್ ಕೊಡುತ್ತಿದ್ದಾರೆ' ಎಂದು ರೈತ ಮುಖಂಡರನ್ನು ಪ್ರಶ್ನಿಸಿದರು.

ಓದಿ: ಸಿ.ಎಂ.ಇಬ್ರಾಹಿಂ ಭೇಟಿಯಾದ ಹೆಚ್​ಡಿಕೆ: ಪಕ್ಷಕ್ಕೆ ಆಹ್ವಾನ!

'ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯಕದ ಕುರಿತು ಕಾಂಗ್ರೆಸ್​ ಮೊದಲು ವಿಷಯವನ್ನು ತಿಳಿದುಕೊಳ್ಳಲಿ. ಪ್ರಾರಂಭದಲ್ಲಿ ಈ ವಿಧೇಯಕಕ್ಕೆ ದೇವೇಗೌಡರು ಮತ್ತು ನಾನು ವಿರೋಧ ವ್ಯಕ್ತಪಡಿಸಿದ್ದೆವು. ಸರ್ಕಾರ ನಂತರ ವಿಧೇಯಕದಲ್ಲಿ ಕೆಲ ಬದಲಾವಣೆ ಮಾಡಿತು. ಇದಕ್ಕೆ ನಾವು ಕಾರಣ. ತಿದ್ದುಪಡಿಯ ಮಾರಕ ಅಂಶಗಳ ಕುರಿತು ಗಮನ ಸೆಳೆದಾಗ, ಸರ್ಕಾರ ಕೆಲವು ವಿಚಾರಗಳನ್ನು ಕೈಬಿಡುವ ತೀರ್ಮಾನ ಮಾಡಿದರು. ‌ಇದಕ್ಕೆ‌ ನಾವು ಸರ್ಕಾರಕ್ಕೆ ಬೆಂಬಲ ನೀಡಿದೆವು' ಎಂದರು.

ಓದಿ: ಇಮೇಜ್ ಇದ್ರೆ ಅಲ್ವಾ ಡೌನ್ ಆಗೋದು: ಕುಮಾರಸ್ವಾಮಿಗೆ ಗುಟುರು ಹಾಕಿದ 'ಟಗರು'!

'ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿಯೇ ಕೆಲ ಅಂಶಗಳನ್ನು ಜಾರಿ ಮಾಡಬೇಕು ಎಂದು ನಿರ್ಧಾರ ಮಾಡಿದ್ದರು. ಇದೀಗ ಕಾಂಗ್ರೆಸ್‌ನ ಚಿಹ್ನೆಯ ಟವೆಲ್​ಗೆ ಬೆಲೆ ಇಲ್ಲ ಎಂದು ರೈತರ ಟವೆಲ್​ಗಳನ್ನು ಹಾಕಿಕೊಂಡು ಬೀದಿಗೆ ಬಂದಿದ್ದಾರೆ. ಅಲ್ಲದೆ ಜೆಡಿಎಸ್ ಪಕ್ಷದ ಕೆಲ ಸಲಹೆಗಳನ್ನು ಸ್ವೀಕಾರ ಮಾಡಿ ಕೆಲವು ನಿರ್ಧಾರಗಳನ್ನು ಬದಲಾವಣೆ ಮಾಡಿಕೊಳ್ಳುತ್ತಿರುವುದಕ್ಕೆ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದೇವೆ' ಎಂದು ಕುಮಾರಸ್ವಾಮಿ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.